UDAYAVANI NEWS
ಮಸ್ಕಿ, ಫೆಬ್ರುವರಿ 02 : ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ರಾಯಚೂರು ಜಿಲ್ಲಾ ಮಸ್ಕಿ ತಾಲೂಕ ಘಟಕ ಮಸ್ಕಿ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.
ತಾಲೂಕ ಅಧ್ಯಕ್ಷರನ್ನಾಗಿ ಶ್ರೀಕಾಂತ ಚಿಕ್ಕ ಕಡಬೂರು , ಮಹಿಳಾ ಘಟಕದ ಅಧ್ಯಕ್ಷರಾಗಿ ಗಂಗಾ , ಕಾರ್ಯದರ್ಶಿಯಾಗಿ ಹನುಮೇಶ ಯಲಗಟ್ಟ, ಸಂಘಟನಾ ಕಾರ್ಯದರ್ಶಿಯಾಗಿ ಬಸವರಾಜ ಕೊಟೆಕಲ್,ಯುವ ಘಟಕದ ಕಾರ್ಯದರ್ಶಿಯನ್ನಾಗಿ ಅಮರೇಶ ಅವರನ್ನು ನೇಮಕ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಮಾತನಾಡಿದ ರಾಯಚೂರು ಜಿಲ್ಲಾ ಅಧ್ಯಕ್ಷ ನಿರುಪಾದಿ ಕೆ ಗೊಮರ್ಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಸ್ವಚ್ಚ, ಪ್ರಾಮಾಣಿಕ, ಪ್ರಾದೇಶಿಕ,ಜನಪರ ರಾಜಕಾರಣಕ್ಕೆ ಹುಟ್ಟಿಕೊಂಡಿದ್ದು ಪ್ರಸ್ತುತ ದಿನಗಳಲ್ಲಿ ರಾಜ್ಯದಾದ್ಯಂತ ಅನ್ಯಾಯ ಅಕ್ರಮ,ಬ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುತ್ತಿದ್ದು ಕೃಷಿಕರಿಗೆ ,ಮಹಿಳೆಯರಿಗೆ,ವಿದ್ಯಾರ್ಥಿಗಳಿಗೆ ,
ಕಾರ್ಮಿಕರಿಗೆ ,ಹಿಂದುಳಿದವರ ಪರವಾಗಿ ಹೋರಾಟಗಳನ್ನು ,ಅಭಿಯಾನಗಳನ್ನು ,
ಕಾರ್ಯಕ್ರಮಗಳನ್ನು ಮಾಡುತ್ತಿದೆ. ಹಾಗೂ ರಾಜ್ಯದಲ್ಲಿ 2023 ರಲ್ಲಿ ಬರುವಂತ ಎಲ್ಲ ಚುನಾವಣೆಗಳಲ್ಲಿ ಸ್ಪರ್ಧೆ ಮಾಡಲಿದೆ. ಈಗಾಗಲೆ ಕೆ ಆರ್ ಎಸ್ ಪಕ್ಷವು ಮಸ್ಕಿಯಲ್ಲಿ ಜನಪರವಾದ ಆಡಳಿತ ನೀಡಲು 2021 ರ ವಿಧಾನಸಭಾ ಉಪ ಚುನಾವಣೆ ,ಮಸ್ಕಿ ಪುರಸಭಾ ಚುನಾವಣೆಯಲ್ಲಿ ಪಕ್ಷದ ವತಿಯಿಂದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗಿತ್ತು ಮಸ್ಕಿ ಕ್ಷೇತ್ರದ ಜನ ಬಹಳಷ್ಟು ಪ್ರೀತಿ,ಗೌರವದಿಂದ ಬೆಂಬಲ ನೀಡಿದ್ದಾರೆ.ಮುಂದಿನ ದಿನಗಳಲ್ಲಿ ಬ್ರಷ್ಟಚಾರ ಮುಕ್ತ ,ಲಂಚ ಮುಕ್ತ ಮಸ್ಕಿ ನಿರ್ಮಿಸಲು ಜನರು ಕೆ ಆರ್ ಎಸ್ ಪಕ್ಷಕ್ಕೆ ಬೆಂಬಲಿಸಬೇಕು ಎಂದು ಜನರಲ್ಲಿ ಮನವಿ ಮಾಡಿದರು ಹಾಗೂ ನೂತನವಾಗಿ ನೇಮಕಗೊಂಡ ಪದಾಧಿಕಾರಿಗಳಿಗೆ ಶುಭ ಕೋರಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ನೂತನ ತಾಲೂಕ ಅಧ್ಯಕ್ಷ ಶ್ರೀಕಾಂತ ಮಸ್ಕಿಯಲ್ಲಿ ಜಾತಿ ರಾಜಕಾರಣ ,ಹಣದ ರಾಜಕಾರಣ,ಕೋಮು,ಧರ್ಮದ ರಾಜಕಾರಣ ನಡೆಯುತ್ತಿದೆ ಆದರೆ ಮಸ್ಕಿಯ ಜನತೆಗೆ ಬೇಕಿರುವುದು ಕ್ಷೇತ್ರದ ಅಭಿವೃದ್ದಿ ,ಉದ್ಯೋಗ, ರೈತರ,ಮಹಿಳೆಯರ ಪರವಾಗಿ ರಾಜಕಾರಣ ಎಂದು ತಿಳಿಸಿ ಮುಂದಿನ ದಿನಗಳಲ್ಲಿ ಮಸ್ಕಿಯಲ್ಲಿ ಕೆ ಆರ್ ಎಸ್ ಪಕ್ಷದ ಬೆಳವಣಿಗೆಗೆ ನಾವೆಲ್ಲರೂ ಶ್ರಮಿಸುತ್ತೇವೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಗೌರವ ಅಧ್ಯಕ್ಷ ಆದಪ್ಪ ಅಂಕುಶದೊಡ್ಡಿ ,ಶ್ರೀಮತಿ ಗಂಗಾ ,ಮುಖಂಡರಾದ ಬಸವರಾಜ , ಅಮರೇಶ,ವಿಶ್ವನಾಥ್ ,ಚನ್ನಬಸವ ,ಸಿದ್ರಾಮಪ್ಪ ಹಾಗೂ ಇತರರು ಇದ್ದರು.
Tags
ಜಿಲ್ಲಾ ಸುದ್ದಿಗಳು