UDAYAVANI NEWS
ಮಸ್ಕಿ, ಫೆಬ್ರುವರಿ 24 : ದುರುಗಪ್ಪ ಮತ್ತು ಸುಭಾಷ್ ಎಂಬ ವ್ಯಕ್ತಿಯು ಮೋಟಾರು ಬೈಕ್ ನಲ್ಲಿ ಮೇರನಾಳ ಗ್ರಾಮದಲ್ಲಿ ಕಾರ್ಯಕ್ರಮ ಮುಗಿಸಿ ಮಸ್ಕಿ - ಮುದುಗಲ್ ರಸ್ತೆಯ ಮಾರ್ಗವಾಗಿ ಊರಿಗೆ ತೆರಳುವ ಸಂದರ್ಭದಲ್ಲಿ ವೇಗವಾಗಿ ಚಲಿಸಿದ್ದರಿಂದ ಬೈಕ್ ಸವಾರ ದುರುಗಪ್ಪ ಮೃತಪಟ್ಟಿದ್ದಾನೆ ಈ ಕುರಿತು ಪ್ರಕರಣ ದಾಖಲಿಸಲಾಗಿದೆ ಎಂದು ಮಸ್ಕಿ ಪೋಲಿಸ್ ಠಾಣೆ ಮೂಲಗಳು ತಿಳಿಸಿವೆ.
ದಿನಾಂಕ 21- 02- 2023 ಮಂಗಳವಾರ ದಂದು ಮಧ್ಯಾಹ್ನ ದುರುಗಪ್ಪ ಮತ್ತು ಸುಭಾಷ್ ಎಂಬ ಆರೋಪಿತ ವ್ಯಕ್ತಿಯು ಮೇರನಾಳ ಗ್ರಾಮದಲ್ಲಿ ದೇವರ ಕಾರ್ಯಕ್ರಮ ಮುಗಿಸಿ KA 36 EL - 2460 ಮಸ್ಕಿ - ಮುದುಗಲ್ ರಸ್ತೆಯ ಮಾರ್ಗವಾಗಿ ಅತೀ ವೇಗವಾಗಿ ಮತ್ತು ಅಲಕ್ಷ್ಯತನದಿಂದ ಬೈಕ್ ಮೇಲೆ ಸವಾರಿ ಮಾಡಿಕೊಂಡು ಊರಿಗೆ ತೆರಳುವ ಸಂದರ್ಭದಲ್ಲಿ ಹಿಂದೆ ಕುಳಿತ ದುರುಗಪ್ಪ ಎಂಬುವವರಿಗೆ ಹಿಂದೆಲೆಗೆ ಭಾರಿ ಗಾಯವಾಗಿ ಬಲ ಕಿವಿಯಲ್ಲಿ ರಕ್ತ ಸೋರಿ, ಎಡಗೈಗೆ ಹಾಗೂ ಎರಡು ಕಾಲುಗಳಿಗೆ ತೆರಚಿದ ಗಾಯವಾಗಿ,ಮಾತನಾಡುವ ಸ್ಥಿತಿಯಲ್ಲಿ ಇರದೆ ಇದ್ದರಿಂದ 108 ಆಂಬುಲೆನ್ಸ್ ನಲ್ಲಿ ಸಿಂಧನೂರು ತಾಲ್ಲೂಕು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮಾಡಿದ್ದು, ದುರುಗಪ್ಪ ನಿಗೆ ಚಿಕಿತ್ಸೆ ಫಲಕಾರಿ ಯಾಗದೆ ದಿನಾಂಕ 22-02-2023 ರಂದು ಬೆಳಗ್ಗೆ 6:20 ಕ್ಕೆ ಮೃತನಾಗಿದ್ದಾನೆ.ಆರೋಪಿ ಸುಭಾಷ್ ಸಿಂಧನೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ಅಪಘಾತವು ಮೋಟಾರ್ ಸೈಕಲ್ KA 36 EL - 2460 ರಲ್ಲಿ ಸವಾರ ಅತೀ ಜೋರಾಗಿ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ನಿಯಂತ್ರಣ ತಪ್ಪಿದ್ದರಿಂದ ಈ ಘಟನೆ ಜರುಗಿದೆ ಎಂದು ಮಸ್ಕಿ ಪೊಲೀಸ್ ಠಾಣಾ ಮೂಲಗಳು ತಿಳಿಸಿವೆ.
Tags
ಜಿಲ್ಲಾ ಸುದ್ದಿಗಳು