ವಕೀಲರ ಸಂಘದ ಉಪಾಧ್ಯಕ್ಷರಾದ ಅಮರೇಗೌಡ ಪಾಟೀಲರಿಗೆ ವಾಲ್ಮೀಕಿ ಸಮಾಜದಿಂದ ಸನ್ಮಾನ

ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ
UDAYAVANI NEWS 
ಮಸ್ಕಿ, ಡಿಸೆಂಬರ್ 22 : ಮಸ್ಕಿಯಲ್ಲಿ ನೂತನವಾಗಿ ಪ್ರಾರಂಭವಾಗಿರುವ ತಾಲ್ಲೂಕು ಸಂಚಾರಿ ನ್ಯಾಯಾಲಯದ ನೂತನ ಪದಾಧಿಕಾರಿಗಳನ್ನು ಇತ್ತೀಚಿಗೆ ಆಯ್ಕೆ ಮಾಡಿದ್ದು,ತಾಲ್ಲೂಕು ನ್ಯಾಯಾವಾದಿಗಳ ಸಂಘದ ಉಪಾಧ್ಯಕ್ಷರಾಗಿ ಅಮರೇಗೌಡ ಪಾಟೀಲ್ ತಿಮ್ಮಾಪೂರ ಆಯ್ಕೆಯಾಗಿದ್ದು, ತಾಲೂಕ ವಾಲ್ಮೀಕಿ ಸಮಾಜದ ವತಿಯಿಂದ ಶಾಲು ಹೊದಿಸಿ,ಹೂವಿನ ಹಾರ ಹಾಕುವ ಮೂಲಕ ಗೌರವ ಸಲ್ಲಿಸಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ವೆಂಕಟೇಶ ಕೋಳಬಾಳ,ದೊಡ್ಡ ಜಕ್ಕಪ್ಪ,ವೆಂಕಟೇಶ ಹುಲ್ಲೂರು,ಮೌನೇಶ ನಾಯಕ ಮಸ್ಕಿ, ಸಿದ್ದಾರ್ಥ ಪಾಟೀಲ್ ಹಾಲಾಪೂರ, ಹನುಮನಗೌಡ ಬೊಮ್ಮನಹಾಳ,ಚನ್ನಪ್ಪ,ಹನುಮೇಶ ತೋರಣದಿನ್ನಿ ಸೇರಿದಂತೆ ಇನ್ನಿತರರು ಇದ್ದರು.

Post a Comment

Previous Post Next Post