80 ಕ್ಕೂ ಹೆಚ್ಚು ಜನರು ಕಾಂಗ್ರೆಸ್, ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆ



ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ 
UDAYAVANI NEWS 
ದೇವದುರ್ಗ, ಫೆಬ್ರುವರಿ 27 : ದೇವದುರ್ಗ ವಿಧಾನ ಸಭಾ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಕೆ.ಶಿವನಗೌಡ ನಾಯಕ ಅವರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಹಾಗೂ ಭಾರತೀಯ ಜನತಾ ಪಕ್ಷದ ತತ್ವ ಸಿದ್ಧಾಂತಗಳನ್ನು ಒಪ್ಪಿ 
ಶಾಸಕರ ಸಮ್ಮುಖದಲ್ಲಿ ಮುಖಂಡರಾದ ಬಸವರಾಜ ಸ್ವಾಮಿ ಯರಮಸಾಳ, ಸುಕುಮುನಿರೆಡ್ಡಿ ವಕೀಲರು, ಹಾಗೂ ಮಣಿಪಾಲರೆಡ್ಡಿ ವೀರನಗೌಡ ಕುಪ್ಪಿ, ಹನುಮಂತ ಭೋವಿ ಮುಸ್ಟೂರು, ಅವರ ನೇತೃತ್ವದಲ್ಲಿ 80ಕ್ಕೂ ಅಧಿಕ ಮುಖಂಡರು ಇಂದು ಜೆಡಿಎಸ್ ಮತ್ತು ಕಾಂಗ್ರೆಸ್ ತೊರೆದು ಬಿಜೆಪಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾದರು.

ಇದೇ ವೇಳೆ ಸೇರ್ಪಡೆಯಾದ ನೂತನ ಕಾರ್ಯಕರ್ತರಿಗೆ ಶಾಸಕ ಕೆ.ಶಿವನಗೌಡ ನಾಯಕ ಅವರು ಬಿಜೆಪಿ ಪಕ್ಷದ ಶಾಲು ಹಾಕುವ ಮೂಲಕ ಆತ್ಮೀಯವಾಗಿ ಸ್ವಾಗತಿಸಿದರು.

ಈ ಸಂಧರ್ಭದಲ್ಲಿ ಹಿರಿಯ ಮುಖಂಡರಾದ ವೆಂಕಟರಾಯಗೌಡ ವಂದಲಿ, ಕೆ.ಅನಂತರಾಜ ನಾಯಕ, ಎಪಿಎಂಸಿ ಅಧ್ಯಕ್ಷರಾದ ಪ್ರಕಾಶ ಪಾಟೀಲ್ ಜೇರಬಂಡಿ, ಬಸನಗೌಡ ಹುನುಗುಂದಬಾಡ, ನಾಗರಾಜ ಪಾಟೀಲ್ ಗೋಪಳಾಪುರ, ಶಿವು ಸಾಹುಕಾರ ಅರಕೇರಾ, ನಾಗರಾಜ ಅಕ್ಕರಕಿ, ಬಸನಗೌಡ ವೆಂಕಟಾಪುರ, ಬಸವರಾಜ ಕೊಪ್ಪರು, ಶರಣಗೌಡ ಅಬಕಾರಿ, ಮಲ್ಲು ಪೂಜಾರಿ ಬಿ.ಗಣೇಕಲ್, ರಾಮಣ್ಣ ಹೇಮನೂರು, ಬಸವರಾಜ, ರಮೇಶ ಪಾಟೀಲ್, ಸೂಗುರೇಶ ಮುಕ್ಕಲ್, ಬಾಲರಾಜ, ಪ್ರವೂಣ್ ಕುಮಾರ್, ಮಹೆಬೂಬ್, ಬಸನಗೌಡ, ಕುಪ್ಪಿ, ಸೇರಿದಂತೆ ಅನೇಕರಿದ್ದರು.

Post a Comment

Previous Post Next Post