UDAYAVANI NEWS
ರಾಯಚೂರು, ನವೆಂಬರ್ 29 : ಭಾರತಮಾಲಾ ಯೋಜನೆಯಡಿ, ರಸ್ತೆ ಕಾಮಗಾರಿಗಾಗಿ ಫಸಲು ಬೆಳೆದು ನಿಂತಿರುವ ಸಮಯದಲ್ಲಿ, ರೈತರನ್ನು ಹುಯಿಲೆಬ್ಬಿಸಿ, ಕಾರ್ಯ ನಡೆಸಲು ದೌರ್ಜನ್ಯ ನಡೆಯುತ್ತಿರುವ ವಿಷಯ ತಿಳಿದು, *ರಾಯಚೂರು ಜಿಲ್ಲೆಯ ಮಾನ್ಯ ಜಿಲ್ಲಾಧಿಕಾರಿ* ಗಳನ್ನು ಭೇಟಿ ಮಾಡಿ, ಕೂಡಲೇ ಕಾಮಗಾರಿ ಸ್ಥಗಿತಗೊಳಿಸಿ, ನಮ್ಮ ಸಹೋದರರು, ತಮ್ಮ ಬೆಳೆಯ ಕೋಯ್ಲು ಮಾಡಿದ ನಂತರ, ಅವರಿಗೆ ನ್ಯಾಯಯುತವಾಗಿ ಸಿಗಬೇಕಾದ ಸೂಕ್ತ ಪರಿಹಾರ ನೀಡಿದ ನಂತರವೇ ಕಾಮಗಾರಿ ಮುಂದುವರೆಸುವಂತೆ ಆಗ್ರಹಿಸಲಾಯಿತು.
ಮಾನ್ಯ ಜಿಲ್ಲಾಧಿಕಾರಿಗಳಿಂದ ಈ ಮನವಿಗೆ ಸೂಕ್ತ ಸ್ಪಂದನೆ ದೊರೆತಿದ್ದು, ನಮ್ಮ ನಾಯಕರೊಡನೆ ನಡೆದ ಈ ಭೇಟಿ ಫಲಪ್ರದವಾಗಿದೆ ಎಂದು ನಮ್ಮ ರೈತ ಭಾಂಧವರಿಗೆ ತಿಳಿಸಲು ಹರ್ಷವಾಗುತ್ತಿದೆ.
ಈ ಸಂದರ್ಭದಲ್ಲಿ APMC ಅಧ್ಯಕ್ಷರಾದ ಶ್ರೀ ಅಚ್ಯುತ್ ರಡ್ಡಿ, ಭಾರತೀಯ ಜನತಾ ಪಾರ್ಟಿಯ ಹಿರಿಯ ನಾಯಕರಾದ ಶ್ರೀ ಶ್ರೀನಿವಾಸ ರಡ್ಡಿ (ಶಕ್ತಿನಗರ), ರಾಯಚೂರು ಗ್ರಾಮೀಣ ಮಂಡಲ ಅಧ್ಯಕ್ಷರಾದ ಶ್ರೀ ಶಂಕರಗೌಡ ಮಿರ್ಜಾಪುರ ಅವರು ಸೇರಿದಂತೆ ಹಲವಾರು ಗಣ್ಯರು, ತಿಪ್ಪರಾಜು ಹವಲ್ದಾರ
ರಾಜ್ಯಾಧ್ಯಕ್ಷರು ಎಸ್.ಟಿ ಮೋರ್ಚಾ ಬಿಜೆಪಿ ಹಾಗೂ ಮಾಜಿ ಶಾಸಕರು ರಾಯಚೂರು ಗ್ರಾಮೀಣ, ರೈತ ಮುಖಂಡರು ಹಾಜರಿದ್ದರು.
Tags
ಜಿಲ್ಲಾ ಸುದ್ದಿಗಳು