UDAYAVANI NEWS
ಗಂಗಾವತಿ, ನವೆಂಬರ್ 28 : ಪಟ್ಟಣದಲ್ಲಿ 8 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಭಕ್ತ ಕನಕದಾಸರ ನೂತನ ಕಂಚಿನ ಮೂರ್ತಿಯನ್ನು ಸಿಬಿಎಸ್ ವೃತ್ತದಿಂದ ಗಾಂಧಿ ಸರ್ಕಲ್ ಮಾರ್ಗವಾಗಿ, ಕನಕದಾಸ ವೃತ್ತದವರೆಗೆ ಕುಂಭ ಕಳಶ, ಡೋಳ್ಳು ಗಳೊಂದಿಗೆ ಭವ್ಯವಾದ ಮೆರವಣಿಗೆ ಮೂಲಕ ಹಾಲುಮತ ಸಮಾಜದ ಬಾಂಧವರೊಂದಿಗೆ ಸೇರಿ ನಗರಕ್ಕೆ ಸ್ವಾಗತಿಸಲಾಯಿತು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಯಮನಪ್ಪ ವಿಠಲಾಪುರ, ಗುರುಗಳಾದ ಸಿದ್ದರಾಮಯ್ಯ ಗುರಿವಿನ, ಕರಕುಶಲ ನಿಗಮದ ಮಾಜಿ ಅಧ್ಯಕ್ಷರಾದ ಶ್ರೀಮತಿ ಲಲಿತಾ ರಾಣಿ, ಮುಖಂಡರಾದ ಸಿದ್ದಲಿಂಗಪ್ಪ, ಯಮನಪ್ಪ ವಿಠಲಾಪುರ, ಎ.ಪಿ.ಎಮ್.ಸಿ ಮಾಜಿ ಅಧ್ಯಕ್ಷರಾದ ಸಣ್ಣಕ್ಕಿ ನೀಲಪ್ಪ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ರಾಘವೇಂದ್ರ ಶೆಟ್ಟಿ, ಸದಸ್ಯರಾದ ಶಿವಪ್ಪ ಮಾದಿಗ, ಕೆ. ನಾಗೇಶ್, ಬಗರ್ ಹುಕುಂ ಅಕ್ರಮ ಸಕ್ರಮ ಸದಸ್ಯರಾದ ಸಿದ್ದಲಿಂಗಯ್ಯ ಗಡ್ಡಿಮಠ, ನಗರ ಘಟಕ ಅಧ್ಯಕ್ಷರಾದ ಕಾಶಿನಾಥ ಚಿತ್ರಗಾರ್, ಬಿಜೆಪಿ ಯುವ ಮೋರ್ಚ ನಗರ ಅಧ್ಯಕ್ಷರಾದ ಕೆ ವೆಂಕಟೇಶ್, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷರಾದ ರಾಚಪ್ಪ ಸಿದ್ದಾಪುರ, ವಿರೇಶ್ ಸುಳೆಕಲ್, ಹಾಗೂ ಸಮಸ್ತ ಹಾಲುಮತ ಸಮಾಜದ ಸರ್ವ ಸದಸ್ಯರು ಪಾಲ್ಗೊಂಡಿದ್ದರು.
Tags
ಜಿಲ್ಲಾ ಸುದ್ದಿಗಳು