ಪತ್ರಕರ್ತ ಹಾಗೂ ರಾಜ್ಯ ಬುಡುಕಟ್ಟು ಸಂರಕ್ಷಣಾ ಸಮಿತಿಯ ರಾಜ್ಯಾಧ್ಯಕ್ಷ ಅಮರೇಶ ಕಾಮನಕೇರಿ ಮೇಲೆ ಹಲ್ಲೆ ಮತ್ತು ಜೀವ ಬೆದರಿಕೆ : ದುಷ್ಕರ್ಮಿ ಗಳ ವಿರುದ್ದ ಕ್ರಮ ಜರುಗಿಸುವಂತೆ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ

ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ 
UDAYAVANI NEWS 
ಜೇವರ್ಗಿ, ಡಿಸೆಂಬರ್ 03 : ಪತ್ರಕರ್ತ ಹಾಗೂ ರಾಜ್ಯ ಬುಡುಕಟ್ಟು ಸಂರಕ್ಷಣಾ ಸಮಿತಿ (ರಿ) ರಾಜ್ಯಾಧ್ಯಕ್ಷ ಅಮರೇಶ ಕಾಮನಕೇರಿ ಮೇಲೆ ಹಲ್ಲೆ ಮಾಡಿದವರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸುವಂತೆ ತಾಲೂಕು ದಂಡಾಧಿಕಾರಿ ಜೇವರ್ಗಿ ಇವರ ಮುಖಾಂತರ ಬಸವರಾಜ ಬೊಮ್ಮಾಯಿ
ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ ಇವರಿಗೆ ಮನವಿ ಪತ್ರ ಸಲ್ಲಿಸಿದರು.

ಪತ್ರಕರ್ತ ಹಾಗೂ ಬುಡುಕಟ್ಟು ಸಂರಕ್ಷಣಾ ಸಮಿತಿಯ ರಾಜ್ಯಾಧ್ಯಕ್ಷ ಅಮರೇಶ ಕಾಮನಕೇರಿ ಅವರ ಮೇಲೆ ಹುಣಸಗಿಯಲ್ಲಿ ಸುಮಾರು (20) ಇಪ್ಪತ್ತು ಜನ ಅನ್ಯಜಾತಿಯವರು ಸಾರ್ವಜನಿಕವಾಗಿ ವಿನಾಕಾರಣ ಎಳೆದಾಡಿ ಮಾರಾಣಾಂತಿಕ ಹಲ್ಲೆ ಮಾಡಿರುತ್ತಾರೆ ಮತ್ತು ಜೀವ ಬೇದರಿಕೆ ಹಾಕಿರುತ್ತಾರೆ ಆದ್ದರಿಂದ ಹಲ್ಲೆ ಮಾಡಿದವರನ್ನು ಬಂಧಿಸಬೇಕು ಹಾಗೂ ಅವರ ಮೇಲೆ ಸೂಕ್ತ ಕಾನೂನು ಕ್ರಮವನ್ನು ಜರುಗಿಸಬೇಕು ಮತ್ತು ಅಮರೇಶ ಕಾಮನಕೇರಿಯವರಿಗೆ ಹಾಗೂ ಅವರ ಕುಟುಂಬಕ್ಕೆ ಸೂಕ್ತ ಬದ್ರತೆ ಒದಗಿಸಬೇಕೆಂದು ಜೇವರ್ಗಿ ತಾಲೂಕಿನ ತಳವಾರ ಸಮಾಜಬಾಂಧವರು ಜೇವರ್ಗಿ ತಾಲೂಕು ದಂಡಾಧಿಕಾರಿ ಇವರ ಮುಖಾಂತರ ಬಸವರಾಜ ಬೊಮ್ಮಾಯಿ
ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ ಇವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.

ರಾಮು ಚನ್ನೂರ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕಲಬುರ್ಗಿ,ಭಗವಂತರಾಯ ಬೇಣ್ಣೂರ ಸಮಾಜ ಮುಖಂಡರು,ಸಂತೋಷ ಜೈನಾಪೂರ ಸಮಾಜ ಮುಖಂಡರು,ಮರೇಪ್ಪ ಕೋಳಕೂರ ನಗರ ಘಟಕ ಅಧ್ಯಕ್ಷರು ಜೇವರ್ಗಿ, ಭೀಮು ತಳವಾರ ಸಮಾಜ ಮುಖಂಡರು,ಕಾಂತಪ್ಪ ಕಲ್ಲುರ ಸಮಾಜ ಮುಖಂಡರು,
ಸಿದ್ದನಗೌಡ ಮಾವನೂರ ಸಮಾಜ ಮುಖಂಡರು,
ಬಸವರಾಜ ನಾಯ್ಕೋಡಿ ಸಮಾಜ ಮುಖಂಡರು,
ಗುರಣ್ಣ ಜೈನಾಪೂರ ಸಮಾಜ ಮುಖಂಡರು,
ಕರ್ಣಪ್ಪ ಶಾಬಾದಿ ಸಮಾಜ ಮುಖಂಡರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Post a Comment

Previous Post Next Post