UDAYAVANI NEWS
ಕಲಬುರಗಿ, ಮಾರ್ಚ್ 09 : ಕಲಬುರಗಿ ಜಿಲ್ಲೆಯಾದ್ಯಂತ ರಂಗು ರಂಗಿನ ಹೋಳಿ ಹಬ್ಬ ಸಂಭ್ರಮದಿಂದ ಆಚರಿಸಲಾಯಿತು. ಎರಡು ದಿನಗಳ ಕಾಲ ಎಲ್ಲಡೆ ಶಾಂತಯುತವಾಗಿ ಆಚರಣೆ ನಡೆದಿದ್ದು, ಚಿತ್ತಾಪುರ ತಾಲೂಕಿನ ಲಾಡ್ಲಾಪುರ ಗ್ರಾಮದಲ್ಲಿ ಕಾಮ ಧಹನಕ್ಕಾಗಿ ಬೆಂಕಿ ಕಿಡಿ ತೆಗೆದುಕೊಂಡು ಹೋಗುವ ವಿಚಾರದಲ್ಲಿ ಗಲಾಟೆ ನಡೆದು ಓರ್ವ ಯುವಕ ಸಾವನ್ನಪ್ಪಿರುವ ಘಟನೆ ನಡೆದಿದೆ. ಯುವಕನ ಸಾವು ಹಾಗೂ ಇತರಡೆ ಚಿಕ್ಕಪುಟ್ಟ ಗಲಾಟೆಗಳು ಹೊರೆತು ಪಡಿಸಿದ್ರೆ ಜಿಲ್ಲೆಯಲ್ಲಿ ಶಾಂತಯುತವಾಗಿ ರಂಗಿನ ಹಬ್ಬ ನಡೆಯಿತು.
ಉತ್ತರ ಕರ್ನಾಟಕ ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೊಳಿ ಹಬ್ಬ ವಿಶೇಷವಾದ ಹಬ್ಬ, ಅದರಲ್ಲೂ ಕಲಬುರಗಿ ಜಿಲ್ಲೆಯಲ್ಲಿ ರಂಗು ರಂಗಿನ ಹೊಳಿ ಹಬ್ಬ ಭವ್ಯವಾಗಿ ಆಚರಿಸಲಾಗುತ್ತದೆ. ಮಂಗಳವಾರ ರಾತ್ರಿ ಕಾಮದಹನ ಹಾಗೂ ಬುಧವಾರ ಬಣ್ಣದ ಓಕುಳಿ ಎರಡು ದಿನ ಹೊಳಿ ಸಂಭ್ರಮಿಸಲಾಯಿತು.
Tags
ಜಿಲ್ಲಾ ಸುದ್ದಿಗಳು