ಸಮಾಜ ಸೇವೆಗೆ ಒಲಿದು ಬಂದ ಡಾಕ್ಟರೇಟ್ ಪದವಿ


ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ 
UDAYAVANI NEWS 
ಮಾನವಿ, ಫೆಬ್ರುವರಿ 05 : ತಾಲೂಕಿನ ಬಡ ಮಕ್ಕಳ ಬದುಕಿಗೆ ಆಶಾ ಕಿರಣದಂತೆ ಮಕ್ಕಳ ಬೆನ್ನೆಲುಬಿಗೆ ನಿಂತು ಉಚಿತ ಅಕ್ಷರ ಜ್ಞಾನವನ್ನು ನೀಡುವ ಸಮಾಜ ಸೇವಕ ಪ್ರಭುರಾಜ್ ಕೊಡ್ಲಿ ಎಂಬ ಸರಳ ವ್ಯಕ್ತಿಗೆ ಸಂದ ಗೌರವ ಡಾಕ್ಟರೇಟ್ ಪದವಿ.

ಬಡ ಮಕ್ಕಳ ಬದುಕಿಗೆ ಆಶಾ ಕಿರಣದಂತೆ ಮಕ್ಕಳ ಬೆನ್ನೆಲುಬಿಗೆ ನಿಂತು ಉಚಿತ ಅಕ್ಷರ ಜ್ಞಾನವನ್ನು ನೀಡುವ ಸಮಾಜ ಸೇವಕ ಎಂಬ ಹೆಗ್ಗಳಿಕೆ ಪಡೆದ ಸರಳ ವ್ಯಕ್ತಿಗೆ ಗ್ಲೋಬಲ್ ಪೀಸ್ ವಿಶ್ವವಿದ್ಯಾಲಯದ ವತಿಯಿಂದ ತಮಿಳುನಾಡಿನ ಊಟಿಯಲ್ಲಿ ನಡೆದ ಘಟಿಕೋತ್ಸವದಲ್ಲಿ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಜನೋದಯ ಶಿಕ್ಷಣ ಸಂಸ್ಥೆ ಅಧ್ಯಕ್ಷ ಪ್ರಭುರಾಜ ಕೊಡ್ಲಿ ಯವರಿಗೆ ಸಮಾಜಿಕ ಸೇವೆಯನ್ನು ಗುರುತಿಸಿ ಅವರಿಗೆ ಶನಿವಾರ ಗೌರವ ಡಾಕ್ಟರೇಟ್ ಪದವಿಯನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಪ್ರಭುರಾಜ ಕೊಡ್ಲಿ ರವರ ಕುಟುಂಬಸ್ಥರು ಹಾಗೂ ಹೋರಾಟಗಾರ ಸ್ನೇಹಿತರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Post a Comment

Previous Post Next Post