ವಿಜಯ ಸಂಕಲ್ಪ ಯಾತ್ರೆ ಸಮಾರಂಭ ಕಾರ್ಯಕ್ರಮ ಯಶಸ್ವಿ



ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ 
UDAYAVANI NEWS 
ಮಸ್ಕಿ,ಮಾರ್ಚ್ 11 : ಪಟ್ಟಣದ ಪೋಲೀಸ್ ಠಾಣೆ ಪಕ್ಕದ ಆವರಣದಲ್ಲಿ ಇಂದು ಭಾರತೀಯ ಜನತಾ ಪಕ್ಷದ ವಿಜಯ ಸಂಕಲ್ಪ ಯಾತ್ರೆ ಸಮಾರೋಪ ಸಮಾರಂಭದ ಕಾರ್ಯಕ್ರಮ ಇಂದು ಯಶಸ್ವಿಯಾಗಿ ಜರುಗಿತು. ಮೊದಲಿಗೆ ಪ್ರತಾಪಗೌಡ ಪಾಟೀಲ್ ರವರ ಜೀವನಾಧಾರಿತ ಪುಸ್ತಕ ಬಿಡುಗಡೆ ಮಾಡಿದರು.ಕಾರ್ಯಕ್ರಮದ ಕುರಿತು ಸಚಿವ ಶ್ರೀರಾಮಲು, ಬಿ. ಎಸ್ ಯಡಿಯೂರಪ್ಪ ಮಾಜಿ ಮುಖ್ಯಮಂತ್ರಿ ರವರು ಮಾತನಾಡಿದರು.


ಕಾರ್ಯಕ್ರಮದ ಮೊದಲಿಗೆ ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ,ನಂತರ ವೇದಿಕೆಯ ಮೇಲೆ ಹಾಸೀನರಾಗಿದ್ದ ಗಣ್ಯರನ್ನು ಸ್ವಾಗತಿಸಿ ಮಾತನಾಡುತ್ತ 
ಈಗಾಗಲೇ 23 ವಿಧಾನಸಭಾ ಕ್ಷೇತ್ರಗಳ ಯಾತ್ರೆ ಮುಗಿಸಿದ್ದು, ಬಿಜೆಪಿ ಅಧಿಕಾರಕ್ಕೆ ಬರಲು ಮೂಲ ಕಾರಣೀಭೂತರಾದ ಪ್ರತಾಪ್ ಗೌಡ ಪಾಟೀಲ್, ಕ್ಷೇತ್ರದ ರಸ್ತೆ,2023 ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್ ರನ್ನು 50,000 ಸಾವಿರ ಅಂತರದಿಂದ ಗೆಲ್ಲಿಸೋಣ. ಈಗಾಗಲೇ ನಮ್ಮ ಸರಕಾರ ಪ. ಪಂ 3 ರಿಂದ 7 % ಕ್ಕೆ ಪ. ಜಾ 15 ರಿಂದ 17% ಕ್ಕೆ ಮೀಸಲಾತಿ ಹೆಚ್ಚಿಸಿದೆ. ನಮ್ಮದು ಡಬಲ್ ಇಂಜಿನ್ ಸರಕಾರ. ಉಚಿತ ಶಿಕ್ಷಣ,ಮಹಿಳೆಯರಿಗೆ ಉಚಿತ ಬಸ್ ಪಾಸ್ ನೀಡಲಾಗುವುದು ಎಂದು ಸಚಿವ ಬಿ. ಶ್ರೀರಾಮುಲು ತಿಳಿಸಿದರು.ತುಂಗಾ ಭದ್ರಾ ಎಡ ದಂಡೆ ಕಾಲುವೆಗೆ ನೀರಿನ ವ್ಯವಸ್ಥೆ,480 ಕೋಟಿ NH 150A ರಸ್ತೆ ಕಾಮಗಾರಿ 120 ಕೋಟಿ, ಏರ್ಪೋರ್ಟ್ ನಿರ್ಮಾಣ ಕಾರ್ಯ ಪ್ರಗತಿ, ಬೈಪಾಸ್ ರಸ್ತೆ ಅಭಿವೃದ್ಧಿಕರಣ ಮಾಡಲಾಗುವುದು, ಆದ್ದರಿಂದ ಮತ್ತೊಮ್ಮೆ ಮಸ್ಕಿ ವಿಧಾನಸಭಾ ಕ್ಷೇತ್ರಕ್ಕೆ ಪ್ರತಾಪ್ ಗೌಡ ಪಾಟೀಲ್ ರನ್ನು ಗೆಲ್ಲಿಸುವ ಕೆಲ್ಸಾ ಮಾಡುವ ತಾವೆಲ್ಲ ಮುಂದಾಗಬೇಕು ಎಂದು ಕರಡಿ ಸಂಗಣ್ಣ ಸಂಸದರು ಕೊಪ್ಪಳ ಕ್ಷೇತ್ರ ರವರು ಎಂದರು.
5 A ಕಾಲುವೆ ಹೋರಾಟ ಸಮಿತಿಯ ಕುತಂತ್ರತನದಿಂದ ಚುನಾವಣೆಯಲ್ಲಿ ಬಹಳ ಅಂತರದಿಂದ ನಾವು ಸೋತಿರಬಹುದು ಆದರೆ ಮುಂದಿನ ದಿನಮಾನಗಳಲ್ಲಿ ನಮ್ಮ ಪಕ್ಷವನ್ನು ಮತ್ತೆ ಅಭೂತಪೂರ್ವವಾಗಿ ಗೆಲ್ಲಿಸುತ್ತಿರಿ ಎಂಬ ಭರವಸೆ ನಮಗಿದೆ. ಸೋಮನಾಥ ನಗರ ಜನತೆಗೆ ವಸತಿಯ ಹಕ್ಕುಪತ್ರ ವನ್ನು ಕೊಡಿಸಲು ಸಂಭಂದಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಹಕ್ಕು ಪತ್ರ ಕೊಡುವ ನಿಟ್ಟಿನಲ್ಲಿ ನಾನು ನಿಮಗೆ ಮಾತು ಕೊಡುತ್ತೇನೆ ಎಂದು ಪ್ರತಾಪ್ ಗೌಡ ಪಾಟೀಲ್ ಮಾಜಿ ಶಾಸಕರು ಭರವಸೆ ನೀಡಿದರು.
ಕೊನೆಯದಾಗಿ ಹೆಣ್ಣುಮಕ್ಕಳಿಗೆ 1000 ರೂಪಾಯಿಯನ್ನು,ಮುಂಗಾರು ಬೆಳೆ ಬಿತ್ತನೆ ಬೀಜ ಕೊಂಡುಕೊಳ್ಳಲು 10,000 ರೂಪಾಯಿ,ಜೀವ ವಿಮೆಗಾಗಿ 180 ಕೋಟಿ ಹಣವನ್ನು ಸರಕಾರವೇ ಕಟ್ಟುತ್ತೆ, ಎಸ್ಸಿ.ಎಸ್ಟಿ ಜನಾಂಗದ 7% ಮೀಸಲಾತಿ ಹೆಚ್ಚಳ, ತಾಂಡಾ ಮತ್ತು ಗೊಲ್ಲರ ಹಟ್ಟಿ ಜನತೆಗೆ 50,00 ಹಕ್ಕು ಪತ್ರ ವಿತರಿಸಲಾಯಿತು.ತುಂಗಭದ್ರಾ ಎಡ ದಂಡೆ ಕಾಲುವೆಗೆ ಏ 10 ರವೆಗೆ ನೀರು ಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ನಂದವಾಡಗಿ ಏತ ನೀರಾವರಿ 7,000 ಏಕರೆ ಯಲ್ಲಿ 57 ಕೋಟಿ ರೂಪಾಯಿ ವೆಚ್ಚದ ಕಾಮಗಾರಿ,ಕೆರೆ ತುಂಬಿಸುವುದಕ್ಕಾಗಿ 470 ಕೋಟಿ ಹಣವನ್ನು ಮಂಜೂರು,120 ಕೋಟಿ ಮೊತ್ತದ ಮುದಬಾಳ ಕ್ರಾಸ್ ನಿಂದ ಸಂತೆ ಕೆಲ್ಲೂರು ವರೆಗೆ ರಸ್ತೆ ಕಾಮಗಾರಿ, 1421 ಕೋಟಿಯ ವಸತಿ ನಿಲಯವನ್ನು ಮಂಜೂರು ಮಾಡಲು ಸರಕಾರದ ಮುಂದೆ ಒತ್ತಾಯ. ಪ್ರಧಾನಿ ನರೇಂದ್ರ ಮೋದಿ ಮುಂದೆ ರಾಹುಲ್ ಗಾಂಧಿ ಸಮಾನ ನಾ...? ಎಂದು ಲೇವಡಿ ಮಾಡಿದರು.
 ರಾಜ್ಯದ 224 ಕ್ಷೇತ್ರದಲ್ಲಿ 120 ಸೀಟು ಗೆದ್ದು ಅಧಿಕಾರಕ್ಕೆ ಬರುವುದು ಖಚಿತ. ಕಾಂಗ್ರೇಸ್ ಅವರು ಏನು ಮಾಡಿದ್ದೀರಿ ? ಪ್ರತಾಪ್ ಗೌಡ ಪಾಟೀಲ್ ರನ್ನು 30 ರಿಂದ 45 ಸಾವಿರ ಅಂತರದಿಂದ ಗೆಲ್ಲಿಸುತ್ತಿರಿ ಎಂಬ ನಂಬಿಕೆ ನನಗಿದೆ ಎಂದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಬಿ.ಎಸ್ ಯಡಿಯೂರಪ್ಪ ಮಾಜಿ ಮುಖ್ಯಮಂತ್ರಿ ನಂಬುಗೆಯ ಮಾತುಗಳನ್ನಾಡಿ ತಮ್ಮ ಭಾಷಣಕ್ಕೆ ವಿರಾಮ ನೀಡಿದರು.

ಇದೇ ಸಂದರ್ಭದಲ್ಲಿ ಜಿಲ್ಲೆಯ ಹಾಗೂ ವಿವಿಧ ತಾಲೂಕಿನ ಬಿಜೆಪಿ ಪಕ್ಷದ ಕಾರ್ಯಕರ್ತರು, ಮಸ್ಕಿ ತಾಲೂಕಿನ ಹಾಗೂ ಕ್ಷೇತ್ರದ ವಿವಿಧ ಗ್ರಾಮದ ಸಾವಿರಾರು ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.




Post a Comment

Previous Post Next Post