ಅಶೋಕ ಶಿಲಾಶಾಸನವನ್ನು ಪ್ರವಾಸಿ ತಾಣ ಮಾಡಲು ಮನವಿ.




ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ 
UDAYAVANI NEWS 
ಮಸ್ಕಿ, ಮಾರ್ಚ್ 12 : ತಾಲೂಕು ಸಮಗ್ರ ಆಡಳಿತ ನಡೆಸಲು ಅಧಿಕಾರಿ, ಸಿಬ್ಬಂದಿ ಮತ್ತು ಕಟ್ಟಡಗಳನ್ನು ಒದಗಿಸುವಂತೆ ಹಾಗೂ ಚಕ್ರವರ್ತಿ ಅಶೋಕ ದೇವನಾಂಪ್ರಿಯಾ ನಾಮಾಂಕಿತವಿರುವ ಈ ಶಾಸನವನ್ನು ಶೀಘ್ರವೇ ಅಭಿವೃದ್ಧಿ ಅಭಿವೃದ್ಧಿ ಪಡಿಸಿ ಪ್ರವಾಸಿ ತಾಣವನ್ನಾಗಿ ಮಾರ್ಪಡು ಮಾಡಬೇಕು ಎಂದು ಶಂಕರ್ ಪಾಟೀಲ್ ಬಿ.ಮುನೇನಕೊಪ್ಪ ಕೈ-ಮಗ್ಗ ಮತ್ತು ಜವಳಿ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರು ಕರ್ನಾಟಕ 
ಇವರಿಗೆ ಕರ್ನಾಟಕ ರಕ್ಷಣಾ ವೇದಿಕೆ(ಟಿ.ಎ.ನಾರಾಯಣಗೌಡ ಬಣ) ಮಸ್ಕಿ ಸಂಘಟನೆಯಿಂದ ಮನವಿಯನ್ನು ಸಲ್ಲಿಸಿದರು.

ಈ ವೇಳೆ ದುರ್ಗರಾಜ ವಟಗಲ್ ಮಾತನಾಡಿ

ಮಸ್ಥಿ ಪಟ್ಟಣವನ್ನು ಕಳೆದ ಮೂರಾಲ್ಕು ವರ್ಷಗಳ ಹಿಂದೆ ತಾಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಿ ಹಿಂದಿನ ಸರ್ಕಾರ ಕೈತೊಳೆದುಕೊಂಡಿದೆ. ಆದರೆ ಮಸ್ಕಿ ತಾಲೂಕು ಕೇಂದ್ರವೆಂದು ಹೆಸರಿಗೆ ಮಾತ್ರ ಸೀಮಿತವಾಗಿದ್ದು, ಮಸ್ಕಿಯನ್ನು ಪಕ್ಕದ ಲಿಂಗುಸಗೂರು, ಮಾನ್ವಿ ಮತ್ತು ಸಿಂಧನೂರು ತಾಲೂಕಿನ ಕೆಲ ಹಳ್ಳಿಗಳನ್ನು ಒಳಗೊಂಡು ಮಸ್ತಿಯನ್ನು ನೂತನ ತಾಲೂಕು ಕೇಂದ್ರವೆಂದು ಘೋಷಣೆ ಮಾಡಲಾಗಿದೆ. ಆದರೆ ವಾಸ್ತವದಲ್ಲಿ ಮಸ್ಕಿ ಪಟ್ಟಣದಲ್ಲಿ ಸರ್ಕಾರದ ಯಾವೊಂದು ಇಲಾಖೆಯೂ ಕಾರ್ಯನಿರ್ವಾಹಿಸುತ್ತಿಲ್ಲ. ಆರಂಭದಲ್ಲಿ ಮೂಲ ತಾಲೂಕಿನ ಅಧಿಕಾರಿಗಳನ್ನೇ ಆಯಾ ಇಲಾಖೆಗೆ ಪ್ರಭಾರಿ ಅಧಿಕಾರಿಗಳನ್ನಾಗಿ ನೇಮಕ ಮಾಡಲಾಗಿತ್ತು. ಆದರೆ ಮಸ್ಕಿ ಪಟ್ಟಣದಲ್ಲಿ ಸರಕಾರಿ ಇಲಾಖೆಗಳಿಗೆ ಕಟ್ಟಡಗಳ ವ್ಯವಸ್ಥೆ ಇಲ್ಲದಿರುವದರಿಂದ ಕ್ರಮೇಣವಾಗಿ ಇಲಾಖೆ ಕಾರ್ಯವನ್ನು ಸ್ಥಗಿತಗೊಳಿಸಿದ್ದರಿಂದ 
ಸಾರ್ವಜನಿಕರಿಗೆ ತೊಂದರೆ ಯಾಗಿದೆ
ಮಸ್ಕಿ ತಾಲೂಕು ಸುಮಾರು 250 ಲಕ್ಷ ಜನಸಂಖ್ಯೆಯನ್ನು ಹೊಂದಿದ್ದು, ಪಟ್ಟಣದಲ್ಲಿ ಉಪನೊಂದಣಿ ಕಛೇರಿಯನ್ನು(ಸಬ್‌ರಿಜಿಸ್ಟಾರ್ ಆಫೀಸ್) ಕಾರ್ಯನಿರ್ವಹಿಸುವಂತೆ ಕ್ರಮಕ್ಕೆ ಮುಂದಾಗಬೇಕು.
ಪಟ್ಟಣದಲ್ಲಿ ವಾರದಲ್ಲಿ 2 ದಿನ ಮಾತ್ರ ಕಾರ್ಯನಿರ್ವಾಹಿಸುತ್ತಿರುವ ಕೋರ್ಟ್‌ನ್ನು ಪೂರ್ಣಪ್ರಮಾಣದಲ್ಲಿ ಕಾರ್ಯನಿರ್ವಾಹಿಸುವಂತೆ ಮಾಡಬೇಕು.
ಮಸ್ಕಿ ಪಟ್ಟಣಕ್ಕೆ ಶಾಶ್ವತ 24x7 ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಗಾಂಧಿನಗರದ 4ವಾರ್ಡುಗಳಿಗೆ ಪ್ರತ್ಯೇಕವಾದ ಕೆರೆ ನಿರ್ಮಿಸಬೇಕು. ಹಾಗೂ ದೇಶದ ಭೂಪಟದ ಇತಿಹಾಸದಲ್ಲಿರುವ ಮಸ್ಕಿ ಶಿಲಾ ಶಾಸನವು ದೇವಾನಾಮಪ್ರಿಯಾ ಅಶೋಕ ಎಂದು ಬಿರುದಿನಿಂದ ಪ್ರಸಿದ್ಧಿಯಾಗಿರುವ ಈ ಶಾಸನವು ಪ್ರಾಚ್ಯವಸ್ತು ಮತ್ತು ಪ್ರವಾಸೋದ್ಯಮ ಇಲಾಖೆಗಳು ನಿರ್ಲಕ್ಷದಿಂದ ಪಟ್ಟಣದ ಹೊರವಲಯದಲ್ಲಿರುವ ಐತಿಹಾಸಿಕ ಪ್ರಸಿದ್ಧ ಅಶೋಕ ಶಿಲಾ ಶಾಸನ ಸ್ಥಳ ಶತಮಾನದಿಂದ ಅಭಿವೃದ್ಧಿ ಕಾಣದೇ ಇರುವುದು ದುರಂತ ಸಂಗತಿ. ಚಕ್ರವರ್ತಿ ಅಶೋಕ ದೇವನಾಂಪ್ರಿಯಾ ನಾಮಾಂಕಿತವಿರುವ ಈ ಶಾಸನವನ್ನು ಶೀಘ್ರವೇ ಅಭಿವೃದ್ಧಿ ಅಭಿವೃದ್ಧಿ ಪಡಿಸಿ ಪ್ರವಾಸಿ ತಾಣವನ್ನಾಗಿ ಮಾರ್ಪಡು ಮಾಡಬೇಕು.ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ
ಕರ್ನಾಟಕ ರಕ್ಷಣಾ ವೇದಿಕೆ(ಟಿ.ಎ.ನಾರಾಯಣಗೌಡ ಬಣ) ಮಸ್ಕಿ ಸಂಘಟನೆ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಸಂಘಟನೆಯ
ಪದಾಧಿಕಾರಿಗಳು ಇದ್ದರು.

Post a Comment

Previous Post Next Post