ಕಾಮದಹನ ಬೆಂಕಿಗಾಗಿ ಕಲಹ ಯುವಕ ಸಾವು




ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ 
UDAYAVANI NEWS 
ಕಲಬುರಗಿ,ಮಾರ್ಚ್ 09 : ಮಂಗಳವಾರ ರಾತ್ರಿ ಜಿಲ್ಲೆಯ ಎಲ್ಲೆಡೆ ಅದ್ದೂರಿಯಾಗಿ ಕಾಮದಹನ ಮಾಡಲಾಯಿತು. ಇದೇ ಕಾಮದಹನ ವಿಚಾರಕ್ಕೆ ಸಂಬಂಧಿಸಿದಂತೆ ಓರ್ವ ಯುವಕನ ಸಾವು ಚಿತ್ತಾಪುರ ತಾಲೂಕಿನ ಲಾಡ್ಲಾಪುರ ಗ್ರಾಮದಲ್ಲಿ ನಡೆದಿದೆ. ರವಿಕುಮಾರ ಓಚರ್ (25) ಮೃತ ಯುವಕ. 

ಲಾಡ್ಲಾಪುರನಲ್ಲಿ ಗ್ರಾಮ ದೇವತೆ ಮರೆಗಮ್ಮ ದೇವಸ್ಥಾನ ಆವರಣದಿಂದ ಬೆಂಕಿಯ ಕಿಡಿ ತೆಗೆದುಕೊಂಡು ಹೋಗಿ ತಮ್ಮ ತಮ್ಮ ಬಡಾವಣೆಗಳಲ್ಲಿನ ಕಾಮಗಳ ದಹನ ಮಾಡುವ ಪದ್ಧತಿ ಇದೆ. ಈ ಪ್ರಯುಕ್ತ ಮಂಗಳವಾರ ಸಂಜೆ ಬೆಂಕಿ ಕಿಡಿ ತೆಗೆದುಕೊಂಡು ಹೋಗುವಾಗ ಕೆಲವರ ಮದ್ಯೆ ವಾಗ್ವಾದ ನಡೆದಿದೆ. ಈ ವೇಳೆ ರವಿಕುಮಾರನನ್ನು ತಳ್ಳಲಾಗಿದ್ದು ನೆಲಕ್ಕೆ ಬಿದ್ದ ರವಿಯ ತಲೆಗೆ ಗಂಭೀರ ಪೆಟ್ಟಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎನ್ನಲಾಗಿದೆ.

ಈ ಕುರಿತು ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸದ್ಯ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು ಪೊಲೀಸ್ ಬಂದೋಬಸ್ ಕೈಗೊಳ್ಳಲಾಗಿದೆ.

Post a Comment

Previous Post Next Post