UDAYAVANI NEWS
ರಾಯಚೂರು,ನವೆಂಬರ್ 29 : ರಾಯಚೂರು ನಗರ ವಿಧಾನ ಸಭಾ ಕ್ಷೇತ್ರದಲ್ಲಿ ೪೦ ಸಾವಿರ ಮತದಾರರನ್ನು ಮತದಾರ ಪಟ್ಟಿಯಿಂದ ಕೈಬಿಟ್ಟಿದ್ದು,ಇದಕ್ಕೆ ನಗರ ಶಾಸಕ ಡಾ.ಶಿವರಾಜ ಪಾಟೀಲ್ ಹಾಗೂ ಸರಕಾರವೇ ಕಾರಣ ಎಂದು ನಗರವಿಧಾನ ಸಭಾ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಡಾ. ರಝಾಕ ಉಸ್ತಾದ ಆರೋಪಿಸಿದರು.
ಅವರಿಂದು ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿಮಾತನಾಡಿ, ರಾಯಚೂರು ನಗರವಿಧಾನಸಭಾ ಕ್ಷೇತ್ರದಲ್ಲಿ ಯಾವ ಆಧಾರದಲ್ಲಿ ಮತದಾರರ ಹೆಸರು ನಾಪತ್ತೆಕ್ರಮಕ್ಕೆ ಡಾ. ರಝಾಕ ಉಸ್ತಾದ್ ಆಗ್ರಹರದಲ್ಲಿ ೪೦ ಸಾವಿರ ಮತದಾರರನ್ನುಕೈಬಿಡಲಾಗಿದೆ ಎನ್ನುವದು ಜಿಲ್ಲಾಡಳಿತಸೂಕ್ತ ಕಾರಣಗಳನ್ನು ಜನರಿಗೆ ನೀಡಬೇಕು.ಅನಗತ್ಯವಾಗಿ ತೆಗೆದುಹಾಕಿರುವ ಹೆಸರನ್ನು ಹಳೆ ಪಟ್ಟಿಯಜೊತೆಗೆ ಮನೆ ಮನೆಗೆ ಭೇಟಿ ನೀಡಿಮರು ಪರಿಷ್ಕರಿಸಬೇಕೆಂದು ಒತ್ತಾಯಿಸಿದರು. ಕಳೆದ ಒಂದು ವರ್ಷದಲ್ಲಿ
ರಾಜ್ಯದಲ್ಲಿ ಸುಮಾರು ೨೭ ಲಕ್ಷ ಮತದಾರರನ್ನು ಮತದಾರರ ಪಟ್ಟಯಿಂದ ತೆಗೆದಹಾಕಿರುವದು ಬೆಳಕಿಗೆ ಬಂದಿದೆ.ಅದೇ ರೀತಿ ರಾಯಚೂರು ಜಿಲ್ಲೆಯಲ್ಲಿ ೧ ಲಕ್ಷ ೩೮ ಸಾವಿರ ಮತದಾರರ ಹೆಸರನ್ನು ಮತದಾರರ ಪಟ್ಟಿಯಿಂದತೆಗೆದುಹಾಕಲಾಗಿದೆ. ರಾಯಚೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ ೨೦೨೨ ರ ಮತದಾರರ ಪಟ್ಟಿಯಿಂದ ೨೦೨೩ ರಮತದಾರರ ಪಟ್ಟಯಲ್ಲಿ ಸುಮಾರು ೪೦ ಸಾವಿರ ಮತದಾರರ ಹೆಸರನ್ನು ತೆಗೆದುಹಾಕಿ, ೧೬ ಸಾವಿರ ಮತದಾರರಹೆಸರನ್ನು ಹೊಸದಾಗಿ ಸೇರಿಸಲಾಗಿದೆ.೨೦೨೦ ರ ಮತದಾರರ ಪಟ್ಟಿಯಲ್ಲಿ ನಗರವಿಧಾನಸಭಾ ಕ್ಷೇತ್ರದ ಮತದಾರರಸಂಖ್ಯೆ ಒಟ್ಟು ೨೩೯ ಮತಗಟ್ಟೆಗಳಲ್ಲಿ ೨ ಲಕ್ಷ ೩೫ ಸಾವಿರ ಮತದಾರರಿದ್ದು,೨೦೨೨ ರ ಮತದಾರರ ಪಟ್ಟಿಯಲ್ಲಿ ಒಟ್ಟು೨೩೯ ಮತಗಟ್ಟೆಗಳಲ್ಲಿ ೨ ಲಕ್ಷ ೩೮ ಸಾವಿರ ಮತದಾರರಿದ್ದು , ೨೦೨೩ ರ ಮತದಾರರ ಪಟ್ಟಿಯಲ್ಲಿ ಮತಗಟ್ಟೆಗಳ ಸಂಖ್ಯೆಹೆಚ್ಚಿಸಿದ್ದು ಒಟ್ಟು ೨೪೬ ಮತಗಟ್ಟೆಗಳಿದ್ದು , ಸುಮಾರು ೨ ಲಕ್ಷ ೧೩ ಸಾವಿರ ಮತದಾರರಿದ್ದಾರೆ.ಸುಮಾರು ೨೪ ಸಾವಿರಮತದಾರರು ಕಡಿಮೆಯಾಗಿದ್ದಾರೆ ಎಂದ ಅವರು ಇದರಲ್ಲಿ ೧೬ ಸಾವಿರ ಹೊಸದಾಗಿ ಮತದಾರರ ಹೆಸರನ್ನುಸೇರಿಸಲಾಗಿದೆ.ಒಟ್ಟು ೪೦ ಸಾವಿರ ಮತದಾರರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ.೨೦೨೩ ಕರಡುಮತದಾರರ ಪಟ್ಟಿಯಲ್ಲಿ ಸಾಕಷ್ಟು ಲೋಪದೋಷಗಳಿದ್ದು,ಗುರುತಿನ ಚೀಟಿ ಸಂಖ್ಯೆ ನಮೂದಾಗಿದ್ದು,ಹೆಸರು,ತಂದೆಯಹೆಸರು,ವಿಳಾಸ ಅಳಿಸಿ ಹಾಕಿದ ಮತದಾರರ ಪಟ್ಟಿಯಿದೆ .ಈ ರೀತಿಯ ಗೊಂದಲಗಳನ್ನು ಉದ್ದೇಶಪೂರ್ವಕವಾಗಿಯೇಸೃಷ್ಟಿಸಲಾಗಿದೆ ಎಂದು ಆರೋಪಿಸಿದರು. ರಾಜ್ಯಾದ್ಯಾಂತ ವಿಶೇಷ ಮತದಾರರ ಪಟ್ಟಿ ಪರಿಷ್ಕರಣಿ ಕಾರ್ಯನಡೆಯುತ್ತಿದ್ದು,ಇದನ್ನು ಡಿಸೆಂಬರ್ ೨೪ ರವರೆಗೆ ವಿಸ್ತರಿಸಬೇಕೆಂದು ಒತ್ತಾಯಿಸಿದರು.
Tags
ಜಿಲ್ಲಾ ಸುದ್ದಿಗಳು