ಶಾಲಾ ಮಕ್ಕಳ,ಪೋಷಕರ ಆತಂಕವನ್ನು ದೂರ ಮಾಡಿದ ಸಿ.ಮುನಿರಾಜು

ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ 
ವರದಿ : ಡಿ.ವಿ ರಮೇಶ್ ಕುಮಾರ್
ಚೇಳೂರು, ಡಿಸೆಂಬರ್ 22 : ತಾಲ್ಲೂಕಿನ ಪೋಲನಾಯಕನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಭತ್ತಲಪಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಬಡಮಕ್ಕಳಿಗೆ ಶಾಪದಂತೆ ಕಾಡುತ್ತಿದ್ದ ಶಾಲಾ ಕಟ್ಟಡದ ಮೇಲ್ಚಾವಣಿಯನ್ನು ಮತ್ತು ಶಿಥಿಲಗೊಂಡ ಗೋಡೆಗಳನ್ನು ದುರಸ್ತಿ ಮಾಡಿಸಿ ಗ್ರಾಮದ ಎಲ್ಲರ ಮೆಚ್ಚುಗೆಗೆ ಪಾತ್ರರಾದ ಸಮಾಜಸೇವಕ ಸಿ.ಮುನಿರಾಜು.
ತಾಲೂಕಿನಾದ್ಯಂತ ಬಹಳಷ್ಟು ಸರಕಾರಿ ಶಾಲೆಗಳ ಕೊಠಡಿಗಳ ದುರಸ್ತಿ ಬಗ್ಗೆ ಯಾವ ರಾಜಕಾರಣಿಯೂ ಅಷ್ಟೊಂದು ಗಮನ ಹರಿಸಿದಂತೆ ಕಾಣುತ್ತಿಲ್ಲ. ಒಂದು ಕಡೆ ಬಾಯ್ತೆರೆದು ಆಹುತಿಗೆ ಆಹ್ವಾನಿಸುತ್ತಿರುವ ಕೊಠಡಿಗಳಾದರೆ ಮತ್ತೊಂದೆಡೆ ಮೇಲ್ಛಾವಣಿಯ ಕಾಂಕ್ರೀಟ್‌ ಯಾವಾಗ?ಯಾರ? ತಲೆ ಮೇಲೆ ಬೀಳುತ್ತದೆಯೋ ಎಂಬ ಭಯಗಳಲ್ಲೆ ಪಾಠ-ಪ್ರವಚನಗಳು ನಡೆಯುತ್ತಿರುವ ಪರಿಸ್ಥಿತಿ ಇದೆ.ಇಂತಹ ಸಮಸ್ಯೆಗಳ ಕಡೆ ಯಾವೊಬ್ಬ ಜನಪ್ರತಿನಿಧಿಗಳಾಗಲಿ ಹಾಗೂ ಅಧಿಕಾರಿಗಳಾಗಲಿ ತುರ್ತು ದುರಸ್ತಿ (ರಿಪೇರಿ)ಮಾಡುವ ಗೋಜಿಗೆ ಹೋಗದಿರುವುದು ವಿಪರ್ಯಾಸವೇ. ಆದರೆ ಇತ್ತೀಚಿನ ದಿನಗಳಲ್ಲಿ ಸಿ.ಮುನಿರಾಜುರವರ ಬಳಿ ಗ್ರಾಮದ ಕೆಲ ಯುವಕರು ಅದರ ಬಗ್ಗೆ ತಿಳಿಸಿದ್ದಾರೆ. ಕೂಡಲೇ ಅದನ್ನು ಸರಿಪಡಿಸುವುದಾಗಿ ಹೇಳಿ ಅದನ್ನು ಅತಿ ಶೀಘ್ರದಲ್ಲೇ,ಹಲವಾರು ವರ್ಷಗಳಿಂದ ಯಾರು ಬಗೆಹರಿಸಲಾಗದ ಮಕ್ಕಳ ಕಲಿಕೆಗೆ ಅಡ್ಡಿಯಾಗುತ್ತಿದ್ದ ಸಮಸ್ಯೆಯನ್ನು ಬಗೆಹರಿಸಿಕೊಟ್ಟು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇನ್ನೊಂದು ವಾರದೊಳಗೆ ಬಣ್ಣವನ್ನು ಹಾಕಿಸುತ್ತೆನೆಂದು ಭರವಸೆಕೊಟ್ಟ ಸಮಾಜ ಸೇವಕ‌ ಸಿ.ಮುನಿರಾಜು ಅವರಿಗೆ ಗ್ರಾಮದ ಯುವಕರು ಧನ್ಯವಾದಗಳು ತಿಳಿಸಿ ಅವರ ಈ ಒಂದು ಸಮಾಜಮುಖಿ ಸೇವೆಗೆ ಶ್ಲಾಘನೀಯ ಮತ್ತು ಅಭಿನಂದನೆಗಳು ಅರ್ಪಿಸಿದ ಗ್ರಾಮಸ್ಥರು.
ಈ ಸಂಧರ್ಭದಲ್ಲಿ ಯುವ ಮುಖಂಡರಾದ ಬಾಬುರೆಡ್ಡಿ 
ಕೆ ಎ,SDMC ಅಧ್ಯಕ್ಷರಾದ BK ಸೀನ
ಗ್ರಾಮಸ್ಥರಾದ ರಾಮಾಂಜಿ,ರಾಯಪ್ಪ,ನರೇಶ್, ಮೂರ್ತಿ,ಪಾಪಿರೆಡ್ಡಿ ,ವೆಂಕಟೇಶ್ ಇನ್ನಿತರರು ಉಪಸ್ಥಿತಿರಿದ್ದರು.



Post a Comment

Previous Post Next Post