ಮಸ್ಕಿ. ಬಿಜೆಪಿ ಪ್ರಗತಿ ರಥ ಯಾತ್ರೆಗೆ ಚಾಲನೆ



ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ 
UDAYAVANI NEWS 
ಮಸ್ಕಿ,ಫೆಬ್ರುವರಿ 27 : ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸುವ ನಿಟ್ಟಿನಲ್ಲಿ ಪ್ರತಿ ಭಾಗಗಳಿಗೂ ಪ್ರಗತಿ ರಥ ವಾಹನ ತೆರಳಿ ಪ್ರಚಾರ ಮಾಡಲಿದೆ. ಸರ್ಕಾರದ ಎಲ್ಲಾ ಯೋಜನೆಗಳನ್ನು ಒಳಗೊಂಡ ಕಿರುಚಿತ್ರವನ್ನು ಈ ಪ್ರಗತಿ ರಥದಲ್ಲಿ ತಿಳಿಸಲಾಗುವುದು ಎಂದು ಬಿಜೆಪಿ ಪಕ್ಷದ ಮಂಡಳ ಅಧ್ಯಕ್ಷ ಶಿವಪುತ್ರಪ್ಪ ಅರಳ ಹಳ್ಳಿ ತಿಳಿಸಿದರು.

ಪಟ್ಟಣದ ಹಳೇ ಬಸ್ ನಿಲ್ದಾಣದ 
ಡಾ.ಬಿ.ಆರ್ ಅಂಬೇಡ್ಕರ್ ಪ್ರತಿಮೆ ಮುಂದೆ
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಆಡಳಿತದಲ್ಲಿ ಜಾರಿಗೆ ಬಂದ ಹತ್ತು ಹಲವು ಯೋಜನೆ ಕಾರ್ಯಕ್ರಮಗಳನ್ನು ಜನರಿಗೆ ಪ್ರೊಜೆಕ್ಟರ್ ಮೂಲಕ ತಿಳಿಸುವ ಪ್ರಗತಿ ರಥದ ವಾಹನಕ್ಕೆ ರವಿವಾರ ಪಕ್ಷದ ಬಾವುಟ ಪ್ರದರ್ಶಿಸುವುದರ ಮೂಲಕ ಅಧಿಕೃತವಾಗಿ ಚಾಲನೆ ನೀಡಿ ಮಾತನಾಡಿದ ಅವರು ಡಬಲ್ ಇಂಜಿನ್ ಕೇಂದ್ರ ಮತ್ತು ರಾಜ್ಯ ಸರಕಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶಕ್ಕೆ ದೊಡ್ಡ ಕೊಡುಗೆ ಕೊಟ್ಟಿದ್ದಾರೆ ಎಂದರು. ಕಳೆದ ಮೂರೂವರೆ ವರ್ಷಗಳಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಈಗಿನ ಸಿ.ಎಂ ಬಸವರಾಜು ಬೊಮ್ಮಾಯಿ ಅವರ ಕೊಡುಗೆಯೂ ಸಾಕಷ್ಟಿದೆ. ಉಭಯ ಸರ್ಕಾರಗಳು ನೀಡಿರುವ ಯೋಜನೆಗಳನ್ನು ಪ್ರತಿ ಮನೆ ಮನೆಗೂ ತಿಳಿಸಲು ಅಧಿಕೃತವಾಗಿ ಮಸ್ಕಿ ನಗರದಲ್ಲಿ ಚಾಲನೆ ಕೊಡಲಾಗಿದೆ ಎಂದರು.

ಇದೇ ಸಂದರ್ಭದಲ್ಲಿ, ಮಹಾದೇವಪ್ಪ ಗೌಡ ಪೊಲೀಸ್ ಪಾಟೀಲ್, ಪ್ರಸನ್ನ ಪಾಟೀಲ್ ಪುರಸಭೆ ಸದಸ್ಯರಾದ 
ಚೇತನ ಪಾಟೀಲ್ ,ಮೌನೇಶ್ ಮುರಾರಿ, 
ಮಲ್ಲಿಕಾರ್ಜುನ ಬ್ಯಾಳಿ,ಮಂಜುನಾಥ ನಂದಿಹಾಳ,ನಾಗರಾಜ ಯಂಬಲದ್,ಶರಣಯ್ಯ ಗುಡುದೂರು, ಅಭಿಜಿತ್ ಮಾಲಿ ಪಾಟೀಲ್, ಗಂಗಾಧರ ಕಂಬಾಳಿಮಠ, ಶರಣಬಸವ ಸೊಪ್ಪಿಮಠ,ಮೌನೇಶ್ ನಾಯಕ,ವೀರೇಶ್ ಕಮತರ್,ಅಯ್ಯಪ್ಪ,
ಸಿದ್ದು ನವಲಿ,ರಮೇಶ್, ಹಿರಿಯರಾದ ಜರ್ನಾಧನ 
ಜಂಬಣ್ಣ ನಾಯಕ, ಅಮರೇಶ್ ಸಾಲಿಮಠ,
ಹಾಗೂ ಬಿಜೆಪಿ ಪಕ್ಷದ ಕಾರ್ಯಕರ್ತರು ಇದ್ದರು.

Post a Comment

Previous Post Next Post