ವಕೀಲರ ಸಂರಕ್ಷಣಾ ಕಾಯ್ದೆ ಅಧಿವೇಶನದಲ್ಲಿ ಪಾಸ್ ಮಾಡಿ ಜಾರಿಗೊಳಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ

ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ
UDAYAVANI NEWS 
ಮಸ್ಕಿ, ಡಿಸೆಂಬರ್ 23 : ವಕೀಲರ ಸಂರಕ್ಷಣಾ ಕಾಯ್ದೆಯನ್ನು ಅಧಿವೇಶನದಲ್ಲಿ ಬೇಗನೆ ಪಾಸು ಮಾಡಿ ಜಾರಿಗೊಳಿಸುವಂತೆ ತಹಶೀಲ್ದಾರರ ಮುಖಾಂತರ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ರವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ವಿವಿಧ ನ್ಯಾಯಾಲಯಗಳಲ್ಲಿ ವಿವಿಧ ಇಲಾಖೆಗಳಲ್ಲಿ ಕಕ್ಷಿದಾರರ ಸಾರ್ವಜನಿಕ ಪರ ಕಾನೂನುಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವಾಗ ಕೆಲ ಪಟ್ಟ ಭದ್ರ ಹಿತಾಸಕ್ತಿಗಳು ವಕೀಲರ ಮೇಲೆ ಹಾಗಾಗಿ ಹಲ್ಲೆಗಳನ್ನು ಮಾಡುತ್ತಿರುವಾಗ ಇಂತಹ ಪರಿಸ್ಥಿತಿಗಳಿಂದ ವಕೀಲರು ಕಾರ್ಯನಿರ್ವಣೆಗೆ ಅತ್ಯಂತ ಕಠಿಣ ಪರಿಸ್ಥಿತಿ ಆಗಿರುತ್ತದೆ.
ಇಂದಿನ ಈ ಪರಿಸ್ಥಿತಿಯಲ್ಲಿ ವಕೀಲರ ಸಂರಕ್ಷಣೆ ಅತಿ ಅವಶ್ಯಕವಾಗಿರುತ್ತದೆ ಬೇಗನೆ ಅಧಿವೇಶನದಲ್ಲಿ 2022 ರಲ್ಲಿ ಸಿದ್ಧಗೊಂಡಿರುವ ವಕೀಲರ ಸಂರಕ್ಷಣೆ ಕಾಯ್ದೆ ಎರಡನ್ನು ಪಾಸು ಮಾಡಿ ಜಾರಿಗೆಗೋಳಿಸಲು ತಾಲೂಕ ನ್ಯಾಯವಾದಿಗಳ ಸಂಘ ಮಸ್ಕಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ರಾಜ್ಯದಲ್ಲಿರುವ ವಕೀಲರುಗಳು ಮಸ್ಕಿ ತಾಲೂಕ ತಹಶೀಲ್ದಾರರಿಗೆ ತಮ್ಮ ವಕೀಲ ವೃತ್ತಿಯ ಸಮಸ್ಯೆಯ ಕುರಿತು ಎಳೆ ಎಳೆಯಾಗಿ ತಿಳಿಸಿ ನಂತರ ಕವಿತಾ.ಆರ್ ತಹಶೀಲ್ದಾರರ ಮುಖಾಂತರ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ರವರಿಗೆ ಗುರುವಾರ ಮನವಿ ಪತ್ರ ಸಲ್ಲಿಸಿದರು.


ಇದೇ ಸಂದರ್ಭದಲ್ಲಿ

ವಕೀಲರ ಸಂಘದ ಅಧ್ಯಕ್ಷರಾದ ಈಶಪ್ಪ ದೇಸಾಯಿ, ಉಪಾಧ್ಯಕ್ಷರಾದ ಅಮರೇಗೌಡ ತಿಮ್ಮಾಪುರ, ಕಾರ್ಯದರ್ಶಿಯಾದ ಆನಂದ್ ರಾಥೋಡ್, ಖಜಾಂಚಿಯಾದ ಬಸವರಾಜ ಡೋಣಮರಡಿ, ಹಿರಿಯ ವಕೀಲರುಗಳಾದ ರಾಮಣ್ಣ ನಾಯಕ್,ವೀರಭದ್ರಪ್ಪ, ಸೋಮಶೇಖರ್, ಮಲ್ಲಪ್ಪ ನಾಗರಬೆಂಚಿ, ಶಿವರಾಜ್ ವಕೀಲರುಗಳು ಹಾಜರಿದ್ದರು.




Post a Comment

Previous Post Next Post