ಶ್ರೀಶೈಲಂ ಪುಣ್ಯ ಕ್ಷೇತ್ರದಲ್ಲಿ ಬಿವಿವಿಎಸ್ ನಿತ್ಯ ಅನ್ನದಾನ ಛತ್ರದ ಕಟ್ಟಡದ ಪೂಜಾ ಕಾರ್ಯಕ್ರಮ

ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ 
ವರದಿ:ಶರಣಪ್ಪ ಹೆಳವರ,ಬಾಗಲಕೋಟೆ
ಬಾಗಲಕೋಟೆ, ನವೆಂಬರ್ 30 : ನಗರದ ಪ್ರತಿಷ್ಠತ ಬಸವೇಶ್ವರ ವಿರಶೈವ ವಿದ್ಯಾವರ್ಧಕ ಸಂಘದಿಂದ ಆಂದ್ರಪ್ರದೇಶದ ಶ್ರೀಶೈಲಂ ಪುಣ್ಯಕ್ಷೇತ್ರದಲ್ಲಿ 12 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಾಣವಾಗಿರುವ ಬಿವಿವಿಎಸ್ ನಿತ್ಯ ಅನ್ನದಾನ ಛತ್ರದ (ಕಟ್ಟಡದ) ವಾಸ್ತುಶಾಂತಿ, ಹೋಮ ಹಾಗೂ ಪೂಜಾ ಕಾರ್ಯಕ್ರಮ ಡಿಸೆಂಬರ 2 ರಂದು ಬೆಳಿಗ್ಗೆ 9-3೦ ಗಂಟೆಗೆ ನೆರವೇರಲಿದೆ.
 
ಸಮಾರಂಭದ ಸಾನ್ನಿಧ್ಯವನ್ನು ವಾರಣಾಶಿಯ (ಕಾಶಿ) ಶ್ರೀ ಶ್ರೀ ಶ್ರೀ 1008 ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು,ಶ್ರೀಶೈಲಂನ ಶ್ರೀ ಶ್ರೀ ಶ್ರೀ 1008 ಜಗದ್ಗುರು ಡಾ. ಚನ್ನಸಿದ್ಧರಾಮ ಶಿವಾಚಾರ್ಯ
ಮಹಾಸ್ವಾಮಿಗಳು ವಹಿಸುವರು.ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಚರಂತಿಮಠದ ಪ್ರಭುಸ್ವಾಮಿಗಳು ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಶ್ರೀಶೈಲ ಜಗದ್ಗುರುಗಳ ಪಾದಯಾತ್ರೆಯಲ್ಲಿ ಭಾಗವಹಿಸಿದ ಹರಗುರು ಚರಮೂರ್ತಿಗಳು ಉಪಸ್ಥಿತರಿರುವರು.
   
ಶ್ರೀಶೈಲಂ ದೇವಸ್ಥಾನ ಟ್ರಸ್ಟದಿಂದ 2 ಎಕರೆ ಜಮೀನನ್ನು ಪಡೆದುಕೊಂಡು ಈ ಭಾಗದ ಭಕ್ತರಿಗೆ ಅನುಕೂಲವಾಗಲಿ ಎಂಬ ಉದ್ದೇಶವನ್ನು ಇಟ್ಟುಕೊಂಡು ಸುಸಜ್ಜಿತವಾದ ಬಿವಿವಿಎಸ್ ನಿತ್ಯ ಅನ್ನದಾನ ಛತ್ರವನ್ನು ಶ್ರೀಶೈಲಂ ಮಹಾದ್ವಾರಕ್ಕೆ ಹೊಂದಿಕೊಂಡತೆ ಇರವು ಬಲಗಡೆಯ ರಿಂಗ್ ರೋಡಗೆ ಹೊಂದಿಕೊಂಡಂತೆ ನಿರ್ಮಿಸಲಾಗಿದೆ.2 ಎಕರೆ ಜಮೀನಿನಲ್ಲಿ 65000 ಸ್ಕ್ವೇಯರ್ ಫೂಟ್ ವಿಸ್ತೀರ್ಣದಲ್ಲಿ ಅಂದಾಜು 100 ಸುಸಜ್ಜಿತವಾದ ಕೊಠಡಿಗಳು ಮತ್ತು 5 ಡಾರಮಿಟರ (2 ಮಹಿಳೆಯರಿಗಾಗಿ,3 ಪುರುಷರಿಗಾಗಿ)ಗಳನ್ನು 4 ಅಂತಸ್ತಿನಲ್ಲಿ ನಿರ್ಮಿಸಲಾಗಿದೆ. ಲಿಪ್ಟ್ ಸೌಲಭ್ಯವನ್ನು ಅಳವಡಿಸಲಾಗಿದೆ.6೦೦೦ ಸ್ಕೇವರ್ ಫೂಟನಲ್ಲಿ ಕಾರ್ಯಕ್ರಮಗಳ ಉಪಯೋಗಕ್ಕಾಗಿ ಡೈನಿಂಗ್ (ಸಭಾಭವನ) ಹಾಗೂ ಸೆಂಟರ ಹಾಲ್ನಲ್ಲಿ ಮಹಿಳೆಯರಿಗಾಗಿ 1೦ ಸ್ನಾನಗೃಹ,1೦ ಶೌಚಾಲಯಗಳು ವ್ಯವಸ್ಥೆ ಇದೆ. ಅದೇ ರೀತಿ ಪುರುಷರಿಗಾಗಿ 1೦ ಸ್ನಾನಗೃಹ, 1೦ ಶೌಚಾಲಯ ಕೊಠಡಿಗಳನ್ನು ನಿರ್ಮಿಸಲಾಗಿದೆ.ಅನ್ನದಾನ ಛತ್ರದ ಕಟ್ಟಡದ 4 ದಿಕ್ಕುಗಳಲ್ಲಿ ಪ್ರವೇಶ ದ್ವಾರದ ಸೌಲಭ್ಯವಿರುತ್ತದೆ ಎಂದು ಬಿ. ವಿ. ವಿ. ಸಂಘದ ಕಾರ್ಯಾಧ್ಯಕ್ಷರು ಹಾಗೂ ಶಾಸಕರಾದ ಡಾ. ವೀರಣ್ಣ ಚರಂತಿಮಠವರು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.



Post a Comment

Previous Post Next Post