4 ಕೋಟಿ ರೂಪಾಯಿ ವೆಚ್ಚದಲ್ಲಿ ಬ್ರಿಜ್ ನಿರ್ಮಾಣ ಕಾಮಗಾರಿಗೆ ರಾಜಾ ಹನುಮಪ್ಪ ನಾಯಕ ಭೂಮಿ ಪೂಜೆ




ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ 
UDAYAVANI NEWS 
ಯಾದಗಿರಿ, ಮಾರ್ಚ್ 25 : ಜಿಲ್ಲೆಯ ಸುರಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಮಂಗಿಹಾಳ ಗ್ರಾಮದಲ್ಲಿ ಇಂದು‌ ಸುಮಾರು ‌4 ಕೋಟಿ ರೂಪಾಯಿ ವೆಚ್ಚದಲ್ಲಿ ಬ್ರಿಜ್ ನಿರ್ಮಾಣ ಕಾಮಗಾರಿಗೆ ಮಾಜಿ ಜಿಲ್ಲಾ ಪಂಚಾಯತ ಅಧ್ಯಕ್ಷ ರಾಜಾ ಹನುಮಪ್ಪ ನಾಯಕ ತಾತಾ ಭೂಮಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷದ ಯುವ‌ ಮುಖಂಡ ಶಂಕರ್ ನಾಯಕ, ಮಾಜಿ ತಾಲೂಕು ಪಂಚಾಯತ ಅಧ್ಯಕ್ಷ ಭೀಮಣ್ಣ ಬೇವಿನಾಳ, ಕಕ್ಕೇರಾ ಪುರಸಭೆ ಸದಸ್ಯ ಮಲ್ಲು ದಂಡಿನ್, ಭಾರತೀಯ ಜನತಾ ಪಕ್ಷದೆಸ್.ಟಿ ಯುವ ಮೋರ್ಚಾದ ಯಾದಗಿರಿ ಜಿಲ್ಲಾ ಉಪಾಧ್ಯಕ್ಷ ಶರಣು ನಾಯಕ ಭೈರಿಮಡ್ಡಿ, ಹಿರಿಯ ಮುಖಂಡರಾದ ಸಣ್ಣ ದೇಸಾಯಿ ದೇವರಗೋನಾಲ, ಬಲಭೀಮ ನಾಯಕ ಭೈರಿಮಡ್ಡಿ, ರಂಗನಗೌಡ ದೇವಿಕೇರಾ, ವಿಜಯ ಕುಮಾರ್ ಮಂಗಿಹಾಳ, ಶಿವನಗೌಡ ವಾಗಣಗೇರಾ ಹಾಗೂ ಮಂಗಿಹಾಳ ಗ್ರಾಮದ ಹಿರಿಯ ಮುಖಂಡರು ಮತ್ತು ಸಾರ್ವಜನಿಕರು ಭಾಗಿಯಾಗಿದ್ದರು.

Post a Comment

Previous Post Next Post