UDAYAVANI NEWS
ಮಸ್ಕಿ, ಫೆಬ್ರುವರಿ 04 : ಪಟ್ಟಣದ ತಾಲೂಕ ಪಂಚಾಯತ ಕಾರ್ಯಾಲಯದ ಮಾರ್ಗವಾಗಿ ತೆರಳುವ ಮಾರ್ಗ ಮದ್ಯೆ ಸಾವನ್ನಪ್ಪಿ ಅನಾಥವಾಗಿ ಬಿದ್ದಿದ್ದ ಶ್ವಾನವನ್ನು ಪುರಸಭೆ ಪೌರ ಕಾರ್ಮಿಕರು ಪಟ್ಟಣದ ಹೊರ ವಲಯದಲ್ಲಿ ಬಿಸಾಡಿದ ಘಟನೆ ಶುಕ್ರವಾರ ನಡೆದಿದೆ.
ಪಟ್ಟಣದಲ್ಲಿ ಯಾವುದೇ ಪ್ರಾಣಿಯಾಗಿರಲಿ ಹಾಗೂ ಕಸದ ಕುಂಪೆ ಯಾಗಿರಲಿ ಅದನ್ನು ಕಸವಿಲೇವಾರಿ ವಾಹನದಲ್ಲಿ ಹಾಕಿಕೊಂಡು ಕಸ ವಿಲೇವಾರಿ ಮಾಡುವ ಸ್ಥಳಕ್ಕೆ ಹಾಕುವ ಮೂಲಕ ಪಟ್ಟಣವನ್ನು ಸ್ವಚ್ಛವಾಗಿಡುವ ಕಾರ್ಯ ದಿನ ನಿತ್ಯವು ಪುರಸಭೆಯ ಪೌರ ಕಾರ್ಮಿಕರು ಮಾಡುತ್ತಾರೆ. ಹಾಗೆಯೇ ಶುಕ್ರವಾರವೂ ಕೂಡ ಸ್ವಚ್ಛತಾ ಕಾರ್ಯ ಮಾಡುತ್ತಾ ತೆರಳುತ್ತಿರುವ ಸಂಧರ್ಭದಲ್ಲಿ ತಾಲೂಕ ಪಂಚಾಯತ ಕಾರ್ಯಾಲಯದ ಮಾರ್ಗವಾಗಿ ತೆರಳುವ ಮಾರ್ಗ ಮದ್ಯೆ ಸಾವನ್ನಪ್ಪಿ ಅನಾಥವಾಗಿ ಬಿದ್ದಿದ್ದ ಗಂಡು ಶ್ವಾನ. ಸುತ್ತಮುತ್ತಲಿನ ಸಾರ್ವಜನಿಕರ ಉಸಿರಾಟಕ್ಕೆ ತುಂಬಾ ತೊಂದರೆಯನ್ನುಂಟು ಮಾಡುತ್ತಿತ್ತು. ಅನಾಥ ಶ್ವಾನವನ್ನು ಪ್ಲಾಸ್ಟಿಕ್ ಚೀಲದಲ್ಲಿ ಹೊತ್ತೊಯ್ದು ಸಾರ್ವಜನಿಕರ ಆರೋಗ್ಯಕ್ಕೆ ಹಾನಿಯಾಗದಂತೆ ಪಟ್ಟಣದ ಹೊರ ವಲಯದಲ್ಲಿ ಬಿಸಾಡಲಾಯಿತು. ಅಲ್ಲೇ ನಿಂತಿದ್ದ ಕೆಲ ಸಾರ್ವಜನಿಕರು ಇಂತಹ ಅನಾಥ ಪ್ರಾಣಿಗಳ ಶವವನ್ನು ಪಟ್ಟಣದ ಹೊರಗೆ ಹಾಕುವ ಕೆಲಸ ಪುರಸಭೆ ಪೌರ ಕಾರ್ಮಿಕರು ಮಾಡುತ್ತಿರುವ ಸೇವೆ ತುಂಬಾ ಉತ್ತಮವಾದದ್ದು ಆ ಭಗವಂತ ಇವರನ್ನು ಚೆನ್ನಾಗಿ ಇಟ್ಟಿರಲಿ ಎಂದು ಮಾತನಾಡುತ್ತಿರುವುದು ಕಂಡುಬಂತು.
Tags
ಜಿಲ್ಲಾ ಸುದ್ದಿಗಳು