UDAYAVANI NEWS
ಮಸ್ಕಿ, ಫೆಬ್ರುವರಿ 23 : 2023 ರ ವಿಧಾನಸಭಾ ಸಾರ್ವತ್ರಿಕ ಚುನಾವಣೆ ನಿಮಿತ್ತ ತಾಲೂಕಿನ ಮತಗಟ್ಟೆ ಕೇಂದ್ರಗಳನ್ನು ಜಿಲ್ಲಾಧಿಕಾರಿ ಆರ್ ಚಂದ್ರಶೇಖರ್ ವೀಕ್ಷಣೆ ಮಾಡಿದರು.
ಮಸ್ಕಿ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಅಮೀನಗಡ, ಮಟ್ಟೂರು,ಗೋನಾಳ ಗ್ರಾಮದ ಸರಕಾರಿ ಶಾಲಾ ಕಟ್ಟಡವನ್ನು ತಾಲೂಕಿನ ಪ್ರಭಾರಿ ತಹಶೀಲ್ದಾರ್ ಅರುಣ್ ಹೆಚ್ ದೇಸಾಯಿ ಕಂದಾಯ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ 2023 ರ ವಿಧಾನಸಭಾ ಸಾರ್ವತ್ರಿಕ ಚುನಾವಣೆ ನಿಮಿತ್ತ ರಕ್ಷಣೆಯ ಹಿತದೃಷ್ಟಿಯಿಂದ ಕಟ್ಟಡವನ್ನು ಜಿಲ್ಲಾಧಿಕಾರಿ ಆರ್ ಚಂದ್ರಶೇಖರ್ ವೀಕ್ಷಿಸಿ ಪರಿಶೀಲಿಸಿದರು.
ಇದೇ ಸಂದರ್ಭದಲ್ಲಿ
ನಾಡ ತಹಶೀಲ್ದಾರ್ ದೇವರಾಜ್, ಶರಣೇಗೌಡ ಕಂದಾಯ ನಿರೀಕ್ಷಕರು ಮಸ್ಕಿ, ನಾಗಲಿಂಗಪ್ಪ ಪತ್ತಾರ ನಾಡ ತಹಶೀಲ್ದಾರ್, ಮತಗಟ್ಟೆಗೆ ಸಂಭಂದಿಸಿದ ಬಿಎಲ್ಒ ಗಳು,ಗ್ರಾಮ ಸಹಾಯಕರು, ಅರುಣ್ ಕುಮಾರ್ ಸಿಬ್ಬಂದಿ ಮಸ್ಕಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
Tags
ಜಿಲ್ಲಾ ಸುದ್ದಿಗಳು