UDAYAVANI NEWS
ಮಸ್ಕಿ, ನವೆಂಬರ್ 29 : ಪಟ್ಟಣದ ಗಚ್ಚಿನ ಮಠದಲ್ಲಿ ಮಠದ ಶ್ರೀಗಳಾದ ವರ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಗಳ ಸಾನಿಧ್ಯದಲ್ಲಿ
ನಡೆದ ತಾಲ್ಲೂಕು ಜಂಗಮರ
ಸಭೆಯಲ್ಲಿ ಜಂಗಮ ತಾಲ್ಲೂಕು ಅಧ್ಯಕ್ಷರನ್ನಾಗಿ ಘನಮಠದಯ್ಯ ಸಾಲಿಮಠ ಅವರನ್ನು ಆಯ್ಕೆಮಾಡಲಾಯಿತು ಎಂದು ಮಸ್ಕಿ ಘಟಕದ ಅಧ್ಯಕ್ಷ ಸಿದ್ದಲಿಂಗಯ್ಯ ಸೊಪ್ಪಿಮಠ ತಿಳಿಸಿದರು.
ಗಚ್ಚಿನ ಮಠದಲ್ಲಿ ಮಠದ ಶ್ರೀಗಳಾದ ವರ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಗಳ ಸಾನಿಧ್ಯದಲ್ಲಿ ನೂತನ ಜಂಗಮ ಸಮಾಜದ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಇದೇ ವೇಳೆ ನೂತನ ತಾಲ್ಲೂಕು ಅಧ್ಯಕ್ಷ ಘನಮಠದಯ್ಯ ಸಾಲಿಮಠ ಮಾತನಾಡಿ, ನನ್ನ ಕಾಯಕವನ್ನು ಗುರುತಿಸಿ ನನಗೆ ಅಧ್ಯಕ್ಷ ಸ್ಥಾನ ನೀಡಿದ ತಾಲ್ಲೂಕಿನ ಎಲ್ಲಾ ಜಂಗಮ ಬಂಧುಗಳಿಗೆ ಹಾಗೂ ಗುರು ಹಿರಿಯರಿಗೆ ನಾನು ಅಬಾರಿ ಯಾಗಿರುವೆ.ನಮ್ಮ ಜಂಗಮ ಸಮಾಜ ಮೇಲ್ನೋಟಕ್ಕೆ ಸಾಂಸ್ಕೃತಿಕವಾಗಿ ಶ್ರೀಮಂತವೆಂದು ಕಾಣಿಸಿದರೂ ಆಂತರ್ಯದಲ್ಲಿ ಇಂದಿಗೂ, ಕಡುಬಡವರು, ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದವರು ಸಾಕಷ್ಟು ಜನರಿದ್ದಾರೆ ನಮ್ಮ ಸಮುದಾಯವು ಶೈಕ್ಷಣಿಕವಾಗಿ ಪ್ರಗತಿ ಹೊಂದಬೇಕು. ಅದಕ್ಕಾಗಿ ನಾನು ತಳಮಟ್ಟದಿಂದ ಜಂಗಮ ಸಮಾಜವನ್ನುಸಂಘಟನೆ ಮಾಡಲು ಶ್ರಮವಹಿಸಿ ಕೆಲಸ ಮಾಡುವೆ ಎಂದು ಹೇಳಿದರು.
ನಮ್ಮ ಸಮುದಾಯಕ್ಕೆ ಎಸ್.ಸಿ.ಮೀಸಲಾತಿ ನೀಡಬೇಕೆಂದು ಬೆಂಗಳೂರಿನಲ್ಲಿ 151 ದಿನಗಳಿಂದ ವಕೀಲರಾದ ಬಿ.ಡಿ.ಹಿರೇಮಠ ರವರ ನೇತೃತ್ವದಲ್ಲಿ ಹೋರಾಟವನ್ನು ಮಾಡುತ್ತಿದ್ದಾರೆ ಆದ್ದರಿಂದ ಆದಷ್ಟು ಬೇಗನೆ ಸರಕಾರ ನಮಗೆ ಬೇಡ ಜಂಗಮ ಮೀಸಲಾತಿ ನೀಡಬೇಕೆಂದು ಸಭೆಯಲ್ಲಿ ಚರ್ಚಿಸಲಾಯಿತು.
ಸಭೆಯ ಸರ್ವಾನುಮತದಿಂದ ನೂತನ ಮಸ್ಕಿ ತಾಲ್ಲೂಕು ಘಟಕದ ಅಧ್ಯಕ್ಷರನ್ನಾಗಿ ಘನಮಠದಯ್ಯ ಸಾಲಿಮಠ ಇವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರನ್ನಾಗಿ ಜಗದೀಶ್ ಚಂದ್ರ ತಾತ ,ನಾಗೇಶ ತಾತ ಉದ್ಬಾಳ, ವಿಶ್ವನಾಥ ಸ್ವಾಮಿ ಬಳಗಾನೂರ , ಮತ್ತು ಯುವ ಘಟಕದ ಅಧ್ಯಕ್ಷರನ್ನಾಗಿ ಬಸವರಾಜಯ್ಯ ಸ್ವಾಮಿ ಹಸಮಕಲ್ಲ ಇವರನ್ನು ಆಯ್ಕೆ ಮಾಡಿ ಸನ್ಮಾನಿಸಲಾಯಿತು.
Tags
ಜಿಲ್ಲಾ ಸುದ್ದಿಗಳು