UDAYAVANI NEWS
ರಾಯಚೂರು, ನವೆಂಬರ್ 28 : ಮನೆಯೊಳಗೆ ನುಗ್ಗಿ ಬೆದರಿಸಿ ದರೋಡೆ ಮಾಡುತ್ತಿದ್ದ ಅಂತರರಾಜ್ಯ ದರೋಡೆಕೊರರನ್ನು ಬಂಧಿಸುವಲ್ಲಿ ಜಿಲ್ಲೆಯ ಪೊಲೀಸ್ ರು ಯಶಸ್ವಿಯಾಗಿದ್ದಾರೆ.
ಆಂಧ್ರ ಪ್ರದೇಶ ಮೂಲದ ಭೀಮಾವರಂ ರಾಯಿಲಂನ ನಿವಾಸಿ ರಾಮಕೃಷ್ಣ ರಾಜು ಅಲಿಯಾಸ್ ರಾಜು, ನರಸಾಪುರಂನ ಕುಮಾರ ರಾಜು ಅಲಿಯಾಸ್ ಕುಮಾರ್, ನರಸಾಪುರಂ ತಾಲೂಕಿನ ಕೊಂಡಲಂನ ಆರ್ದಾನಿ ಲಕ್ಷ್ಮಣ ಅಲಿಯಾಸ್ ನಿಬ್ಬಾ, ಅಬ್ದುಲ್ ರೆಹಮಾನ್, ವಿಶಾಖಪಟ್ಟಣಂನ ಸುಜಾತಾ ಅಲಿಯಾಸ್ ನಿಹಾರಿಕಾ, ಹಾರಿಕಾ ಜೋಡುಪಲ್ಲಿ ಬಂಧಿತ ದರೋಡೆಕೋರರು.
ಬಂಧಿತರಿಂದ ಅಂದಾಜು 26 ಲಕ್ಷ ಮೌಲ್ಯದ 520 ಗ್ರಾಂ. ಚಿನ್ನಾಭರಣ, 1,15,000 ರೂಪಾಯಿ ನಗದು ಹಣ ಹಾಗೂ ದರೋಡೆಗೆ ಬಳಸುತ್ತಿದ್ದ 2 ಲಕ್ಷ ಮೌಲ್ಯದ ನಿಸ್ಸಾನ್ ಮೈಕ್ರಾ ಕಾರ್ ಹಾಗೂ ಒಂದುವರೆ ಲಕ್ಷ ಮೌಲ್ಯದ ಟಾಟಾ ಇಂಡಿಕಾ ಕಾರ್ ನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಕಳೆದ 2022 ನ.7ರಂದು ಸಿಂಧನೂರು ತಾಲೂಕಿನ ಗಾಂಧಿನಗರದಲ್ಲಿ ಭಾಸ್ಕರರಾವ್ ಎನ್ನುವ ಮನೆಯೊಳಗೆ ತಡರಾತ್ರಿ ನುಗ್ಗಿ ಮೂವರು ಜನ ಅಪರಚಿತರಿಂದ ಪ್ಲಾಸ್ಟಿಕ್ ಪಿಸ್ತೂಲ್ ತೋರಿಸಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಮನೆಯಲ್ಲಿದ್ದ ಸುಮಾರು 18 ಲಕ್ಷ ರೂಪಾಯಿ ನಗದು ಹಣ 6 ಲಕ್ಷ 75 ಸಾವಿರ ಮೌಲ್ಯದ ಬಂಗಾರದ ಆಭರಣಗಳನ್ನು ಕಳ್ಳತನವಾಗಿವೆಂದು ತುರುವಿಹಾಳ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು.
ದೂರಿನ ಆಧಾರದ ಮೇಲೆ ವಿಶೇಷ ತನಿಖೆ ತಂಡ ರಚನೆ ಮಾಡಲಾಗಿತ್ತು ಈ ತನಿಖೆ ಯಶ್ವಸಿ ಕಾರ್ಯಾಚರಣೆಯಿಂದ ಓರ್ವ ಮಹಿಳೆ ಸೇರಿದಂತೆ ನಾಲ್ವರು ಅಂತರರಾಜ್ಯ ದರೋಡೆಕೋರರನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳು ಇದೊಂದೆ ಪ್ರಕರಣದಲ್ಲಿದೆ ಜಿಲ್ಲೆಯ ಕವಿತಾಳ, ಸಿಂಧನೂರು ನಗರ, ತುರುವಿಹಾಳ, ಕಾರಟಗಿ ಸೇರಿದಂತೆ ವಿವಿಧ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸ್ ರು ತಿಳಿಸಿದ್ದಾರೆ.
ಇನ್ನೂ ಬಂಧಿತ ಮಹಿಳೆ ಆರೋಪಿ ಸುಜಾತಾ ಸಿಂಧನೂರು ನಗರದ ಆದರ್ಶ ಕಾಲೋನಿ, ಮಾನವಿ ಪಟ್ಟಣ ಹಾಗೂ ರಾಯಚೂರು ನಗರದಲ್ಲಿ ಮನೆ ಮಾಡಿಕೊಂಡು ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿಸಿಕೊಂಡು, ತನ್ನಗೆ ಸಂಪರ್ಕದಲ್ಲಿರುವ ಜನರ ಹಾಗೂ ದೊಡ್ಡ ದೊಡ್ಡ ಮನೆಗಳನ್ನು ಪಟ್ಟಿ ಹಾಗೂ ಅವರ ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಳು. ಇವರ ಮನೆಗೆ ಕನ್ನ ಹಾಕಲು ಸಂಪರ್ಕಿಸುವ ರಸ್ತೆ ಹಾಗೂ ಸುತ್ತಮುತ್ತಲು ಆಳವಡಿಸಿರುವ ಸಿಸಿ ಕ್ಯಾಮರ್ ಬಗ್ಗೆ ಸಂಪೂರ್ಣವಾದ ವಿವರವನ್ನು ತನ್ನ ಸಹಚರರಿಗೆ ನಕಾಶೆ ತಯಾರಿಸಿ ನೀಡುತ್ತಿದ್ದಳು. ಅಲ್ಲದೇ ಸಿಂಧನೂರು, ಮಾನವಿಯಲ್ಲಿರುವ ಶ್ರೀಮಂತ ಜನರ ಪಟ್ಟಿ ಮಾಡಿಕೊಂಡು ಮನೆಗಳಿಗೆ ದರೋಡೆ ಮಾಡುವುದಕ್ಕೆ ಸಂಚು ರೂಪಿಸಿದ್ದರು ಎಂದು ತನಿಖೆ ತಿಳಿದು ಬಂದಿದೆ ಎಂದು ಪೊಲೀಸ್ ರು ಪ್ರಕರಣೆಯಲ್ಲಿ ತಿಳಿಸಿದ್ದಾರೆ.
ಈ ತಂಡದ ಕಾರ್ಯಾಚರಣೆಗೆ ಹಿರಿಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ಬಹುಮಾನ ಘೋಷಣೆ ಮಾಡಿದ್ದಾರೆ.
Tags
ಜಿಲ್ಲಾ ಸುದ್ದಿಗಳು