ರಾಜ್ಯ ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದ ರಾಯಚೂರು ಖೋ ಖೋ ತಂಡ


ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ
UDAYAVANI NEWS 
ಮಸ್ಕಿ, ಡಿಸೆಂಬರ್ 20 : ರಾಯಚೂರು ಅಮೇಚೂರು ಖೋ ಖೋ ತಂಡ ರಾಜ್ಯ ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದೆ, ಕರ್ನಾಟಕ ರಾಜ್ಯ ಅಮೇಚೂರ್ ಖೋ ಖೋ ಸಂಸ್ಥೆ ಬೆಂಗಳೂರು ಹಾಗೂ ಬಾಗಲಕೋಟೆ ಜಿಲ್ಲೆ ಅಮೆಚೂರ್ ಖೋ ಖೋ ಸಂಸ್ಥೆ ಬಾಗಲಕೋಟೆ ಇವರ ಸಹಯೋಗದಲ್ಲಿ ಹುನುಗುಂದ ತಾಲೂಕಿನ ಅಮರಾವತಿಯಲ್ಲಿ ನಡೆದ ರಾಜ್ಯಮಟ್ಟದ ಪುರುಷರ ಹೊನಲು ಬೆಳಕಿನ ಖೋ ಖೋ ಪಂದ್ಯಾವಳಿಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು ಹನ್ನೆರಡು ತಂಡಗಳು ಭಾಗವಹಿಸಿದವು ಅದರಲ್ಲಿ ನಮ್ಮ ರಾಯಚೂರು ಜಿಲ್ಲಾ ತಂಡವು ಭಾಗವಹಿಸಿತ್ತು ಲೀಗ್ ಹಂತದಲ್ಲಿ ದಾವಣಗೆರೆ ಮತ್ತು ಬೆಳಗಾವಿ ತಂಡಗಳನ್ನು ಸುಲಭವಾಗಿ ಸೋಲಿಸಿ ನಾಕೌಟ್ ಹಂತಕ್ಕೆ ತಲುಪಿತು ಇದರಲ್ಲಿ ಕ್ವಾಟರ್ ಫೈನಲ್ ಪಂದ್ಯದಲ್ಲಿ ಧಾರವಾಡ ತಂಡವನ್ನು ಇನಿಂಗ್ಸ್ ನಿಂದ ಸೋಲಿಸಿ ಸೆಮಿ ಫೈನಲ್ ತಲುಪಿತು ಸೆಮಿ ಫೈನಲ್ ಪಂದ್ಯದಲ್ಲಿ ಪ್ರಬಲ ಹಾವೇರಿ ತಂಡವನ್ನು ಸುಮಾರು ಹತ್ತು ಅಂಕಗಳಿಂದ ಸೋಲಿಸಿ ಫೈನಲ್ ಗೆ ಮೊದಲ ಬಾರಿಗೆ ತಲುಪಿತು, ಫೈನಲ್ ಪಂದ್ಯದಲ್ಲಿ ಪ್ರಬಲ ಬಾಗಲಕೋಟೆ ತಂಡದ ವಿರುದ್ಧ ಸೆಣೆಸಾಡಿದರು ವಿಜಯ ಮಾಲೆ ಧರಿಸಲಾಗಲಿಲ್ಲ ಆದರೂ ಅಲ್ಲಿ ನಡೆದಿದ್ದ ಸಾವಿರಾರು ಜನ ಪ್ರೇಕ್ಷಕರ ಮನ ಗೆದ್ದಿತು ಇದರಿಂದ ಬಾಗಲಕೋಟೆ ಪುರುಷರ ತಂಡ ಪ್ರಥಮ ಸ್ಥಾನ ಪಡೆದರೆ ರಾಯಚೂರು ತಂಡ ಮೊದಲ ಬಾರಿಗೆ ದ್ವಿತೀಯ ಸ್ಥಾನ ಪಡೆದು ಟ್ರೋಪಿಗೆ ಮುತ್ತಿಕ್ಕಿತು ಇದಕ್ಕೆ ಸಹಕರಿಸಿದ ರಾಯಚೂರು ಜಿಲ್ಲಾ ಅಮೆಚೂರ್ ಖೋ ಖೋ ಸಂಸ್ಥೆಯ ಅಧ್ಯಕ್ಷರಾದ ಶ್ರೀಯುತ ಡಾ . ಮಲ್ಲಿಕಾರ್ಜುನ ಇತ್ಲಿ ಹಾಗೂ ಮಸ್ಕಿ ತಾಲೂಕ ಅಮೆಚೂರ್ ಖೋ ಖೋ ಸಂಸ್ಥೆಯ ಅಧ್ಯಕ್ಷರಾದ ಶ್ರೀಯುತ ಮೌನೇಶ್ ನಾಯಕ್ ಹಾಗೂ ಅವರ ತಂಡ ಹಾಗೂ ಜಿಲ್ಲಾ ನಿರ್ದೇಶಕರಾದ ಮಸೂದ್ ಪಾಷ, ಮಹಾಂತೇಶ ಮಸ್ಕಿ, ಪ್ರಸನ ಪಾಟೀಲ, ಅಮರೇಶ ಬ್ಯಾಳಿ ನಾಗರಾಜ ಯಂಬಲದ, ಶರಣಬಸವ ಸೊಪ್ಪಿಮಠ,ಆನಂದ ದೆಶಮುಖ ಮಲ್ಲಿಕಾರ್ಜುನ ಹಿರೇಮಠ್ ಆರ್ ಜೆ ಪಾಟೀಲ್ ರಾಘವೇಂದ್ರ ಭರತ ಕುಮಾರ್ ಇನ್ನುಳಿದ ಎಲ್ಲಾ ಸದಸ್ಯರಿಗೂ ಅಭಿನಂದನೆಗಳು ತಿಳಿಸಿದ್ದಾರೆ.ಈ ಕ್ರೀಡಾ ಪಟುಗಳಿಗೆ ಜಿಲ್ಲಾ ಸಂಸ್ಥೆಯ ಕಾರ್ಯದರ್ಶಿ ಸಂಪತ ಹಾಗೂ ತಾಲೂಕಾ ಕಾರ್ಯದರ್ಶಿಯಾದ ರವೀಂದ್ರ, ಸಹ ಕಾರ್ಯದರ್ಶಿ ಮೋಹನ್ ಬಾವಿಮನಿ, ಶಿವಪ್ಪ ಹಸಮಕಲ್ ದಿನಾಂಕ11-12-2022ರಂದು ಜಿಲ್ಲಾ ಮಟ್ಟದ ಆಯ್ಕೆ ಪ್ರಕ್ರಿಯೆ ನಡೆಸಿ ಆಯ್ಕೆಯಾದ ಕ್ರೀಡಾಪಟುಗಳಿಗೆ ತರಬೇತಿ ನೀಡಿದ್ದರು.

ಪ್ರಥಮ ಬಾರಿಗೆ ದ್ವಿತೀಯ ಸ್ಥಾನ ಪಡೆದ ಜಿಲ್ಲಾ ತಂಡದ ಎಲ್ಲಾ ಕ್ರೀಡಾಪಟುಗಳಿಗೆ ಸಂಸ್ಥೆಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.

Post a Comment

Previous Post Next Post