UDAYAVANI NEWS
ಮಸ್ಕಿ,ಡಿಸೆಂಬರ್ 22 : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಮಸ್ಕಿ ತಾಲೂಕಿನ ಮೆದಿಕಿನಾಳ ಗ್ರಾಮದ ಚೌಡೇಶ್ವರಿ ದೇವಾಸ್ಥಾನ ಅಭಿವೃದ್ಧಿಗೆ 1,50,000 ರೂಪಾಯಿ ಮೊತ್ತದ ಡಿ.ಡಿ ವಿತರಣೆ ಮಾಡಲಾಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ
ಮಸ್ಕಿ ತಾಲೂಕಿನ ಯೋಜನಾಧಿಕಾರಿಗಳಾದ
ಶ್ರೀಮತಿ ಶಾಲಿನಿ.G ಮೆದಿಕಿನಾಳ ಗ್ರಾಮದ ಚೌಡೇಶ್ವರಿ ದೇವಾಸ್ಥಾನ ಅಭಿವೃದ್ಧಿಗೆ 1,50,000 ರೂಪಾಯಿ ಮೊತ್ತದ ಡಿ.ಡಿ ವಿತರಣೆ ಮಾಡಲಾಯಿತು. ಧರ್ಮಸ್ಥಳದಿಂದ ಬಂದಿರುವ ಈ ಮೊತ್ತ ನಮಗೆ ಧರ್ಮಸ್ಥಳದಿಂದ ಬಂದಿರುವ ಪ್ರಸಾದವೇ ಎಂದು ಜನರು ಒಪ್ಪಿಗೆ ಮೆಚ್ಚಿಸಿದರು ಹಾಗೂ ಧರ್ಮಸ್ಥಳ ಯೋಜನೆ ಸಹಕಾರ ಮಾಡುವ ಕೆಲಸವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೆಲಸ ಮಾಡುತ್ತಿದೆ ಎಂದು ಸಂಘದ ಸದಸ್ಯರು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ರಾಜಣ್ಣ ಪರಡ್ಡಿ, ಮಲ್ಕನಗೌಡ, ಶಿವಪುತ್ರಪ್ಪ ತಾತಾ, ಊರಿನ ಮುಖಂಡರು, ಕಮಿಟಿ ಅಧ್ಯಕ್ಷರಾದ ಗುಂಡಪ್ಪ ವಿಠೋಬ ಹಾಗೂ ಸ್ವ ಸಹಾಯ ಸಂಘದ ಸದಸ್ಯರು ಹಾಜರಿದ್ದರು.
Tags
ಜಿಲ್ಲಾ ಸುದ್ದಿಗಳು