ಕರ್ನಾಟಕ ಬುಡಕಟ್ಟು ಸಂರಕ್ಷಣಾ ಸಮಿತಿ ರಾಜ್ಯಾಧ್ಯಕ್ಷರು ಅಮರೇಶ ಕಾಮನಕೇರಿ ರವರ ಮೇಲೆ ಹಲ್ಲೆ : ಧನರಾಜಗೌಡ ಆಕ್ರೋಶ.

ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ 
UDAYAVANI NEWS 
ಯಾದಗಿರಿ, ಡಿಸೆಂಬರ್ 06 : ರಾಜ್ಯ ಕರ್ನಾಟಕ ಬುಡಕಟ್ಟು ಸಂರಕ್ಷಣಾ ಸಮಿತಿ ರಾಜ್ಯಾಧ್ಯಕ್ಷರಾದ ಅಮರೇಶ ಕಾಮನಕೇರಿ ಅವರ ಮೇಲಿನ ಹಲ್ಲೆಗೆ ತಳವಾರ ಸಮುದಾಯದ ಮುಖಂಡ ಧನರಾಜಗೌಡ ಆಕ್ರೋಶ.

ರಾಜ್ಯ ಕರ್ನಾಟಕ ಬುಡಕಟ್ಟು ಸಂರಕ್ಷಣಾ ಸಮಿತಿ ರಾಜ್ಯಾಧ್ಯಕ್ಷರಾದ ಅಮರೇಶ ಕಾಮನಕೇರಿ ಅವರ ಮೇಲಿನ ಹಲ್ಲೆಗೆ ತಳವಾರ ಸಮುದಾಯದ ಮುಖಂಡ ಧನರಾಜಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಸುರಪೂರ ಮತ್ತು ಹುಣಸಗಿಯಲ್ಲಿ ಹಿಂದುಳಿದ ವರ್ಗಗಳಿಗೆ ರಕ್ಷಣೆ ಇಲ್ಲದಂತಿದ್ದು,ಇಲ್ಲಿಯ ಅಧಿಕಾರಿಗಳು,ರಾಜಕಾರಣಿಗಳು ಒಂದಾಗಿ ತಳವಾರ ಸಮುದಾಯವನ ಸಂವಿಧಾನ ಬದ್ದ ಹಕ್ಕನ್ನು ಕಸಿದುಕೊಳ್ಳುತ್ತಿದ್ದಾರೆ.ತಳವಾರ ಜಾತಿಯ ಜನರಿಗೆ ಎಸ್.ಟಿ ಪ್ರಮಾಣ ಪತ್ರ (ಸರ್ಟಿಫಿಕೇಟ್ ) ಕೊಡಿಸಲು ಶ್ರಮಿಸುತ್ತಿರುವ ಹೋರಾಟಗಾರರನ್ನು ಹತ್ತಿಕ್ಕುವ ಹುನ್ನಾರ ನಡೆಯುತ್ತಿದೆ ಎಂದು ತಳವಾರ ಸಮುದಾಯದ ಮುಖಂಡ ಧನರಾಜಗೌಡ ಮಾದ್ಯಮಕ್ಕೆ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Post a Comment

Previous Post Next Post