UDAYAVANI NEWS
ಮಸ್ಕಿ,ನವೆಂಬರ್ 29 : ತಾಲ್ಲೂಕಿನಲ್ಲಿ ವಿಕಲಚೇತನರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ
ಕರ್ನಾಟಕ ವಿಕಲಚೇತನರ ಎಂ.ಆರ್.ಡಬ್ಲೂ & ವಿ.ಆರ್ .ಡಬ್ಲೂ ಒಕ್ಕೂಟ ಮಸ್ಕಿ ವತಿಯಿಂದ
ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕ ಪಂಚಾಯತ ಕಾರ್ಯಾಲಯದ ಅಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದರು.
ನೂತನ ಮಸ್ಕಿ ತಾಲೂಕ ಪಂಚಾಯತ ವ್ಯಾಪ್ತಿಗೆ ಬರುವ ಎಲ್ಲಾ ಪಂಚಾಯತ ಕಾರ್ಯಾಲಯದಲ್ಲಿ ಸುಮಾರು ವರ್ಷಗಳಿಂದ ಹುದ್ದೆಯನ್ನು ಕಾರ್ಯನಿರ್ವಹಿಸುತ್ತಾ ಬಂದಿರುತ್ತೇವೆ.ಆದ್ದರಿಂದ ನಮ್ಮ ಬೇಡಿಕೆಗಳಾದ
ಮಸ್ಕಿ ತಾಲೂಕಿನ ವ್ಯಾಪ್ತಿಗೆ ಬರುವ ಎಲ್ಲಾ ಗ್ರಾಮ ಪಂಚಾಯತ ಕಾರ್ಯಾಲಯದಲ್ಲಿ VRW ಯಾಗಿ ಕೆಲಸ ಮಾಡುವವರಿಗೆ ಇಲ್ಲಿಯವರೆಗೆ ಸ್ಥಳ ಮತ್ತು ಟೇಬಲ್, ಖುರ್ಚಿ, ಅರಾ, ಇನ್ನಿತರ ವಸ್ತುಗಳ ವ್ಯವಸ್ಥೆ ಕೊರತೆ ಇದ್ದು, ಇದನ್ನು ತಾವುಗಳು ಆದೇಶ ಮಾಡಬೇಕು. ಜೊತೆಗೆ ಪ್ರತಿ ವರ್ಷಕ್ಕೆ 5000/- ರೂಪಾಯಿಗಳ ಸ್ಟೇಷನರಿ ವೆಚ್ಚವೆಂದು ನೀಡಬೇಕೆಂದು ಆದೇಶ ಮಾಡಬೇಕು.ಮಸ್ಕಿ ತಾಲೂಕಾ ಪಂಚಾಯತ ವ್ಯಾಪ್ತಿಗೆ ಬರುವ ಎಲ್ಲಾ ಗ್ರಾಮ ಪಂಚಾಯತಗಳಲ್ಲಿ ಡಿಸೆಂಬರ್ 3ನೇ ತಾರೀಖು ವಿಶ್ವ ವಿಕಲಚೇತನರ ದಿನಾಚರಣೆ ಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಆಚರಿಸಲಾಗುತ್ತದೆ. ಮಸ್ಕಿ ತಾಲೂಕು ವ್ಯಾಪ್ತಿಗೆ ಬರುವ ಎಲ್ಲಾ ಇಲಾಖೆಗಳಲ್ಲಿ ವಿಶ್ವ ವಿಕಲಚೇತನರ ದಿನಾಚರಣೆ ಮಾಡಲು ದಿನಾಂಕ ನಿಗದಿಗೊಳಿಸಿ ಈ ಡಿಸೆಂಬರ್ ತಿಂಗಳಿನಲ್ಲಿ ಯಾವುದೇ ದಿನಾಂಕದೊಳಗೆ ವಿಶ್ವ ವಿಕಲಚೇತನರ ಮಾಡಿಕೊಡಬೇಕು. ದಿನಾಚರಣೆ ಮಾಡಲು ತಾವುಗಳು ಅನುಕೂಲ ಮಾಡಿಕೊಡಬೇಕು.
ಮಸ್ಕಿ ತಾಲೂಕಾ ವಿಕಲಚೇತನರ ಅನುಷ್ಠಾನ ಸಮಿತಿ ಸಭೆಯನ್ನು ಕರೆದು ದಿನಾಂಕನ್ನು ನಿಗದಿಪಡಿಸಿ ಎಲ್ಲಾ ಇಲಾಖೆಯ ಅಧಿಕಾರಿಗಳು ಆದೇಶದ ಮೂಲಕ ಶೇ 5ರಷ್ಟು ಮೀಸಲಾತಿ ನೀಡುವುದರ ಬಗ್ಗೆ ಎಲ್ಲಾ ಪಂಚಾಯತ ಅಭಿವೃದ್ಧಿ ಅಧಿಕಾರಿಗಳನ್ನು ಹಾಗೂ ಇಲಾಖೆಯ ಅಧಿಕಾರಿಗಳನ್ನು ಕರೆದು ಕುಂದುಕೊರತೆಗಳ
ಸಭೆಯನ್ನು ಮಾಡಬೇಕೆಂದು ತಾಲೂಕ ಪಂಚಾಯತ ಅಧಿಕಾರಿ ಪಂಪನಗೌಡ ಪಾಟೀಲ ಇವರಲ್ಲಿ ಮನವಿ ಪತ್ರ ಸಲ್ಲಿಸುವ ಮೂಲಕ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ,
ಮಹಮ್ಮದ್ ಹುಸೇನ್ ಸಾಬ್, ತಾಲ್ಲೂಕು ಅಧ್ಯಕ್ಷ, ಭೀಮಣ್ಣ ವಟಗಲ್ , ಅಬ್ದುಲ್ ಸಾಬ್, ಅಮರೇಶ್ ಬುಳ್ಳಾ, ವೀರಪಾಕ್ಷಯ್ಯ ಬಳಗಾನೂರ, ಅಮೇಶ್ ,ಬದೀಗಿಸಾಬ್ ಕನ್ನಾಳ,ಯಲ್ಲಪ್ಪ ಮಾರಲದಿನ್ನಿ,ಅಯ್ಯಪ್ಪ ,ಹಾಗೂ ಸಂಘಟನೆಯ ಸದಸ್ಯರು ಹಾಜರಿದ್ದರು.
Tags
ಜಿಲ್ಲಾ ಸುದ್ದಿಗಳು