ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ
UDAYAVANI NEWS
ಮಸ್ಕಿ, ಮಾರ್ಚ್ 11 : ಪಟ್ಟಣದ ಸೋಮನಾಥ ನಗರದ ನಿವಾಸಿಗಳಿಗೆ ಹಕ್ಕು ಪತ್ರ ನೀಡಬೇಕು ಎಂದು ಸೋಮನಾಥ ನಗರ ಹಿತರಕ್ಷಣ ವೇದಿಕೆ ಮಸ್ಕಿ ವತಿಯಿಂದ. ಸನ್ಮಾನ್ಯ ಶ್ರೀ ಬಿ.ಎಸ್.ಯಡಿಯೂರಪ್ಪನವರು ಮಾಜಿ ಮುಖ್ಯಮಂತ್ರಿಗಳು ಇವರಿಗೆ
ಮನವಿಯನ್ನು ಸಲ್ಲಿಸಿದರು.
ಈ ವೇಳೆ ಮಾತನಾಡಿದ ಹನುಮಂತಪ್ಪ ವೆಂಕಾಟಪುರ
ಮಸ್ಕಿಯ ಪುರಸಭೆ ವ್ಯಾಪ್ತಿಯಲ್ಲಿ ಬರುವ ಸೋಮನಾಥ ನಗರದಲ್ಲಿ ವಾಸಿಸುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮುಸ್ಲಿಂ, ಸಾಮಾನ್ಯ ವರ್ಗದ ಆರ್ಥಿಕವಾಗಿ ಹಿಂದುಳಿದವರು ಸುಮಾರು 400 ರಿಂದ 500 ನಿರ್ಗತಿಕ ಕುಟುಂಬಗಳು ಟಿ.ಬಿ.ಪಿ ಸರ್ಕಾರಿ ಸ.ನಂ. 223, 224 ರಲ್ಲಿ ಸುಮಾರು 25 ರಿಂದ 30 ವರ್ಷಗಳಿಂದ ಮನೆ ಕಟ್ಟಿಕೊಂಡು ವಾಸಿಸುತ್ತಿದ್ದಾರೆ. ವಾಸ್ತವದಲ್ಲಿ ಸದರಿ ಭೂಮಿಯು ನೀರಾವರಿ ಇಲಾಖೆಯ ವ್ಯಾಪ್ತಿಯ ಸುಮಾರು ನೂರಾರು ಏಕರೆಗಳನ್ನು ನಿರುಪಯುಕ್ತ
ಇದ್ದು, ಸದ್ಯ ಮಸ್ಕಿಯ ಸೋಮನಾಥ ನಗರವನ್ನು ವಾರ್ಡ್ ನಂ. 2 & 12 ಎಂದು ವಿಂಗಡಿಸಿದ್ದಾರೆ. ಇದರಲ್ಲಿ ಒಟ್ಟು 1400 ರಿಂದ 1500 ಮತದಾರರಿದ್ದಾರೆ. ಆದರೆ ಇವರಿಗೆ ಇಲ್ಲಿಯವರೆಗೂ ತಮ್ಮ ಮನೆಯ ಅವರಿಗಿರದಾಗಿದೆ. ಆದರೆ ಪ್ರತಿ ಚುನಾವಣೆಯ ಸಂದರ್ಭದಲ್ಲಿ ಮಾತ್ರ ನಮ್ಮನ್ನು ಗೆಲ್ಲಿಸಿ ಹಕ್ಕು ಪತ್ರ ನೀಡುತ್ತೇವೆಂದು ಸುಳ್ಳು ಭರವಸೆಯನ್ನು ನೀಡುವ ಚುನಾಯಿತ ಜನಪ್ರತಿನಿಧಿಗಳ ಭರವಸೆಯನ್ನು, ನಂಬಿದ ಈ ಜನರಿಗೆ ಇಲ್ಲಿಯವರೆಗೂ ಹಕ್ಕು ಪತ್ರ ನೀಡಲಾಗಿಲ್ಲ. ಆದರೆ ಇಲ್ಲಿನ ನಿವಾಸಿಗಳಿಗೆ ಮೂಲಭೂತ ಸೌಲಭ್ಯಗಳನ್ನು ಅಂದರೆ ಕನ್ನಡ ಶಾಲೆ, ಉರ್ದು ಶಾಲೆ, ಅಂಗನವಾಡಿ ಕೇಂದ್ರ, ಕುಡಿಯುವ ನೀರು, ವಿದ್ಯುತ್, ಸಿ.ಸಿ ರಸ್ತೆ, ಚರಂಡಿ ನಿರ್ಮಾಣ ಪುರಸಭೆಯಕ್ಕಿಂತ ಮೊದಲು ಗ್ರಾಮ ಪಂಚಾಯತ ವ್ಯವಸ್ಥೆ ಇದ್ದಾಗ ಇಲ್ಲಿನ ನಿವಾಸಿಗಳಿಗೆ ಸರ್ಕಾರದಿಂದ ಬರುವ ವಸತಿ ಸೌಲಭ್ಯ (ಮನೆಗಳನ್ನು) ವನ್ನು ನೀಡಿದೆ. ಆದರೆ ಈಗ ಪುರಸಭೆಯಾದ ನಂತರ ಇಲ್ಲಿನ ನಿವಾಸಿಗಳಿಗೆ ಮನೆಗಳನ್ನು ನೀಡುತ್ತಿಲ್ಲಾ. ವಸತಿ ರಹಿತರಿಗಾಗಿ ನಂಚಿತರಾಗಿದ್ದಾರೆ. ನೀಡುವ ಸೌಲಭ್ಯಗಳಿಂದ ಈ ನಗರದ ಜನತೆ ಸಂಪೂರ್ಣವಾಗಿ. ಯೋಜನೆಯಲ್ಲಿ ಇಲ್ಲಿನ ನಿವಾಸಿಗಳಿಗೆ ಹಕ್ಕು ಪತ್ರ ನೀಡಬೇಕೆಂದು ಅರ್ಜಿ ಸಲ್ಲಿಸಿದರೂ ಕೂಡ ಒಂದು ಕಡೆ ಸರ್ಕಾರ ನಿವೇಶನ ರಹಿತ, ವಸತಿ ರಹಿತ, ನಿರ್ಗತಿಕರಿಗೆ ಅಕ್ರಮ ಸಕ್ರಮ ಆ ಅರ್ಜಿಯನ್ನು, ಸ್ವೀಕರಿಸುತ್ತಿಲ್ಲಾ ಅಂದರೆ ಇಲ್ಲಿನ ನಿವಾಸಿಗಳ ಸಮಸ್ಯೆಗೆ ಪರಿಹಾರವೇನು? ತಾವುಗಳು ತಕ್ಷಣ ಇದರ ಬಗ್ಗೆ ಸಂಪೂರ್ಣ ಮಾಹಿತಿ ತೆಗೆದುಕೊಂಡು ತಕ್ಷಣ ಇಲ್ಲಿನ ಬಡವರಿಗೆ ಕನಿಷ್ಟ ಸರ್ಕಾರ ನೀಡುವ ವಸತಿ ಯೋಜನೆಯಲ್ಲಿ ಮನೆಗಳನ್ನು ಮಾಡುವುದರ ಜೊತೆಗೆ ಮನೆ ಕಟ್ಟಿಕೊಳ್ಳಲು ಅನುಕೂಲ ಕಲ್ಪಿಸುವ ಜೊತೆಗೆ ಸೋಮನಾಥ ನಗರದ ಈ ಸಮಸ್ಯೆಯನ್ನು ಪ್ರಕರಣವೆಂದು ಪರಿಗಣಿಸಿ ನಿವಾಸಿಗಳಿಗೆ ಹಕ್ಕು ಪತ್ರ ನೀಡಬೇಕು. ಪುರಸಭೆಯಲ್ಲಿ ನಿರ್ಣಯ ಕೈಗೊಂಡು ವಿಶೇಷ ಮಸ್ಕಿಯಲ್ಲಿ ಮಿನಿ ವಿಧಾನಸೌಧವನ್ನು ನಿರ್ಮಿಸಲು ಇದೆ ನೀರಾವರಿ ಇಲಾಖೆಯ ಭೂಮಿಯನ್ನು ನೀಡಿ ಅದಕ್ಕೆ ಪರ್ಯಾಯವಾಗಿ ಕಂದಾಯ ಇಲಾಖೆಯ ವತಿಯಿಂದ 5 ಎಕರೆ ಬರುವ PWD ಕ್ಯಾಂಪ್ ಕಂದಾಯ ಇಲಾಖೆಗೆ ಒಳಪಟ್ಟ ಭೂಮಿಯನ್ನು ನೀರಾವರಿ ಇಲಾಖೆಗೆ ಹಸ್ತಾಂತರಿಸಿ ಮಸ್ಕಿಯಲ್ಲಿರುವ ಸುಮಾರು 5 ಎಕರೆಯಷ್ಟು ಭೂಮಿಯನ್ನು ಮಿನಿ ವಿಧಾನಸೌಧ ಕಟ್ಟಡ ನಿರ್ಮಾಣಕ್ಕೆ ಹೇಗೆ ಸ್ಥಳಾವಕಾಶ ಮಾಡಿಕೊಟ್ಟಿದ್ದಿರೋ ಹಾಗೆಯೇ ಈಗ ಜನವಸತಿ ಪ್ರದೇಶಗಳಾದ TBP ಯ ಸರ್ವೇ ನಂಬರ, 223, 224 ಸೋಮನಾಥ ನಗರದ ನಿವಾಸಿಗಳಿಗೆ ಹಕ್ಕು ಪತ್ರ ನೀಡಬೇಕು ಎಂದು ಕೇಳುವ ಜೊತೆಗೆ ಉದಾ: ಮಸ್ಕಿಯ ಗಾಂಧಿನಗರದ ಹಳ್ಳದ ದಂಡೆಗೆ ಹೊಂದಿಕೊಂಡಿರುವಂತೆ TBP ಯ ಸರ್ವೇ ನಂಬರ. 16 ರ ಜಮೀನನ್ನು ಕಂದಾಯ ಇಲಾಖೆಗೆ ಹಸ್ತಾಂತರಿಸುವ ಮೂಲಕ ಅಲ್ಲಿನ ನಿರ್ಗತಿಕ, ನಿವೇಶನ ರಹಿತರಿಗೆ, ವಸತಿ ರಹಿತರಿಗೆ ಈಗಾಗಲೇ ಕಂದಾಯ ಇಲಾಖೆಯ ಮುಖಾಂತರ ಹಕ್ಕು ಪತ್ರ ನೀಡಲಾಗಿದೆ. ಅದರಂತೆ ಈ ಎರಡೂ ವಿಧದಲ್ಲಿರುವ ವ್ಯವಸ್ಥೆಯಂತೆ ಕ್ರಮ ಕೈಗೊಳ್ಳುವ ಜೊತೆಗೆ ಸೋಮನಾಥ ನಗರವನ್ನು ನೀರಾವರಿ ಇಲಾಖೆಯ ಅಧಿಕಾರಿಗಳು ತೆರುವುಗೊಳಿಸದೆ ಅಲ್ಲಿನ ನಿವಾಸಿಗಳಿಗೆ ಹಕ್ಕು ಪತ್ರ ನೀಡುವಂತೆ ಒತ್ತಾಯಿಸಿ ನಿರಂತರ ಹೋರಾಟ ಮಾಡುತ್ತಾ ಸಂಬಂಧಪಟ್ಟ ಇಲಾಖೆಯ ಸಚಿವರಿಗೆ, ಶಾಸಕರಿಗೆ, ಮಾಜಿ ಶಾಸಕರಿಗೆ, ಜಿಲ್ಲಾಧಿಕಾರಿಗಳಿಗೆ, ಇಲಾಖೆಯ ಅಧಿಕಾರಿಗಳಿಗೆ ಮತ್ತು ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸುತ್ತಾ ಬಂದಿದ್ದರೂ ಕೂಡ ನೋಡೋಣಾ! ಮಾಡೋಣಾ! ಎನ್ನುತ್ತಾ ಇಲ್ಲಿಯವರೆಗೆ ಸುಳ್ಳು ಭರವಸೆಯನ್ನು ನೀಡುತ್ತಾ ಬಂದಿದ್ದಾರೆ. ಈಗ ತಾವುಗಳು ಅತೀ ಜರುರಾಗಿ ಈ ವಿಷಯದ ಬಗ್ಗೆ ಸಮಗ್ರವಾಗಿ ಪರಿಶೀಲಿಸಿ ಸಾಧ್ಯವಾದರೆ ಮುಂದಿನ ಸಚಿವ ಸಂಪುಟದಲ್ಲಿ ಇದರ ಬಗ್ಗೆ ಚರ್ಚೆ ಮಾಡಿ ಸೋಮನಾಥ ನಗರದ ಜನರಿಗೆ ಹಕ್ಕುಪತ್ರ ನೀಡಲು ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಕ್ರಮ ಕೈಗೊಳ್ಳದೇ ಹೋದರೆ ಮುಂದೆ ನಡೆಯುವ 2023 ಸಾರ್ವತ್ರಿಕ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸಬೇಕಾಗುತ್ತದೆಂದು ತಮ್ಮ ಗಮನಕ್ಕೆ ತರುವುದರ ಮೂಲಕ ಈ ಮನವಿ ಪತ್ರವನ್ನು ಸಮಸ್ತ ಸೋಮನಾಥ ನಗರದ ಜನತೆಯ ಪರವಾಗಿ ನೀಡುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ,ಸುರೇಶ ಹರಸೂರು ಪುರಸಭೆ ಸದಸ್ಯರು,ಸುರೇಶ ಅಂತರಗಂಗಿ,
ಅಮರೇಶ ಎಮ್,ಮಲ್ಲಯ್ಯ ಬಳ್ಳಾ,
ಮಲ್ಲಯ್ಯ ಅಂಬಾಡಿ ಪುರಸಭೆ ಸದಸ್ಯರು ಮಸ್ಕಿ,
ಅಲ್ತಾಫ್ ಮೇಸ್ತ್ರಿ, ರಾಜು ಟೈಲರ್ ,
ಹನುಮಂತ ಬೈಲಗುಡ್ಡ,
ರಮೇಶ ಗುಡಸಲಿ ಸುರಸಭೆ ಸದಸ್ಯರು, ಕೇಶಿವ,ಅಮರೇಶ,
ಹಾಗೂ ಸೋಮನಾಥ ನಗರದ ನಿವಾಸಿಗಳು ಇದ್ದರು.
Tags
ಜಿಲ್ಲಾ ಸುದ್ದಿಗಳು