ಜ್ವಲಂತ ಸಮಸ್ಯೆ ಸರಿಪಡಿಸುವಂತೆ ಮಾಜಿ ಮುಖ್ಯಮಂತ್ರಿ ಮೂಲಕ ಮುಖ್ಯಮಂತ್ರಿಗೆ ಜಯ ಕರ್ನಾಟಕ ಮನವಿ




ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ 
UDAYAVANI NEWS 
ಮಸ್ಕಿ, ಮಾರ್ಚ್ 12 : ಪಟ್ಟಣದಲ್ಲಿ ಭಾರತೀಯ ಜನತಾ ಪಕ್ಷದ ವತಿಯಿಂದ ವಿಜಯ ಸಂಕಲ್ಪ ಯಾತ್ರೆ ಸಮಾರೋಪ ಸಮಾರಂಭಕ್ಕೆ ಆಗಮಿಸಿದ್ದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ರವರಿಗೆ ಮಸ್ಕಿ ತಾಲೂಕಿನ ಜ್ವಲಂತ ಸಮಸ್ಯೆಯ ಕುರಿತು ಜಯ ಕರ್ನಾಟಕ ಸಂಘಟನೆಯ ವತಿಯಿಂದ ಮನವಿ ಪತ್ರ ಸಲ್ಲಿಸಿದರು.


ಪಟ್ಟಣದಲ್ಲಿ ಸುಮಾರು 40,000 ಹೆಚ್ಚಿನ ಜನರು ವಾಸಿಸುತ್ತಿದ್ದು, ಸ್ಥಳೀಯ ಜನ ಪ್ರತಿನಿಧಿಗಳ ನಿರ್ಲಕ್ಷದಿಂದ ಮತ್ತು ಅಧಿಕಾರಿಗಳ ಬೇಜವಾಬ್ದಾರಿತನದಿಂದ ಮಸ್ಕಿಗೆ ಬಹುದಿನದ ಬೇಡಿಕೆಯಾಗಿದ್ದ ಸರ್ಕಾರ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಬೇಕೆನ್ನುವುದು ಸರಕಾರದ ಮುಂದೆ ಇಡುವುದು ಕಾರಣ ಇಷ್ಟೇ ಮಸ್ಕಿಯಲ್ಲಿರುವ ಖಾಸಗಿ ಆಸ್ಪತ್ರೆಗಳು ರಾಕ್ಷಸ ಪ್ರವೃತ್ತಿಗಳಿದ್ದು, ಒಂದು ಹೆರಿಗೆ ಆದರೆ ಸಾಕು ಐವತ್ತು ಸಾವಿರದಿಂದ ಒಂದು ಲಕ್ಷದವರೆಗೆ ಖಾಸಗಿ ಆಸ್ಪತ್ರೆಗಳು ಬಿಲ್ ಮಾಡುತ್ತಿದ್ದು, ಮಸ್ಕಿಗೆನು ಸರ್ಕಾರಿ ಆಸ್ಪತ್ರೆ 30 ಹಾಸಿಗೆಯಾಗಿ ಮೇಲ್ದರ್ಜೆಗೇರಿದರೂ ಕಟ್ಟಡ ನಿರ್ಮಾಣ ಹಂತದಲ್ಲಿದ್ದು ಮಸ್ಕಿ ತಾಲೂಕಿನ ಜನತೆಯ ದುರ್ಭಾಗ್ಯವೇ ಸರಿ ಎನ್ನುವಂತಾಗಿದೆ. ಬಡವರು ನಿರ್ಗತಿಕರು ದುಡಿಮೆಯನ್ನು ನಂಬಿ ಬದುಕು ನಡೆಸುವ ಜನತೆಗೆ ಬಹಳಷ್ಟು ನೋವು ಉಂಟಾಗುತ್ತಿದ್ದು, ಇದನ್ನು ಹೇಳತ್ತೀರದಾಗಿದೆ. ಹಾಗಾಗಿ ಮಾನ್ಯ ಸಾರಿಗೆ ಸಚಿವರಾದ ಬಿ ಶ್ರೀರಾಮುಲು ತಾವುಗಳು ಬಡತನದಿಂದ ಈ ಮಟ್ಟಕ್ಕೆ ಬಂದಿದ್ದು, ಅದರ ಅನುಭವ ತಮಗೆ ಇದ್ದು ತಾವುಗಳು ಈ ಕೂಡಲೇ ಮಸ್ಕಿಯ ಸರ್ಕಾರ ಆಸ್ಪತ್ರೆಯನ್ನು ಆದಷ್ಟು ಬೇಗನೆ ಉದ್ಘಾಟನೆ ಮಾಡಲು ಮುಂದಾಗಬೇಕು. ಆದಷ್ಟು ಬೇಗನೆ ಸರಕಾರಿ ಆಸ್ಪತ್ರೆ ಪ್ರಾರಂಭಿಸುವ ಮೂಲಕ ಸಾರ್ವಜನಿಕರ ಸೇವೆಗೆ ಅನುಕೂಲ ಮಾಡಿಕೊಡಬೇಕು. ಮಸ್ಕಿಯ ಅಶೋಕ ಶಿಲಾಶಾಸನ ಅಭಿವೃದ್ದಿ ಪಡಿಸಬೇಕು. ಇದಕ್ಕೆ ಬೇಕಾದ ಸರಕಾರದ ಮಟ್ಟದಲ್ಲಿ ಮಾನ್ಯ ಮುಖ್ಯಮಂತ್ರಿಗಳಿಗೆ ಹಾಗೂ ಆರೋಗ್ಯ ಇಲಾಖೆ ಸಚಿವರಿಗೆ ಸೂಕ್ತ ರೀತಿಯಲ್ಲಿ ಗಮನಕ್ಕೆ ತಂದು ಆದಷ್ಟು ಬೇಗನೆ ಉದ್ಘಾಟನೆ ಮಾಡಬೇಕೆಂದು ನಮ್ಮ ಜಯ ಕರ್ನಾಟಕ ಸಂಘಟನೆಯ ತಾಲೂಕ ಸಮಿತಿಯ ವತಿಯಿಂದ ಅಧ್ಯಕ್ಷರಾದ ಕಿರಣ್ ವಿ ಮುರಾರಿ ರವರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ರವರ ಮೂಲಕ ಮನವಿ ಪತ್ರ ಸಲ್ಲಿಸಿದ್ದಾರೆ.

ಇದೇ ಸಂದರ್ಭದಲ್ಲಿ

ಯಮನಪ್ಪ ಮುದ್ಗಲ್ ಗೌರವ ಅಧ್ಯಕ್ಷರು, ಖಲೀಲ್ ಶೇಡ್ಮಿ ಅ.ಸಂ. ಅಧ್ಯಕ್ಷ, ಬಸವರಾಜ ಗೋಗಿ, ಪ್ರಧಾನ ಕಾರ್ಯದರ್ಶಿ, ಸಂದೀಪ್ ಕೊಡೇಕಲ್ ನಗರ ಘಟಕ ಉಪಾಧ್ಯಕ್ಷ, ರವಿ ಜಿ ಚೌಡಕಿ ನಗರ ಘಟಕ ಕಾರ್ಯಾಧ್ಯಕ್ಷರು,ಭೀಮಪ್ಪ ತೆರಿಭಾವಿ ಖಜಾಂಚಿ, ಮೌಲ ಸಾಬ್ ಆಟೋ, ಮಾರುತಿ ಹಿರೇ ಕಡಬೂರು, ಹೊನ್ನೂರು ಸಾಬ್ ಆಟೋ ಉದ್ಬಾಳ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 



Post a Comment

Previous Post Next Post