ನೈಜ ಫಲಾನುಭವಿಗಳನ್ನು ಗುರುತಿಸಿ ಭೂಮಿಯನ್ನು ವಿತರಿಸಿ:ಪ್ರಭುರಾಜ್ ಕೊಡ್ಲಿ


ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ 
UDAYAVANI NEWS 
ಮಾನ್ವಿ, ಡಿಸೆಂಬರ್ 20 : ಪಟ್ಟಣದ ಶಾಸಕರ ಭವನದ ಹತ್ತಿರದ ಆವರಣದಲ್ಲಿ ದಲಿತ ಪರ ಸಂಘಟನೆಗಳ ಒಕ್ಕೂಟದ ವತಿಯಿಂದ ವಿವಿಧ ಬೇಡಿಕೆಗಳ ಈಡೆರಿಕೆಗಾಗಿ ಹಮ್ಮಿಕೊಂಡ ಆನಿರ್ದಿಷ್ಟ ಮುಷ್ಕರ ಪ್ರತಿಭಟನೆಯಲ್ಲಿ ಸಂಚಾಲಕರಾದ ಪ್ರಭುರಾಜ್ ಕೊಡ್ಲಿ ಮಾತನಾಡಿ ಯಡಿವಾಳ ಗ್ರಾಮದಲ್ಲಿನ ದಲಿತ ಕುಟುಂಬಗಳಿಗೆ ನವಗ್ರಾಮದಲ್ಲಿ ನಿವೇಶನ ಹಾಗೂ ಭೂಮಿ ಮಂಜೂರು ಮಾಡಿ ಹಕ್ಕುಪತ್ರ ನೀಡಬೇಕು. ಪಟ್ಟಣದಲ್ಲಿ ಶೀಘ್ರವೇ ಡಾ,ಬಿ.ಆರ್ ಅಂಬೇಡ್ಕರ್ ಭವನ ಹಾಗೂ ಮಹಾರ್ಷಿ ವಾಲ್ಮಕೀ ಭವನ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು.
ಸರಕಾರವು ಭೂರಹಿತ ಪ.ಜಾತಿ, ಪ.ಪಂಗಡ ವರ್ಗಗಳ ಬಡ ರೈತರಿಗಾಗಿ ಅಲ್ಪ ಪ್ರಮಾಣದಲ್ಲಿ ಭೂಮಿಯನ್ನು ನೀಡುವ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ದಿ ನಿಗಮ, ಮಹರ್ಷಿ ವಾಲ್ಮಿಕಿ ಅಭಿವೃದ್ದಿ ನಿಗಮ,ಅಲೇಮಾರಿಗಳಿಗಾಗಿ ಅಲೇಮಾರಿ ಅಭಿವೃದ್ದಿ ನಿಗಮಗಳ ಮೂಲಕ ಸ್ಥಳೀಯ ತಾಲೂಕಿನ ಫಲಾನುಭವಿಗಳನ್ನು ಗುರುತಿಸಿ ಅಂತಹವರಿಗೆ ಭೂ ಒಡೆತನ ಯೋಜನೆ ಅಡಿಯಲ್ಲಿ ಭುಮಿಯನ್ನು ಮಂಜೂರು ಮಾಡಲಾಗುತ್ತದೆ. ಆದರೆ ಈ ಯೋಜನೆಯಲ್ಲಿ ನಿಗಮದ ಅಧಿಕಾರಿಗಳು ತಾಲೂಕಿನ ಸ್ಥಳೀಯ ನೈಜ ಫಲಾನುಭವಿಗಳನ್ನು ಗುರುತಿಸಿ ಭೂಮಿಯನ್ನು ವಿತರಿಸದೆ ಜಿಲ್ಲೆಯ ಹೊರಗಿನ ನಕಲಿ ಫಲಾನುಭವಿಗಳಿಗೆ ಫಲವತ್ತಾತೆ ಇಲ್ಲದೆ ಕೃಷಿಯೋಗ್ಯವಲ್ಲದ ಬಂಜರು ಭೂಮಿಯನ್ನು ಮಾರುಕಟೆಯ ದರಕಿಂತ ಹೆಚ್ಚುಪಟ್ಟು ಬೆಲೆಯನ್ನು ನೀಡಿ ಖರೀದಿಸಿ ಹಾಗೂ ಭೂಮಿಯನ್ನು ವಿತರಿಸುವಲ್ಲಿಯೂ ನಿಯಮಗಳನ್ನು ಗಾಳಿಗೆ ತೂರಿದ್ದು ಕೋಟ್ಯಾಂತರ ರೂ ಸರಕಾರದ ಬೊಕಸಕ್ಕೆ ನಷ್ಟವನ್ನು ಉಂಟುಮಾಡಿದ್ದಾರೆ ಇಂತಹ ಸರಕಾರಿ ಭೂಮಿಗಳನ್ನು ಕೇಲವರು ಅತ್ಯಂತ ಕಡಿಮೆ ಬೆಲೆಗೆ ಖರೀದಿಸುತ್ತಿದ್ದು ದಲಿತರಿಗೆ ಭೂ ಒಡೆತನ ನೀಡುವ ಸರಕಾರದ ಆಶಾಯಕ್ಕೆ ವಿರುದ್ದವಾಗಿದೆ ಆದರಿಂದ ೨೦೧೨ ರಿಂದ ವಿವಿಧ ಅಭಿವೃದ್ದಿ ನಿಗಮಗಳ ಮೂಲಕ ಜಿಲ್ಲೆಯಲ್ಲಿ ಖರೀದಿಮಾಡಿರುವ ಭೂಮಿಗಳನ್ನು ತನಿಖೆ ಮಾಡಬೇಕು. ಹಾಗೂ ಫಲಾನುಭಾವಿಗಳಿಂದ ಅಕ್ರಮವಾಗಿ ಖರೀದಿಸಿರುವ ಭುಮಿಯನ್ನು ಮರಳಿ ಫಲಾನುಭಾವಿಗಳಿಗೆ ನೀಡಬೇಕು, ತಾಲೂಕಿನಲ್ಲಿ ವಕ್ಫ ಭೂಮಿಯನ್ನು ನಿಯಮಬಾಹಿರವಾಗಿ ಮಾರಾಟಮಾಡುತ್ತಿದ್ದು ಅಂತಹ ಭೂಮಿಗಳನ್ನು ಪುರಸಭೆ,ಕಂದಾಯ ಇಲಾಖೆ,ನೊಂದಾಣಿ ಇಲಾಖೆಯ ಅಧಿಕಾರಿಗಳು ಕಾನೂಬಾಹಿರವಾಗಿ ನೊಂದಾಯಿಸುತ್ತಿದ್ದು ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು,ತಾಲೂಕಿನಲ್ಲಿ ಲೋಕೋಪಯೋಗಿ ಇಲಾಖೆ, ಜಿ.ಪಂಚಾಯಿತಿ ಇಲಾಖೆಯಿಂದ ಕಲ್ಯಾಣ ಕರ್ನಾಟಕ ಅಭಿವೃದ್ದಿ ಮಂಡಿಯ ಅನುದಾನದಲ್ಲಿ ಮಂಜೂರಾದ ಕಾಮಾಗಾರಿಗಳನ್ನು ಗುಣಮಟ್ಟದಲ್ಲಿ ಅಂದಾಜು ಪಟ್ಟಿಯಲ್ಲಿರುವಂತೆ ನಿಗದಿತ ಸಮಯದ ಮಿತಿಯನ್ನು ಅನುಸರಿಸದೆ ಕಳಪೆ ಕಾಮಾಗಾರಿಗಳನ್ನು ಕೈಗೊಳ್ಳುತ್ತಿದ್ದು ಸೂಕ್ತವಾದ ತನಿಖೆಯನ್ನು ಕೈಗೊಳ್ಳಬೇಕು.ಪುರಸಭೆ ವತಿಯಂದ ಪುರಸಭೆಯ ಮಳಿಗೆಗಳಿಗಾಗಿ ನಡೆದ ಹಾರಜಿನಲ್ಲಿ ನಿಯಮಗಳಿಗೆ ಒಳಪಟ್ಟು ಹಾರಜು ಮೂಲಕ ಮಳಿಗೆಗಳನ್ನು ಪಡೆದವರಿಗೆ ಇದುವರೆಗೂ ಪುರಸಭೆ ಅಧಿಕಾರಿಗಳು ಮಳಿಗೆಗಳನ್ನು ನೀಡದೆ ಇರುವುದರಿಂದ ಹಾರಜುದಾರರಿಗೆ ಆರ್ಥಿಕ ನಷ್ಟವಾಗುತ್ತಿದ್ದು ಕೂಡಲೇ ಮಳಿಗೆಗಳ ಹಸ್ತಾಂತರಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.


ಇದೇ ವೇಳೆ ಯಲ್ಲಿ
ಸುರೇಶನಾಡಗೌಡ, ಹೆಚ್.ಎಂ.ಬಾಬು, ಪಂಪಾಪತಿ, ವಾಜೀದ್ ಸಹುಕಾರ್, ಈರಣ್ಣ, ರಾಮಣ್ಣ, ಶಾಹೀದ್‌ಸಿದ್ದೀಕಿ, ರಾಯಪ್ಪವಕೀಲರು, ಗಿರಿನಾಯಕ, ಮಹಮ್ಮದ್ ಜಿನ್ನಾ, ಶೇಖ್ ಮೈನುದ್ದಿನ್, ಟಿಪ್ಟು, ಫಾರುಕ್, ಜಯರಾಜ ಕೊಡ್ಲಿ, ಸೇರಿದಂತೆ ಇನ್ನಿತರರು ಇದ್ದರು.

Post a Comment

Previous Post Next Post