ಗ್ರಾಮ ಪಂಚಾಯಿತಿ ಪಿ.ಡಿ.ಓ ವರ್ಗಾವಣೆ ಮಾಡಿ ಕರ್ನಾಟಕ ಜನ ಬೆಂಬಲ ವೇದಿಕೆ ಎಚ್ಚರಿಕೆ



ಸುದ್ದಿ ಸಂಪಾದಕರು ಗ್ಯಾನಪ್ಪ ದೊಡ್ಡಮನಿ 
UDAYAVANI NEWS 
ಯಾದಗಿರಿ, ಫೆಬ್ರುವರಿ 22 : ಜಿಲ್ಲೆಯ ಸುರಪುರ ತಾಲೂಕಿನ ಕರಡಕಲ್ ಗ್ರಾಮ ಪಂಚಾಯತಿಯ ಪಿ.ಡಿ.ಓ ರವರು ಪಂಚಾಯತಿಗೆ 2 ತಿಂಗಳುಗಳಿಂದ ಪಂಚಾಯಿತಿಗೆ ಬರದೇ ಮತ್ತು ಕುಡಿಯುವ ನೀರಿನ ಸಮಸ್ಯೆ, ನೀರಿನ ಒಳಚರಂಡಿ ವ್ಯವಸ್ಥೆ, ವಿದ್ಯಾರ್ಥಿವೇತನ ಸಮಸ್ಯೆ ಕುರಿತು ಯಾವುದೇ ಅಧಿಕಾರಿಗಳು ಸ್ಪಂದಿಸಿಲ್ಲ. ಕೂಡಲೇ ಅಧಿಕಾರಿಗಳು ಎಚೇತ್ತುಕೊಂಡು ಅಧಿಕಾರಿಗಳು ವಿಶೇಷ ಗಮನಹರಿಸಿ ಸಾರ್ವಜನಿಕ ಕುಂದುಕೊರತೆಗಳನ್ನು ಸರಿಪಡಿಸಿ ಈಗಿರುವ ಅಭಿವೃದ್ಧಿ ಅಧಿಕಾರಿಯನ್ನು ಕೂಡಲೇ ವರ್ಗಾವಣೆ ಮಾಡಿ ಜನರ ಸಮಸ್ಯೆಗಳಿಗೆ ಸ್ಪಂದಿಸುವಂತ ಪ್ರಾಮಾಣಿಕ ಅಧಿಕಾರಿಯನ್ನು ನೇಮಕ ಮಾಡಬೇಕು. ಇಲ್ಲದಿದ್ದಲ್ಲಿ ತಾಲೂಕು ಪಂಚಾಯತಿಗೆ ಬೀಗಮುದ್ರೆ ಹಾಕಿ ಉಗ್ರವಾದ ಪ್ರತಿಭಟನೆ ಮಾಡಲಾಗುವುದೆಂದು ಕರ್ನಾಟಕ ಜನ ಬೆಂಬಲ ವೇದಿಕೆ ಎಚ್ಚರಿಕೆ ನೀಡಿದೆ. ಈ ಸಂದರ್ಭದಲ್ಲಿ ಕೆಂಭಾವಿ ಹೋಬಳಿ ಅಧ್ಯಕರಾದ ಮಲ್ಲಿಕಾರ್ಜುನ್ ಹೊಸಗೌಡರ್, ವಿನಾಯಕ್ ಎಚ್ ನಾಯಕ್, ಮಂಜುನಾಥ್ ಬಡಿಗೇರ್, ಸಿದ್ದಣ್ಣ ನಾಟಿಕಾರ್, ಭೀಮಣ್ಣ ಬಿ ಬೇಟೆಗಾರ ಹಾಗೂ ರೈತಮುಖಂಡರು, ಊರಿನ ಹಿರಿಯರು ಭಾಗವಹಿಸಿದ್ದರು.

Post a Comment

Previous Post Next Post