ಮೆಟ್ರಿಕ್ ಪೂರ್ವ ವಸತಿ ನಿಲಯ ಮಂಜೂರು ಮಾಡಬೇಕೆಂದು ಪ್ರಗತಿ ಪರ ಸಂಘಟನೆ ಒತ್ತಾಯ


ಸುದ್ದಿ ಸಂಪಾದಕರು: ಗ್ಯಾನಪ್ಪ ದೊಡ್ಡಮನಿ 
UDAYAVANI NEWS 
ಮಸ್ಕಿ, ನವೆಂಬರ್ 30 : ತಾಲೂಕಿನ ಬುದ್ದಿನ್ನಿ ಎಸ್ ಗ್ರಾಮಕ್ಕೆ ಮೆಟ್ರಿಕ್ ಪೂರ್ವ ವಸತಿ ನಿಲಯ ಮಂಜೂರು ಮಾಡಬೇಕೆಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರಾದ ಕೋಟ ಶ್ರೀನಿವಾಸ್ ಪೂಜಾರಿ ಅವರಿಗೆ ತಹಶೀಲ್ದಾರ್ ಮಂಜುನಾಥ್ ರವರ ಮುಖಾಂತರ ಮನವಿ ಪತ್ರ ಸಲ್ಲಿಸಿದರು.


ನಾಗರೆಡ್ಡಪ್ಪ ದೇವರಮನಿ ಮಾತನಾಡಿ ತಾಲೂಕು ಕೇಂದ್ರದಿಂದ ಬುದ್ದಿನ್ನಿ ಎಸ್ ಗ್ರಾಮವು 12 ಕಿಲೋಮೀಟರ್ ಅಂತರವಿದ್ದು, ಗ್ರಾಮದ ಪ್ರೌಢಶಾಲೆಯಲ್ಲಿ ಬುದ್ದಿನ್ನಿ ಎಸ್, ಹೂವಿನ ಬಾವಿ, ಬೆಂಚಮರಡಿ ಸಾನಬಾಳ, ಮುದಬಾಳ, ಸಾನಬಾಳ, ಇಲಾಲಪುರ, ಹರ್ವಾಪುರ, ತುಪ್ಪದೂರು, ಕಾಟಗಲ್ ಗ್ರಾಮಗಳ 183ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದು, 70ಕ್ಕೂ ಹೆಚ್ಚು ವಿದ್ಯಾರ್ಥಿಗಳು 6 ರಿಂದ 7 ಕಿ. ಮೀ ದೂರದ ಗ್ರಾಮಗಳಿಂದ ದಿನವೂ ಕಾಲ್ನಡಿಗೆಯಲ್ಲಿ ಶಾಲೆಗೆ ಆಗಮಿಸುತ್ತಾರೆ.
ಸಾರಿಗೆ ಸೌಲಭ್ಯದ ಕೊರತೆ ಆರ್ಥಿಕ ಸಂಕಷ್ಟ, ಬರಪೀಡಿತ ಪ್ರದೇಶವಿರುವುದರಿಂದ ಪಾಲಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಪಾಲಕರು ಮಕ್ಕಳನ್ನು ಕರೆದುಕೊಂಡು ಗುಳಿ ಹೋಗುವುದರಿಂದ ವರ್ಷದಿಂದ ವರ್ಷಕ್ಕೆ ಶಾಲೆ ಬಿಡುತ್ತಿರುವ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದ್ದು, ಹಾಗೂ ಗುಣಮಟ್ಟದ ಶಿಕ್ಷಣ ದೊರೆಯದೆ ಬಾಲಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ವಿದ್ಯಾರ್ಥಿಗಳ ಶೈಕ್ಷಣಿಕ ಹಕ್ಕು ಮತ್ತು ಸುರಕ್ಷತೆ ದೃಷ್ಟಿಯಿಂದ ಶೈಕ್ಷಣಿಕ ಮೂಲ ಸೌಕರ್ಯಗಳನ್ನು ಕಲ್ಪಿಸುವ ಕೆಲಸ ಈ ಭಾಗದಲ್ಲಿ ಆಗಿಲ್ಲ
371 (ಜೆ )ಕಲಂ, ಕೇವಲ ಉದ್ಯೋಗ ದೃಷ್ಟಿಯಲ್ಲಿ ಮಾತ್ರ ಪರಿಗಣಿಸುವ ಕೆಲಸವಾಗಿದ್ದು, ಈ ಭಾಗದ ಮಕ್ಕಳ ಶೈಕ್ಷಣಿಕ ಅವಶ್ಯಕತೆಗಳನ್ನು ಪೂರೈಸುವ ದೃಷ್ಟಿಯಲ್ಲಿ ಜಾರಿಗೊಳಿಸುವ ಕಾರ್ಯವಾಗಬೇಕಿದೆ ಎಂದರು.

ಎಸ್ ಎಫ್ ಐ ಬಸವಂತ ಹಿರೇ ಕಡಬೂರು ಮಾತನಾಡಿ ಕಳೆದ ಹಲವು ವರ್ಷಗಳಿಂದ ಈ ಭಾಗದ ನೂರಾರು ವಿದ್ಯಾರ್ಥಿ ವಿದ್ಯಾರ್ಥಿನಿಯರು ಸಾರಿಗೆ ಸಂಪರ್ಕ ಕೊರತೆ ಸೇರಿದಂತೆ ಹತ್ತಾರು ಸಮಸ್ಯೆಗಳ ನಡುವೆ ಮಳೆ ಚಳಿ ಹಾಗೂ ಬಿಸಿಲಿನಲ್ಲಿ ಶಾಲಾ ತರಗತಿಗಳಿಗೆ ತೆರಳುತ್ತಾರೆ. ವಿದ್ಯಾರ್ಥಿಗಳ ಶಿಕ್ಷಣದ ಹಿತದೃಷ್ಟಿಯಿಂದ ವಿದ್ಯಾರ್ಥಿ ವಸತಿ ನಿಲಯ ಮಂಜೂರು ಮಾಡಬೇಕು 2023 - 24ನೇ ಸಾಲಿನಲ್ಲಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳ ವಸತಿ ನಿಲಯ ಮಂಜೂರು ಮಾಡಿದರೆ, ಗ್ರಾಮದಲ್ಲಿ ವಸತಿ ನಿಲಯ ನಿರ್ಮಾಣಕ್ಕೆ ಸರ್ಕಾರಿ ಜಾಗ ಸೌಲಭ್ಯವಿದೆ. ವಸತಿ ನಿಲಯ ಸೌಕರ್ಯ ಕಲ್ಪಿಸುವುದರಿಂದ ಈ ಭಾಗದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಗುಣಮಟ್ಟದ ಶಿಕ್ಷಣವೂ ಕೊಡಲು ಸಹಕಾರಿಯಾಗುವುದು. ವಿದ್ಯಾರ್ಥಿಗಳ ಭವಿಷ್ಯ ಉಜ್ವಲಗೊಳ್ಳುತ್ತದೆ ಎಂದರು. ನಂತರ ಬುದ್ದಿನ್ನಿ ಎಸ್ ಗ್ರಾಮಕ್ಕೆ ಮೆಟ್ರಿಕ್ ಪೂರ್ವ ವಸತಿ ನಿಲಯ ಮಂಜೂರು ಮಾಡಬೇಕೆಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರಾದ ಕೋಟ ಶ್ರೀನಿವಾಸ್ ಪೂಜಾರಿ ಅವರಿಗೆ ತಹಶೀಲ್ದಾರ್ ಮಂಜುನಾಥ್ ರವರ ಮುಖಾಂತರ ಮನವಿ ಪತ್ರ ಸಲ್ಲಿಸಲಾಯಿತು.


ಇದೇ ಸಂದರ್ಭದಲ್ಲಿ

ಗ್ರಾಮ ಪಂಚಾಯತ್ ಅಧ್ಯಕ್ಷೆ ಚನ್ನಬಸಮ್ಮ, ದೇವೇಂದ್ರಪ್ಪ ಕನಸಾವಿ, ಬಸವರಾಜ್ ಇಳಿಗೆರ್, ಮೌನೇಶ್ ಬುದ್ದಿನ್ನಿ, ಗುರುರಾಜ್ ದೇಸಾಯಿ, ಹಂಪಮ್ಮ ಮಾದೇವಪ್ಪ, ಹೂವಣ್ಣ ದೇವರಮನಿ, ಮಲ್ಲಪ್ಪ ಸಾನಬಾಳ,ವೆಂಕಟೇಶ್,ಗ್ರಾಮಸ್ಥರು ಸೇರಿದಂತೆ ಇನ್ನಿತರರಿದ್ದರು.

Post a Comment

Previous Post Next Post