UDAYAVAN NEWS
ಮಸ್ಕಿ, ಮಾರ್ಚ್ 02 : ತಾಲೂಕಿನ ಮೆದಿಕಿನಾಳ ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮೆದಿಕಿನಾಳ ವತಿಯಿಂದ ಸೊಸೈಟಿ ಬ್ಯಾಂಕ್ ಅಧ್ಯಕ್ಷರಾದ ಮಧು ಲಿಂಗರಾಜ ನಾಡಗೌಡ ವಕೀಲರು ಇವರಿಂದ ಜೋಳದ ಕೇಂದ್ರ ಚಾಲನೆ ನೀಡಲಾಯಿತು.
ಬಹುತೇಕ ಸುತ್ತಮುತ್ತಲಿನ ಗ್ರಾಮಗಳ ರೈತರು ದೂರದ ಪಟ್ಟಣಕ್ಕೆ ಹೋಗಿ ಜೋಳವನ್ನು ಮಾರಾಟ ಮಾಡಲು ಬಹಳ ಕಷ್ಟ ಪಡುವ ಸಂಕಷ್ಟವನ್ನು ತಪ್ಪಿಸುವ ನಿಟ್ಟಿನಲ್ಲಿ ಮೆದಿಕಿನಾಳ ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮೆದಿಕಿನಾಳ ವತಿಯಿಂದ ಸೊಸೈಟಿ ಬ್ಯಾಂಕ್ ನ ಸರ್ವ ಸಿಬ್ಬಂದಿ ಹಾಗೂ ಪದಾಧಿಕಾರಿಗಳ ಸಮ್ಮುಖದಲ್ಲಿ ಅಧ್ಯಕ್ಷರಾದ ಮಧು ಲಿಂಗರಾಜ ನಾಡಗೌಡ ವಕೀಲರು ಜೋಳದ ಕೇಂದ್ರವನ್ನು ಚಾಲನೆ ನೀಡಿದರು.
ನಂತರ ಮಾತನಾಡಿ ನಮ್ಮ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮೆದಿಕಿನಾಳ ವತಿಯಿಂದ ಈ ಭಾಗದ ರೈತ ಭಾಂದವರು ದೂರದ ಪಟ್ಟಣಕ್ಕೆ ಹೋಗಿ ಜೋಳವನ್ನು ಮಾರಾಟ ಮಾಡುವುದು ಬೇಡ ನಮ್ಮ ಮೆದಿಕಿನಾಳ ಗ್ರಾಮದಲ್ಲಿಯೇ ಸರಕಾರಿ ಕೇಂದ್ರಕ್ಕೆ ನೇರವಾಗಿ ಮಾರಾಟ ಮಾಡುವ ಮೂಲಕ ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕಬಹುದು. ಹಾಗೆಯೇ ಸಹಕಾರಿ ನಿಗದಿತ ಕ್ವಿಂಟಾಲ್ ಗೆ 2950 ರೂಪಾಯಿ ಬೆಂಬಲ ಬೆಲೆಯಾಗಿ ನಿಗದಿಯಾಗುತ್ತದೆ ಎಂದರು.
ಈ ಸಂಧರ್ಭದಲ್ಲಿ
ಯಲ್ಲಪ್ಪ ಉಪಾಧ್ಯಕ್ಷರು, ನಿರ್ದೇಶಕರುಗಳಾದ ಶೇಖರಪ್ಪ,ಅಮರಪ್ಪ,ವೀರಪ್ಪ,ರಾಮಣ್ಣ, ಮಹಾದೇವಪ್ಪ, ಹುಸೇನ್ ಸಾಬ್,ಮಲ್ಲಪ್ಪ ಸೇರಿದಂತೆ ಬಸವರಾಜ್ ಮರಕಲ ದಿನ್ನಿ ಕಾರ್ಯನಿರ್ವಾಹಕ ಅಧಿಕಾರಿ, ಯಲ್ಲಪ್ಪ ಕೋಸಗಿ ಎಸ್ ಡಿ ಎಂ ಸಿ ಅಧ್ಯಕ್ಷರು, ಮಲಕನ ಗೌಡ, ಸಿಬ್ಬಂದಿಗಳಾದ ನವೀನ್ ಕುಮಾರ್ ಅಂಬಣ್ಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
Tags
ಜಿಲ್ಲಾ ಸುದ್ದಿಗಳು