ಗುಂಡ ಗ್ರಾಮ ಪಂಚಾಯಿತಿ ಮುಂಭಾಗ ಆಡಳಿತ ವಿಫಲ ಕುರಿತು ಡಿ.5 ಧರಣಿ


ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ 
UDAYAVANI NEWS 
ಮಸ್ಕಿ, ಡಿಸೆಂಬರ್ 03 : ತಾಲೂಕಿನ ಗುಂಡ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ವಿಫಲ ಆಡಳಿತ ಕುರಿತು ಕರ್ನಾಟಕ ದಲಿತ ಸಂಘರ್ಷ ಸಮಿತಿ (ದಾದಾಸಾಹೇಬ್ ಡಾಕ್ಟರ್ ಏನ್ ಮೂರ್ತಿ ಸ್ಥಾಪಿತ) ತಾಲೂಕು ಸಮಿತಿ ವತಿಯಿಂದ ಗುಂಡ ಗ್ರಾ.ಪಂ ಕಾರ್ಯಾಲಯದ ಮುಂದೆ ಡಿಸೆಂಬರ್ 5 ರಂದು ಧರಣಿ ಸತ್ಯಾಗ್ರಹ.


ಕರ್ನಾಟಕ ದಲಿತ ಸಂಘರ್ಷ ಸಮಿತಿ (ದಾದಾಸಾಹೇಬ್ ಡಾಕ್ಟರ್ ಏನ್ ಮೂರ್ತಿ ಸ್ಥಾಪಿತ) ತಾಲೂಕು ಸಮಿತಿ ಮಸ್ಕಿಯು ಗುಂಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಾದ ಗುಂಡ ಭೋಗಾಪುರ, ಹೊಗರನಾಳ, ಗುಡಿಹಾಳ,ಹೊಕ್ರಾಣಿ, ಬಾಗಲಾಪೂರ, ಸಂಕನಾಳ, ರತ್ನಾಪೂರ, ರತ್ನಾಪುರ ಹಟ್ಟಿ,ಮಂಗನ ಹಳ್ಳಿ, ಗಂಟೇರ ಹಟ್ಟಿ ಈ ಗ್ರಾಮಗಳಲ್ಲಿ ಸಾರ್ವಜನಿಕರು ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಸರಿಯಾದ ಕುಡಿಯುವ ನೀರು, ಶೌಚಾಲಯ ಚರಂಡಿ ನಿರ್ಮಾಣ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಪ್ರತಿ ವರ್ಷ ಗ್ರಾಮ ಪಂಚಾಯಿತಿಗೆ ಬಂದಂತಹ ಲಕ್ಷಾಂತರ ರುಪಾಯಿ ಹಣವನ್ನು ದುರುಪಯೋಗ ಪಡಿಸಲಾಗಿದೆ.
ಪ್ರತಿಯೊಂದು ಗ್ರಾಮಗಳಲ್ಲಿ ಸರಿಯಾದ ವಿದ್ಯುತ್ ದೀಪಗಳಿಲ್ಲದೆ ಕತ್ತಲಲ್ಲಿ ಜನ ಬದುಕುತ್ತಿದ್ದಾರೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಪಂಚಾಯತಿಗೆ ಸರಿಯಾಗಿ ಬರದೇ ಸಾರ್ವಜನಿಕರ ಕೈಗೆ ಸಿಗದೇ ಬೇಕಾಬಿಟ್ಟಿ ಕೆಲಸ ನಿರ್ವಹಿಸುತ್ತಿದ್ದಾರೆ.
ಕೇಂದ್ರ ಸ್ಥಾನದಲ್ಲಿ ವಾಸ ಮಾಡದೆ ಸರಕಾರಿ ನಿಯಮ ಉಲ್ಲಂಘಿಸಿದ್ದಾರೆ. ಸಾರ್ವಜನಿಕರು ಪಂಚಾಯತಿ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಹಕ್ಕು ಅಧಿ ನಿಯಮದಡಿ ಮಾಹಿತಿ ಕೇಳಿದರೆ ಮಾಹಿತಿ ನೀಡದೆ ಉಡಾಫೆ ಉತ್ತರ ನೀಡುತ್ತಾರೆ. ಹುಲ್ಲೇಶ ಮತ್ತು  ಅಯ್ಯಪ್ಪ ಎಂಬ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಮಾಹಿತಿ ಹಕ್ಕು ನೀಡಿ ಎಂದು ಅರ್ಜಿ ಸಲ್ಲಿಸಿ ಎರಡು ತಿಂಗಳು ಕಳೆದ ಮೇಲೆ ಅಸ್ಪಷ್ಟ ಮಾಹಿತಿ ಕಳುಹಿಸಿ ನಿಯಮ ಉಲ್ಲಂಘನೆ ಮಾಡಿದ್ದಾರೆ. ಇಂತಹ ಅಧಿಕಾರಿಗಳಿಂದ ಸಾರ್ವಜನಿಕರಿಗೆ ಅನಾನುಕೂಲ ಉಂಟಾಗಿದೆ. ಇವರ ಕಾಲಾವಧಿಯಲ್ಲಿ ಸರಕಾರಿ ಯೋಜನೆಗಳ ಹಣವನ್ನು ದುರುಪಯೋಗಪಡಿಸಿಕೊಂಡು ಬಾರಿ ಭ್ರಷ್ಟಾಚಾರ ನಡೆಸಿದ್ದು ಈ ಕುರಿತು ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಲು ಮತ್ತು ಸಾರ್ವಜನಿಕರಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ಒತ್ತಾಯಿಸಿ ದಿನಾಂಕ 05-12-2022 ರಂದು ಗುಂಡ ಗ್ರಾಮ ಪಂಚಾಯತ್ ಕಾರ್ಯಾಲಯದ ಮುಂದೆ ಕಾನೂನು ಕ್ರಮಕ್ಕೆ ಒತ್ತಾಯಿಸಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ದಾದಾ ಸಾಹೇಬ್ ಎನ್ ಮೂರ್ತಿ ಸ್ಥಾಪಿತ ಬಣವು ತುರುವಿಹಾಳ ಪೋಲೀಸ್ ಠಾಣೆಗೆ ಮುಂಚೂಣಿ ಮಾಹಿತಿಗಾಗಿ ಹಾಗೂ ಧರಣಿ ಮಾಡುವ ದಿನದಂದು ರಕ್ಷಣೆ ಒದಗಿಸಲು ಠಾಣಾಧಿಕಾರಿಗಳ ಮಾಹಿತಿಗಾಗಿ ಕಛೇರಿಗೆ ಪ್ರತಿಯನ್ನು ನೀಡಲಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯು ಉದಯವಾಣಿ ನ್ಯೂಸ್ ಮಾದ್ಯಮಕ್ಕೆ ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ

ಜಮದಗ್ನಿ ಗೋನಾಳ ಅಧ್ಯಕ್ಷರು, ಮೌನೇಶ್ ಮೆದಿಕಿನಾಳ ಉಪಾಧ್ಯಕ್ಷರು, ಸಿದ್ದಪ್ಪ ಉದ್ಬಾಳ ಯು ಉಪಾಧ್ಯಕ್ಷರು, ಅನಿಲ್ ಕುಮಾರ್ ಮುದಬಾಳ ಕಾರ್ಯಾಧ್ಯಕ್ಷರು, ಮರಿಸ್ವಾಮಿ ಮುದಬಾಳ ಪ್ರಧಾನ ಕಾರ್ಯದರ್ಶಿ, ಸುರೇಶ್ ಸಂತೇಕೆಲ್ಲೂರು ಸಂ. ಕಾ, ಹುಲ್ಲೇಶ್ ಹೊಕ್ರಾಣಿ ಸಹ ಕಾರ್ಯದರ್ಶಿ,ಅಯ್ಯಪ್ಪ ಹೊಕ್ರಾಣಿ ಸಹ ಕಾರ್ಯದರ್ಶಿ, ಶ್ರೀಕಾಂತ್ ಚಿಕ್ಕ ಕಡಬೂರು ಗುಡುದೂರು ಹೋ. ಅಧ್ಯಕ್ಷರು, ಸುಮನ್ ಮೆದಿಕಿನಾಳ, ಸುಭಾಷ್ ಹಿರೇ ಕಡಬೂರು ಹಾಲಾಪುರ ಹೋ. ಅಧ್ಯಕ್ಷರು ಸೇರಿದಂತೆ ಇನ್ನಿತರರು ಇದ್ದರು.

Post a Comment

Previous Post Next Post