ಕಟ್ಟಕೊಂಡವನಿಗೆ ಡೈವೋರ್ಸ್ ಕೊಟ್ಟು ಬಂದ ಅಂಟಿಗೆ ಪ್ರೀತಿಸಿದವನು ಪರಾರಿಯಾದ..!



ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ 
UDAYAVANI NEWS 
ಕೋಲಾರ, ಫೆಬ್ರುವರಿ 22 : ಒಬ್ಬಂಟಿಯಾಗಿ ಪ್ರಿಯಕರನ ಮನೆ ಎದುರು ಪ್ರತಿಭಟನೆ ಮಾಡುತ್ತಿರುವ ಯುವತಿ, ಮತ್ತೊಂದೆಡೆ ಅಣ್ಣ ಹಾಗೂ ಕುಟುಂಬದ ಸ್ಥಿತಿಯನ್ನ ನೆನೆದು ಕಣ್ಣೀರು ಹಾಕುತ್ತಿರುವ ಅಮ್ಮ, ತಂಗಿ, ಇದೆಲ್ಲಾ ದೃಶ್ಯಗಳು ಕಂಡು ಬಂದಿದ್ದು ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ದೊಡ್ಡಮಲ್ಲೆ ಗ್ರಾಮದಲ್ಲಿ.

ಹೌದು, ಇದೇ ಗ್ರಾಮದ ಕಿರಣ್ ಹಾಗೂ ಪೂಜಾ ಐದಾರು ವರ್ಷಗಳಿಂದ ಪ್ರೀತಿಸಿದ್ದಾರೆ. ಆದರೆ ಮನೆಯವರು ಪೂಜಾಳಿಗೆ ಬೇರೊಬ್ಬ ಯುವಕನೊಂದಿಗೆ ಮದುವೆ ಮಾಡಿದ್ದಾರೆ. ಆದರೂ ಪೂಜಾ ತನ್ನ ಹಳೆಯ ಪ್ರಿಯಕರ ಕಿರಣನನ್ನು ಬಿಡದೆ ಆತನ ಬಳಿಗೆ ಬಂದಿದ್ದಾಳೆ. ಆಗ ಪ್ರೀತಿಸುತ್ತಿದ್ದ ಯುವಕ ಕಿರಣ್ ನಿನ್ನ ಗಂಡನಿಗೆ ಡೈವೋರ್ಸ್ ಕೊಟ್ಟು ಬಾ, ನಂತರ ಮದುವೆಯಾಗೋಣ ಎಂದಿದ್ದಾನೆ. ಅದರಂತೆ ಪೂಜಾ ತನ್ನ ಗಂಡನಿ0ದ ಡೈವೋರ್ಸ್ ಪಡೆದು ಪ್ರಿಯಕರನ ಬಳಿ ಬಂದಿದ್ದಾಳೆ. ಆದ್ರೆ ಈಗ ನಮ್ಮ ಮನೆಯವರು ಮದುವೆಗೆ ಒಪ್ಪುತ್ತಿಲ್ಲ ಎಂದು ಪ್ರಿಯಕರ ಕಿರಣ್ ಕೈ ಕೊಟ್ಟು ಪರಾರಿಯಾಗಿದ್ದಾನೆ . ಹಾಗಾಗಿ ನೊಂದ ಯುವತಿ ಪ್ರಿಯಕರ ಕಿರಣ್ ಮನೆ ಎದುರು ಕಳೆದ ಎರಡು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾಳೆ.

Post a Comment

Previous Post Next Post