UDAYAVANI NEWS
ಹರಪನಹಳ್ಳಿ, ಡಿಸೆಂಬರ್ 15 : ಒಂದು ಮನೆಯನ್ನು ಕಟ್ಟಲು ಹೆಣೆಗಾಡುವ ಜನರ ಮಧ್ಯೆ ಒಂದು ಬಹುದೊಡ್ಡ ಮಠವನ್ನು ಕಟ್ಟಿ ಬೃಹದಾಕಾರದ ಅನೇಕ ಶಿಕ್ಷಣ ಸಂಸ್ಥೆಗಳನ್ನು ತೆರೆದದ್ದು ಬಹುದೊಡ್ಡ ಕಾರ್ಯ, ಚಂದ್ರಮೌಳೇಶ್ವರ ಸ್ವಾಮೀಜಿಯವರು ಮತ್ತು ಕಾರ್ಯದರ್ಶಿಯವರು ತಗ್ಗಿನ ಮಠವೆಂಬ ಬಂಡಿಯ ನೋಗವನ್ನು ಜೋಡೆತ್ತಿನಂತೆ ಹೊತ್ತದ್ದು ಸೂರ್ಯ ಚಂದ್ರರ ಬೆಳಕಿನಷ್ಟೇ ಸತ್ಯವಾದದು,
ಶ್ರೀ ಟಿ.ಎಂ ಚಂದ್ರಶೇಖರಯ್ಯನವರು “ಜೀರೊ ಟು ಹಿರೋಗಳ ಮುಂದಿನ ಸಾಲಿನಲ್ಲಿ ಬರುವ ಅಗ್ರಗಣ್ಯರು. ಪಾದರಸದಂತೆ ಚೇತನ ಮತ್ತು ಚೈತನ್ಯವೆರಡು ಇವರು ಅವೆರಡರ ಸಂಗಮ. ಶೈಕ್ಷಣಿಕ ಧಾರ್ಮಿಕ ಸಾಮಾಜಿಕ ಆಡಳಿತ ಹಣಕಾಸು ವಿಜ್ಞಾನ ಕೃಷಿ ವ್ಯವಹಾರ ಸಾಹಿತ್ಯ, ಇಂಜಿನಿಯರಿಂಗ್, ಪಾಲಿಮರ್ಸ್, ಮೆಕ್ಯಾನಿಕಲ್ಸ್ ಆಟೋಮೊಬೈಲ್ಸ್ ಇನ್ನೂ ಅನೇಕ ಭಾಗಗಳಲ್ಲಿ ತಮ್ಮದೇ ಆದ ಬಿಗಿ ಹಿಡಿತವಿದೆ, ಬಹುಶಃ ಇವರಿಗೆ ಗೊತ್ತಿರದ ವಿಷಯಗಳಿಲ್ಲ ನಿಜಕ್ಕೂ ಇವರದ್ದು ಮಾಸ್ಟರ್ ಮೈಂಡ್, ತೆಗ್ಗಿನಮಠದ ಶ್ರೀಗಳ ಜೊತೆಗೂಡಿ ಸಾರ್ಥಕ ಸೇವೆ ಗೈದಿರುವ, ಶಿಕ್ಷಣ ಪ್ರೇಮಿ, ಬಹುಮುಖ ವ್ಯಕ್ತಿತ್ವ ಹೊಂದಿರುವ ಟಿ.ಎಂ ಚಂದ್ರಶೇಖರಯ್ಯನವರ ೭೫ನೇ ವರ್ಷದ ಜನ್ಮದಿನವನ್ನು 75ನೇ ಅಮೃತ ಮಹೋತ್ಸವವನ್ನಾಗಿ ಆಚರಿಸಲು ಈ ಅವಕಾಶ ನಮಗೆಲ್ಲಾ ದೊರೆತ ಸೌಭಾಗ್ಯವೆಂದು ಭಾವಿಸಲಾಗಿದೆ ಎಂದು ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರು ಹಾಗೂ ಅಮೃತ ಮಹೋತ್ಸವ ಸಮಿತಿ ಉಪ ಕಾರ್ಯಾಧ್ಯಕ್ಷರಾದ ಟಿ.ಎಂ. ರಾಜಶೇಖರ್ ಹೇಳಿದರು.
ಪಟ್ಟಣದ ಕಟ್ಟಿ ಸೇತು ರಾಮಚಾರ್ಯ ಶಿಕ್ಷಣ ಮಹಾವಿದ್ಯಾಲಯದ ಸೆಮಿನಾರ್ ಹಾಲ್‌ನಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿ ಹರಪುರವೆಂದರೆ ಶಿವನಾಡು, ಕೆಂಪೇಶ್ವರನ ಬೀಡು, ಚಂದ್ರಮೌಳೀಶ್ವರನ ಜ್ಞಾನಕಾಶಿ ಈ ಜ್ಞಾನಕಾಶಿಯ ಕೋಶವಾಗಿ ಸರಳ ವೀರಮಾಹೇಶ್ವರನಾಗಿ ಹರಪುರವನ್ನು ತನ್ನ ಕರ್ಮಭೂಮಿಯನ್ನಾಗಿಸಿಕೊಂಡ ಪುಣ್ಯವಂತರೇ ಟಿ.ಎಂ. ಚಂದ್ರಶೇಖರಯ್ಯ. ಇವರು ಷ!!ಬ್ರ!!ಶ್ರೀ ಚಂದ್ರಮೌಳೀಶ್ವರ ಶಿವಾಚಾರ್ಯರ ಪೂರ್ವಾಶ್ರಮದ ಒಟಹುಟ್ಟಿದ ಸಹೋದರ ಹಾಗೂ ಪೂಜ್ಯಾಶ್ರಮದ ಶಿಷ್ಯ ಸಂಪತ್ತು ಎಂದು ತಿಳಿಸಿದರು.
ಭವ್ಯ ಭಾರತದ ಇತಿಹಾಸದುದ್ದಕೂ ಮಠ-ಮಂದಿರಗಳ ಪ್ರಾಮುಖ್ಯತೆಯನ್ನು ಹಾಗೂ ಸಮಾಜ ಸೇವೆಯನ್ನು ಕಾಣಬಹುದು. ಶ್ರೀ ತೆಗ್ಗಿನಮಠವು ಸನಾತನ ವೀರಶೈವ ಗುರುಪರಂಪರೆಯ ಪಂಚಪೀಠಗಳಲ್ಲಿ ಒಂದಾದ ಶ್ರೀಮದ್ ರಂಭಾಪುರಿ ಪೀಠದ ಶಾಖಮಠ. ರಾಜಸೋಮಶೇಖರ ಶಿವಾಚಾರ್ಯರ ಕಾಲಘಟ್ಟದ್ದಲ್ಲಿ ದಾಸೋಹ ಮಠವೆಂದು ಪ್ರಸಿದ್ಧಿ ಪಡೆಯಿತು. ಲಿಂ. ಚಂದ್ರಶೇಖರ ಶಿವಾಚಾರ್ಯರ ನಂತರ ಶ್ರೀ ಚಂದ್ರಮೌಳೀಶ್ವರ ಶಿವಾಚಾರ್ಯರು ಮೊದಲು ಆಚಾರ್ಯರಾಗಿ, ನಂತರ ಪ್ರಾಚಾರ್ಯರಾಗಿ, ತದನಂತರ ಶಿವಾಚಾರ್ಯರಾಗಿ ತೆಗ್ಗಿನಮಠದ ಪಟ್ಟಾಧ್ಯಕ್ಷರಾಗಿ ಪೀಟಾರೋಹಣ ಮಾಡಿದರು
ವಿದ್ಯಾಸಂಸ್ಥೆಗಳನ್ನು ಹುಟ್ಟುಹಾಕಬೇಕು, ನಮ್ಮ ಸುತ್ತಲಿನ ಜನ ಸಮುದಾಯದ ಅಜ್ಞಾನ ತೊಲಗಿಸಬೇಕೆಂಬ ಪರಮೋಚ್ಛ ಗುರಿಯಿಂದ 1969ರಲ್ಲಿ “ತೆಗ್ಗಿನಮಠ ಆಟ್ರ‍್ಸ್ ಅಂಡ್ ಎಜ್ಯುಕೇಷನಲ್ ಸೊಸೈಟಿ”ಯನ್ನು ಪ್ರಾರಂಭಿಸಿದರು, ಮೊದಮೊದಲು ಟಿ.ಎಂ.ಎ.ಇ.ಎಸ್. ಬೆರಳಂಕಿಯ ವಿದ್ಯಾಸಂಸ್ಥೆಗಳನ್ನು ಹೊಂದಿ, ಕಾಲಕ್ರಮೇಣ ತನ್ನ ವಿಸ್ತಾರವನ್ನು ಹೆಚ್ಚಿಸಿಕೊಂಡಿತು, ಕಿರಿಯ, ಹಿರಿಯ, ಪ್ರೌಢಶಾಲೆಗಳನ್ನೊಳಗೊಂಡು, ಉದ್ಯೋಗಾಧಾರಿತ ಐ.ಟಿ.ಐ. 65ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ನಾಡಿನ 8ಜಿಲ್ಲೆಗಳಲ್ಲಿ ಸ್ಥಾಪಿಸಿ ಸಮಾಜಕ್ಕೆ ಬಹುದೊಡ್ಡ ಕೊಡುಗೆಯನ್ನು ನೀಡಿದವರು.
ಕಲ್ಯಾಣ ಕರ್ನಾಟಕ ಭಾಗವಾದ ಹರಪನಹಳ್ಳಿ ಪಟ್ಟಣವನ್ನು ಕೇಂದ್ರವಾಗಿರಿಸಿಕೊAಡು ನವ ಕರ್ನಾಟಕದ 8-10 ಜಿಲ್ಲೆಗಳಲ್ಲಿ ನಾನಾ ವಿಧದ ಶಾಲಾ ಕಾಲೇಜುಗಳನ್ನು ಷ!!ಬ್ರ!!ಶ್ರೀ ಚಂದ್ರಮೌಳೀಶ್ವರ ಶಿವಾಚಾರ್ಯ ಸ್ವಾಮಿಗಳು ಹುಟ್ಟು ಹಾಕಿದಾಗ, ಇಡೀ ಶಿಕ್ಷಣ ಸಂಸ್ಥೆಗಳ ಬೆನ್ನೆಲುಬಾಗಿ ಹಗಲಿರುಳು ಶ್ರಮಿಸಿ ಸಂಸ್ಥೆಯ ಎಲ್ಲಾ ವಿದ್ಯಾಕೇಂದ್ರಗಳು ಮಾದರಿ ವಿದ್ಯಾಕೇಂದ್ರಗಳಾಗಿ ಸಮಾಜದಲ್ಲಿ, ನಾಡಿನಲ್ಲಿ ಮೇರು ಪರ್ವತದಂತೆ ತಲೆ ಎತ್ತಿ ನಿಲ್ಲುವಂತೆ ಮಾಡಿದ್ದು ಶ್ರೀ ಟಿ.ಎಂ ಚಂದ್ರಶೇಖರಯ್ಯನವರು.
ಹನುಮನಿಗೆ ಸಮುದ್ರ ಜಿಗಿಯುವ ಸಾಮಥ್ರ‍್ಯವಿದ್ದರೂ. ನಂಬಿಕೆ ಬಂದದ್ದು ಶ್ರೀರಾಮ ನನ್ನೊಂದಿಗೆ ಇದ್ದಾನೆ ಎಂಬ ಧೈರ್ಯದಿಂದ ಎಂಬ ದಾರ್ಶನಿಕರ ನುಡಿಯಂತೆ ಲಿಂ.ಚಂದ್ರಶೇಖರ ಅಜ್ಜ ಹಾಗೂ ಶ್ರೀ ಚಂದ್ರಮೌಳೀಶ್ವರ ಶಿವಾಚಾರ್ಯ ಸ್ವಾಮೀಜಿಯವರು ನನ್ನ ಬೆನ್ನಗಿದ್ದಾರೆ ಎಂಬ ಅಚಲ ವಿಶ್ವಾಸದಿಂದ ಮುನ್ನುಗ್ಗಿ ಶ್ರೀ ಮಠ ಮಹಾಸಂಸ್ಥಾನವೆAಬ ಮೇರು ಮಹಾವೃಕ್ಷಕ್ಕೆ ಬಲಿಷ್ಠ ರೆಂಬೆ ಕೊಂಬೆಗಳೋಪಾದಿಯಲ್ಲಿ ಲಿಂ. ಹಿರಿಯ ಗುರುಗಳು ಸಾರ್ಥಕ 75ನೇ ವರ್ಷದ ಜನ್ಮ ದಿನದ ಅಮೃತ ಮಹೋತ್ಸವ ಸಂದರ್ಭದಲ್ಲಿ ಸಂಕಲ್ಪಿಸಿದ 75ಸತ್ ಸಂಕಲ್ಪಗಳನ್ನು ಲೋಕಾರ್ಪಣೆ ಗೊಳಿಸುವಲ್ಲಿ ಶ್ರೀ ಟಿ.ಎಂ. ಚಂದ್ರಶೇಖರಯ್ಯನವರ ಪಾತ್ರ ಬಹುಮುಖ್ಯ.
ಶ್ರೀ ತೆಗ್ಗಿನಮಠ ವಿದ್ಯಾಸಂಸ್ಥೆ ಜೊತೆಗೆ ಶ್ರೀ ಚಂದ್ರಶೇಖರಸ್ವಾಮಿ ವಿದ್ಯಾಸಂಸ್ಥೆ, ಬಾಬಾ ಸಾಹೇಬ್ ಅಂಬೇಡ್ಕರ್ ದತ್ತಿ ವಿದ್ಯಾಸಂಸ್ಥೆ, ಶ್ರೀ ತೆಗ್ಗಿನಮಠ ಗ್ರಾಮೀಣ ವಿಕಾಸ ಟ್ರಸ್ಟ್, ಬೆಳ್ಳಿಹಬ್ಬ ಟ್ರಸ್ಟ್, ಪ್ರತಿಷ್ಟಾನ ಚಾರಿಟೆಬಲ್ ಟ್ರಸ್ಟ್, ಪೂಜ್ಯ ಸಾಮೀಜಿ ಕೊ-ಆಪರೇಟೀವ್ ಸೌಹಾರ್ದ ಬ್ಯಾಂಕ್, ಜಗದ್ಗುರು ಶ್ರೀ ರೇಣುಕ ಪ್ರಕಾಶನ, ವೈದಿಕ ಪಾಠಶಾಲೆ ಪುನರ್ ನಿರ್ಮಾಣ, ಷಟ್‍ಸ್ಥಲ ಜ್ಞಾನ ಮಂದಿರ ಹೀಗೆ ಕೇವಲ ಶಿಕ್ಷಣ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗದ ಇವರ ಸೇವಾ ಕಾರ್ಯ ಅನನ್ಯ.
ಇಂತಹ ಬಹುಮುಖ ವ್ಯಕ್ತಿತ್ವ ಹೊಂದಿದ ಇವರ ಜನ್ಮದಿನವನ್ನು ಅಮೃತ ಮಹೋತ್ಸವವನ್ನಾಗಿ ಆಚರಿಸಲು ಸಿಕ್ಕ ಅವಕಾಶವನ್ನು 75ನೇ ಅಮೃತ ಮಹೋತ್ಸವದಲ್ಲಿ ನಾವು ನೀವಗಳೆಲ್ಲರೂ ಸಕ್ರಿಯವಾಗಿ ಪಾಲ್ಗೊಂಡು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಸಮಿತಿ ಪರವಾಗಿ ಕೋರಲಾಗಿದೆ ಎಂದರು.
ಎಸ್.ಸಿ.ಎಸ್ ಔಷಧ ಮಹಾವಿದ್ಯಾಲಯ ಜ್ಞಾನ ಗಂಗೋತ್ರಿ ಆವರಣದಲ್ಲಿ ದಿನಾಂಕ:- 18-12-2022ನೇ ಭಾನುವಾರ ಬೆಳಿಗ್ಗೆ 10-30 ಧರ್ಮಸಭೆ, ಸಂಜೆ 5ಗಂಟೆಗೆ ಸಮಾರೋಪ ಸಮಾರಂಭ, ಸಾಯಂಕಾಲ 6ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಟಿಸಲಾಗಿದೆ.
ಈ 75ನೇ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಸೂಡಿಯ ಜುಕ್ತಿ ಹಿರೇಮoದ ಕೊಟ್ಟೂರು ಶ್ರೀ ಬಸವೇಶ್ವರ ಶಿವಾಚಾರ್ಯ ಸ್ವಾಮಿಗಳು, ಎಮ್ಮಿಗನೂರು ಶ್ರೀ ವಾಮದೇವ ಮಹಾಂತ ಶಿವಾಚಾರ್ಯ ಸ್ವಾಮಿಗಳು, ದಾವಣಗೆರೆ ಕಂಬಾಳಿ ಮಠದ ಶ್ರೀ ಗಂಗಾಧರ ಸ್ವಾಮಿಗಳು, ಅಧ್ಯಕ್ಷರು ಅಖೀಲ ಭಾರತ ವೀರಶೈವ ಮಹಾಸಭಾ ಮತ್ತು ಶಾಸಕರಾದ ಶ್ರೀ ಶಾಮನೂರು ಶಿವಶಂಕರಪ್ಪ, ಪ್ರವಾಸೋದ್ಯೋಮ ಸಚಿವರಾದ ಆನಂದ್ ಸಂಗ್, ಮುಜರಾಯಿ ಇಲಾಖೆಯ ಸಚಿವೆ ಶಶಿಕಲಾ ಜೊಲ್ಲೆ, ಸಾರಿಗೆ ಸಚಿವರಾದ ಶ್ರೀರಾಮುಲು, ಉನ್ನತ ಶಿಕ್ಷಣ ಸಚಿವರಾದ ಸಿ.ಎಸ್ ಅಶ್ವತ್ ನಾರಾಯಣ್, ದಾವಣಗೆರೆ ಸಂಸದರಾದ ಜಿ.ಎಂ.ಸಿದ್ದೇಶ್ವರ್, ಶಿವಮೊಗ್ಗ ಸಂಸದ ಬಿ.ವೈ ರಾಘವೇಂದ್ರ, ಬಳ್ಳಾರಿ ಸಂಸದ ದೇವೇಂದ್ರಪ್ಪ, ಎದೆತುಂಬಿ ಹಾಡುವೆನು ಹಾಗೂ ಸರಿಗಮಪ ಖ್ಯಾತಿಯ ಗಾಯಕರು ಆಗಮಿಸಲಿದ್ದಾರೆ ಎಂದು ತಿಳಿಸಿದರು.
ಸಹೃದಯಿ ಧರ್ಮಾಭಿಮಾನಿಗಳೇ ನಾಡಿನ ಜಗದ್ಗುರುಗಳು, ಹರಗುರು ಚರಮೂರ್ತಿಗಳು, ಉನ್ನತ ಅದಿಕಾರಿಗಳು, ರಾಜಕೀಯ ಮುತ್ಸದ್ಧಿಗಳು, ಪತ್ರಿಕಾ ವರದಿಗಾರರು, ಶ್ರೀ ಮಠದ ಬಂಧುಗಳು, ಸದ್ಭಕ್ತರು, ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಮತ್ತು ಶ್ರೀ ಮಠದಸ ಅಭಿಮಾನಿಗಳು ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕೋರಲಾಗಿದೆ.
ಈ ಸಂದರ್ಭದಲ್ಲಿ ಸಂಸ್ಥೆಯ ಹಿರಿಯರಾದ ವೀರಣ್ಣ, ಎಸ್.ಸಿ.ಎಸ್ ಔಷಧ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ನಾಗೇಂದ್ರ, ನರ್ಸಿಂಗ್ ಕಾಲೇಜಿನ ಪ್ರಾಚಾರ್ಯರಾದ ಶಂಕರಯ್ಯ, ಡಿ.ಎಡ್ ಕಾಲೇಜಿನ ಪ್ರಾಚಾರ್ಯರಾದ ಜಗದೀಶ್ ಗೌಡ, ಕಾಲೇಜಿನ ವಿದ್ಯಾರ್ಥಿಗಳಾದ ರೂಪ, ಸ್ನೇಹ, ಕರಿಬಸಪ್ಪ ಹಾಗೂ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.
Tags
ಜಿಲ್ಲಾ ಸುದ್ದಿಗಳು