ಬಸ್ ನಿಲ್ದಾಣದಲ್ಲಿ ಸ್ವಚ್ಚತೆ, ಕುಡಿಯುವ ನೀರು, ಉಪಹಾರ ಗೃಹ ವ್ಯವಸ್ಥೆ ಇಲ್ಲದೇ ಪ್ರಯಾಣಿಕರ ಪರದಾಟ




ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ 
UDAYAVANI NEWS 
ಲಿಂಗಸೂಗೂರು, ಫೆಬ್ರುವರಿ 24 : ಪಟ್ಟಣದ ಈಶಾನ್ಯ ಕನಾ೯ಟಕ ಬಸ್ ನಿಲ್ದಾಣ ಉದ್ಘಾಟನೆಗೂಂಡು ಎರಡು ತಿಂಗಳು ಕಳಿತಬಂದರು ಬಸನಿಲ್ದಾಣದಲ್ಲಿ ಮೂಲಭೂತ ಸೌಲಭ್ಯೆಗಳಾದ ಉಪಹಾರ ಗೃಹ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಬಸನಿಲ್ದಾಣದಲ್ಲಿ ಸ್ವಚ್ಚತೆ ಮಾಯಾ ಮೂಲಭೂತ ಸೌಕರ್ಯಗಳಿಲ್ಲದೆ ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರು ನಿತ್ಯ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.

ಬಸನಿಲ್ದಾಣ ಉದ್ಘಾಟನೆಗೂಂಡು ಎರಡು ತಿಂಗಳಿಗಿಂತ ಹೆಚ್ಚು ಸಮಯವಾದರು ಬಸನಿಲ್ದಾಣದಲ್ಲಿ ಕ್ಯಾಂಟಿನ (ಉಪಹಾರ ಗೃಹ) ದ ಮಳಿಗೆ ಖಾಲಿ ಬಿದ್ದಿದೆ. ಇದ್ದರಿಂದ ಪ್ರಯಾಣಿಕರಿಗೆ ತುಂಬಾ ಸಮಸ್ಯೆಯಾಗಿದೆ,ಕೂಡಲೇ ಸಾರಿಗೆ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೂಳ್ಳಬೇಕು. ಸ್ವಚ್ಛತೆಗೆ ಹೊತ್ತು ಕೊಡದ ಲಿಂಗಸುಗೂರ ಬಸ ನಿಲ್ದಾಣದ ವ್ಯವಾಸ್ಥಪಕರು ಇನ್ನಾದರೂ ಎಚ್ಚೆತ್ತು ಕೂಂಡು ಸ್ವಚ್ಚತೆಯ ಬಗ್ಗೆ ಗಮನಹರಿಸಬೇಕು. ಬಸ್ ನಿಲ್ದಾಣವನ್ನು ದಿನನಿತ್ಯ ಈ ಸ್ವಚ್ಛತೆಯಿಂದ ಕಾಪಾಡಿ ಕೊಳ್ಳುವುದರ ಜೊತೆಗೆ ಸಂಬಂಧ ಪಟ್ಟವರು ಪರಿಶೀಲಿಸಿ ಸ್ವಚ್ಛತೆಗೆ ಒತ್ತು ಕೊಟ್ಟು ಮೂಲಭೂತ ಸೌಕರ್ಯ ಗಳೊಂದಿಗೆ ಜನರ ಸೇವೆಗೆ ಮುಂದಾಗಲಿ ಎಂಬುದು ನಾಗರಿಕರ ಒತ್ತಾಸೆಯಾಗಿದೆ. ತುಕ್ಕು ಹಿಡಿದು ಕಸದ ಡಬ್ಬಿಗಳು ದುರ್ನಾಥ ಬೀರುತ್ತಿವೆ ಸೊಳ್ಳೆಗಳ ವಾಸಿಸುವಾ ಸ್ಥಾನವಾಗಿದೆ. ಕುಡಿಯುವ ನೀರಿನ ಶುದ್ದಿಕರಣ ಘಟಕ ಮಿಷನ್ ಕೆಟ್ಟು ಹೋಗಿ ಹಲವು ತಿಂಗಳಾಗಿದೆ.  
ಅಳವಡಿಸಿರುವ ಅವೈಜ್ಞಾನಿಕ ಕಸದ ಬುಟ್ಟಿ ಬಿಸಿಲಿನ ತಾಪಮಾನ ಹೆಚ್ಚುತ್ತಿರುವ ಈ ಸಮಸ್ಯೆ ಕಂಡೂ ಕಾಣದಂತಿರುವುದು ಜನರ ಕುಡಿಯುವ ನೀರಿಗೆ ಹಣ ಕೂಟ್ಟು ತರುವ ಪರಿಸ್ಥಿತಿ ಬಂದಿದೆ ನಿಲ್ದಾಣದಲ್ಲಿ ಅಂಗವಿಕಲರು, ಬಡವರು ಕುಡಿಯುವ ನೀರಿಗಾಗಿ ವಾಟರ್ ಫಿಲ್ಟರ್ ಅಳವಡಿಸಿದ್ದರೂ ನೀರಿಗಾಗಿ 20 ರೂಪಾಯಿ ಭರಿಸಬೇಕಾಗಿದೆ.
ಇಲ್ಲಿ ಸಮರ್ಪಕವಾಗಿ ನೀರಿಲ್ಲದ ಕಾರಣ ಶೌಚ್ಚಾಲಯ ದುರ್ನಾಥ ಬೀರುತ್ತಿದೆ. ಸರಿಯಾಗಿ ವ್ಯವಸ್ಥೆ ಇಲ್ಲದೆ ನೀರು ವ್ಯರ್ಥವಾಗಿ ಹಾಳಾಗಿ ಹೋಗುತ್ತಿದೆ. ನಿಲ್ದಾಣದಲ್ಲಿ ಸ್ವಚ್ಛತೆ ಇಲ್ಲವಾಗಿದ್ದು ರೋಗ ಹರಡುವ ತಾಣವಾಗಿದೆ. ಎಲ್ಲೆಂದರಲ್ಲಿ ತ್ಯಾಜ್ಯ ವಸ್ತುಗಳು ಬಿದ್ದು ಕೊಳೆತು ನಾರುತ್ತಿವೆ. ಬಸ್ ನಿಲ್ದಾಣ ಸಮರ್ಪಕ ನಿರ್ವಹಣೆ ಸ್ವಚ್ಛತೆ ಇಲ್ಲದಿರುವುದರಿಂದ ಅದೆಷ್ಟೋ ಪ್ರಯಾಣಿಕರು ಇಲ್ಲಿ ಕೂರಲು, ನಿಲ್ಲಲು ಅಸಹ್ಯ ಪಡುವಂತಹ ವಾತಾವರಣ ನಿರ್ಮಾಣವಾಗಿದೆ.
ಪ್ರಯಾಣಿಕರು,ಕೂಡಲು ಸರಿಯಾಗಿ ಆಸನಗಳ ವ್ಯವಸ್ಥೆ ಇಲ್ಲದೆ ಪರದಾಡುವಂತಾಗಿದೆ.
ಅವೈಜ್ಞಾನಿಕ ಕಸದ ಬುಟ್ಟಿಗಳು : ಬಸ್ ನಿಲ್ದಾಣದಲ್ಲಿ ತಗಡಿನ ಡ್ರಮ್ಗಳನ್ನು ಕತ್ತರಿಸಿ ಆಸಮರ್ಪಕವಾಗಿ ಅಳವಡಿಸಿದ್ದು ಅವುಗಳು ತುಕ್ಕು ಹಿಡಿದು ದುರ್ನಾಥ ಬೀರುತ್ತಿವೆ. ಅಲ್ಲದೆ ಬೃಹತ್ ಗಾತ್ರದ ಕಸದ ಬುಟ್ಟಿಗಳು ಪ್ರಯಾಣಿಕರಿಗೆ ಇರಿಸು-ಮುರಿಸು ಉಂಟು ಮಾಡುತ್ತದೆ ಹಸಿ ಪದಾರ್ಥಗಳನ್ನು ಈ ಕಸದ ಬುಟ್ಟಿಗೆ ಹಾಕುವುದರಿಂದ ಸೊಳ್ಳೆ ಕಾಟ ವಿಪರೀತವಾಗಿದೆ.


“ ಈ ಬಸ್ ನಿಲ್ದಾಣದಲ್ಲಿ ಶುದ್ದ ಕುಡಿಯುವ ನೀರಿನ ಪೂರೈಕೆ ಇಲ್ಲದೆ ಜನ ಪರದಾಡುವಂತಾಗಿದೆ ಬಸ ನಿಲ್ದಾಣದಲ್ಲಿ ಉಪಹಾರ ಗೃಹ ಇಲ್ಲಾದಿರುವುದು ಪ್ರಯಾಣಿಕರಿಗೆ ತುಂಬಾ ಸಮಸ್ಯೆಯಾಗಿದೆ”. ಉಮೇಶ ಸರ್ಜಾಪುರ ಸಮಾಜಿಕ ಕಾರ್ಯ ಕರ್ತರು.

Post a Comment

Previous Post Next Post