ಸರ್ಕಾರದ ಸೌಲಭ್ಯಗಳನ್ನು ಕಾರ್ಮಿಕರಿಗೆ ತಲುಪಿಸುವುದೇ ನಮ್ಮ ಯೂನಿಯನ್ ಉದ್ದೇಶ ; ದೇವಿಂದ್ರ ಈ ತಳವಾರ




ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ 
UDAYAVANI NEWS 
ಜೇವರ್ಗಿ,ಮಾರ್ಚ್ 25 : ಪಟ್ಟಣದಲ್ಲಿರುವ ನಿಜಶರಣ ಶ್ರೀ ಅಂಬಿಗರ ಚೌಡಯ್ಯ ಭವನದಲ್ಲಿ ಕರ್ನಾಟಕ ಕಾರ್ಮಿಕರ ಹಿತ ರಕ್ಷಣಾ ಯೂನಿಯನ್ ವತಿಯಿಂದ ಸರ್ಕಾರದ ಕಾರ್ಮಿಕ ಕಿಟ್ ಗಳು ವಿತರಣೆ ಮಾಡಲಾಯಿತು. ಕಟ್ಟಡ ಕಾರ್ಮಿಕರಿಗೆ ಪ್ಲಂಬಿಂಗ್ ಕಾರ್ಮಿಕರು ಮಹಿಳಾ ಕಾರ್ಮಿಕರಿಗೆ ಕಿಟ್ ಮತ್ತು ಸೀರೆ ವಿತರಿಸಲಾಯಿತು.
 ಈ ಸಂದರ್ಭದಲ್ಲಿ ಕಾರ್ಮಿಕರ ಹಿತ ರಕ್ಷಣಾ ಯೂನಿಯನ್ ಕರ್ನಾಟಕ ರಾಜ್ಯ ಕಾರ್ಯಧ್ಯಕ್ಷ ದೇವಿಂದ್ರ ಈ ತಳವಾರ ಮಾತನಾಡಿದರು.
ರಾಜ್ಯದಲ್ಲಿ ಬಡ ಕಾರ್ಮಿಕರ ಹಿತವನ್ನು ಬಯಸುವ ನಿಟ್ಟಿನಲ್ಲಿ ನಮ್ಮ ಯೂನಿಯನ್ ಸರ್ಕಾರದ ಸೌಲಭ್ಯ ಕಾರ್ಮಿಕರಿಗೆ ತಲುಪಿಸುವ ಕಾರ್ಯ ಮಾಡಲಾಗುತ್ತಿದೆ ಬಹಳಷ್ಟು ಕಾರ್ಮಿಕರಿಗೆ ಸರ್ಕಾರದ ಯೋಜನೆಗಳ ಬಗ್ಗೆ ಸೌಲಭ್ಯಗಳ ಬಗ್ಗೆ ಮಾಹಿತಿ ಇರುವದಿಲ್ಲ. ನಮ್ಮ ಯೂನಿಯನ್ ಕೋವಿಡ್ ಸಂದರ್ಭದಲ್ಲಿ ಕಿಟ್ ಗಳು ಕಾರ್ಮಿಕರಿಗೆ ತಲುಪಿಸುವ ಕೆಲಸ ಮಾಡಿದೆ ಮುಂಬರುವ ದಿನಗಳಲ್ಲಿ ನಮ್ಮ ಯೂನಿಯನ್ ವತಿಯಿಂದ ಹೆಚ್ಚು ಹೆಚ್ಚು ಸೇವೆ ಮಾಡುವ ಗುರಿ ಹೊಂದಿದೆ ಎಂದು ಹೇಳಿದರು.
 ಕಲ್ಬುರ್ಗಿ ಜಿಲ್ಲಾಧ್ಯಕ್ಷ ಸಂತೋಷ್ ಬಿಂದಗಿ ಉಪಾಧ್ಯಕ್ಷ ಸಿದ್ದು ಕಾಮನಕೇರಿ ರಾಜು ತಳವಾರ್ ಚಂದ್ರು ತಳವಾರ್ ಮಲ್ಲು ತಲ್ವಾರ್ ರಾಮು ಚನ್ನೂರ್ ಸೇರದಂತೆ ಇನ್ನಿತರರು ಉಪಸ್ಥಿತರಿದ್ದರು.

Post a Comment

Previous Post Next Post