ಶಿವಕುಮಾರ ನಾಟೀಕಾರ(ಹವಳಗಾ) 2023ರ ಅಫಜಲಪುರ ವಿಧಾನಸಭಾ ಚುನಾವಣೆಯ ಜೆಡಿಎಸ್ ಪಕ್ಷದ ಪ್ರಬಲ ಆಕಾಂಕ್ಷಿ

ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ 
UDAYAVANI NEWS 
ಅಫಜಲಪುರ, ಡಿಸೆಂಬರ್ 20 : ಕಳೆದ 13 ವರ್ಷಗಳ ನಿರಂತರ ಜನರ ಜೊತೆಗಿನ ಒಡನಾಟ ಮತ್ತು ಜನರಿಗಾಗಿ ಮಾಡಿದ ಹೋರಾಟದ ಬದುಕನ್ನು ಗುರುತಿಸಿ ಇವತ್ತು ಜೆಡಿಎಸ್ ಪಕ್ಷ ನನ್ನನು ಮುಂಬರುತ್ತಿರುವ 2023 ರ ವಿಧಾನಸಭಾ ಚುನಾವಣೆಗೆ ಮೊದಲ ಪಟ್ಟಿಯಲ್ಲಿಯೇ ನನ್ನನು ಪಕ್ಷದ ಅಧಿಕೃತ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದೆ.
ಇದಕ್ಕೆ ಕಾರಣೀಕರ್ತರಾದ ಮಾಜಿ ಪ್ರಧಾನಿಗಳಾದ ಹೆಚ್. ಡಿ. ದೇವೆಗೌಡ ಅವರಿಗೂ, ಮಾಜಿ ಮುಖ್ಯಮಂತ್ರಿಗಳಾದ ಹೆಚ್. ಡಿ. ಕುಮಾರಸ್ವಾಮಿ ಅವರಿಗೂ, ರಾಜ್ಯಾಧ್ಯಕ್ಷರಾದ ಸಿ.ಎಂ. ಇಬ್ರಾಹಿಂ ಅವರಿಗೂ, ಮಾಜಿ ಸಚಿವರಾದ ಬಂಡೆಪ್ಪ ಖಾಶೆಂಪೂರ ಅವರಿಗೂ ಮತ್ತು ವಿಶೇಷವಾಗಿ ಇಲ್ಲಿಯವರೆಗೂ ನನ್ನ ಯಶಸ್ಸಿಗೆ ಕಾರಣರಾದ ಹಲವಾರು ಜನ ನನ್ನ ಹಿತೈಷಿಗಳಿಗೆ, ನನಗೆ ಜೊತೆಯಾಗಿ ದುಡಿದ ನನ್ನ ತಂಡದ ಎಲ್ಲಾ ಸದಸ್ಯರಿಗೂ ಧನ್ಯವಾದಗಳನ್ನು ತಿಳಿಸುತ್ತಿದ್ದೇನೆ.
ಕಳೆದ ಮಾರ್ಚ್ 6 ನೇ ತಾರೀಖಿನಂದು ಅಫಜಲಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿಯೇ ಕುಮಾರಣ್ಣನವರು ನನ್ನನ್ನು ಪಕ್ಷದ ಅಭ್ಯರ್ಥಿಯನ್ನಾಗಿ ಘೋಷಿಸಿದ್ದರು, ಮತ್ತೆ ಇತ್ತೀಚೆಗೆ ಡಿಸೆಂಬರ್ 8 ರಂದು ಅಫಜಲಪುರದಲ್ಲಿ ನಡೆದ ನನ್ನ ಪಾದಯಾತ್ರೆಯ ಸಮಾರೋಪ ಸಮಾವೇಶದಲ್ಲಿಯೂ ಅದನ್ನು ಪುನರುಚ್ಚರಿಸಿದ್ದರು.


ಇವತ್ತಿನ ಈ ಸಾರ್ಥಕ ಘಳಿಗೆಗೆ ಇಡೀ ಕ್ಷೇತ್ರದ ಜನರು ನೀವು ನನಗೆ ತೋರಿಸಿದ ಕಾಳಜಿ, ನನಗೆ ನೀಡಿದ ಸಹಕಾರವೇ ಕಾರಣ ಪ್ರತಿ ಹಂತದಲ್ಲಿಯೂ ನೀವು ನನ್ನ ಬೆನ್ನಿಗೆ ನಿಂತಿದ್ದೀರಿ ನನ್ನ ಹೋರಾಟಗಳಿಗೂ, ನನ್ನ ಎಲ್ಲಾ ತೀರ್ಮಾನಗಳಿಗೂ ಬೆನ್ನೆಲುಬಾಗಿ ನಿಂತು ನನ್ನ ಹೋರಾಟಗಳಿಗೆ ಶಕ್ತಿ ತುಂಬಿ ಗೆಲ್ಲಿಸಿದ್ದೀರಿ. ಇತ್ತೀಚೆಗೆ ನಾನು ಅಫಜಲಪುರ ರಾಜಕೀಯ ಇತಿಹಾಸದಲ್ಲಿ ಹೊಸ ದಾಖಲೆ ಬರೆದ 50 ದಿನಗಳ, 525 ಕಿ. ಮೀ. ನ "ಹೊಸ ಮುಖ ಹೊಸ ಭರವಸೆ" ಬನ್ನಿ ನಡೆಯೋಣ ಹೊಸ ಅಫಜಲಪುರ ಕಟ್ಟೋಣ ಎಂದು ಪಾದಯಾತ್ರೆ ಮಾಡಿದಾಗ ನೀವು ಅಭೂತಪೂರ್ವವಾಗಿ ನನ್ನನ್ನು ಸ್ವಾಗತಿಸಿ ಪಾದಯಾತ್ರೆಯನ್ನು ಯಶಸ್ವಿಗೊಳಿಸಿದ್ದೀರಿ.

ಇಲ್ಲಿಯವರೆಗೂ ನನಗೆ ಸಹಕಾರ ನೀಡಿ ಬೆಳೆಸಿದ ನೀವುಗಳು, ಅಫಜಲಪುರ ಮತಕ್ಷೇತ್ರದ ಅಭಿವೃದ್ದಿಗಾಗಿ, ಬದಲಾವಣೆಗಾಗಿನ ನನ್ನ ಹೋರಾಟವನ್ನೂ ಗೆಲ್ಲಿಸುವಿರೆಂದು ನಂಬಿದ್ದೇನೆ.

ಮುಂಬರುವ 2023ರ ಚುನಾವಣೆಯಲ್ಲಿ ಈ ನಿಮ್ಮ ಮನೆಯ ಮಗನಿಗೆ ಮತ ನೀಡುವ ಮೂಲಕ ಆಶಿರ್ವದಿಸುವಿರೆಂಬ ನಂಬಿಕೆಯಲ್ಲಿದ್ದೇನೆ ಇಂತಿ ತಮ್ಮ ಪ್ರೀತಿಯ ಮನೆ ಮಗ ಶಿವಕುಮಾರ ನಾಟೀಕಾರ(ಹವಳಗಾ)2023ರ ಅಫಜಲಪುರ ವಿಧಾನಸಭಾ ಚುನಾವಣೆಯ ಜೆಡಿಎಸ್ ಪಕ್ಷದ ಪ್ರಬಲ ಅಭ್ಯರ್ಥಿ.


Post a Comment

Previous Post Next Post