UDAYAVANI NEWS
ಮಸ್ಕಿ, ಫೆಬ್ರವರಿ 04 : ತಾಲೂಕಿನ ಬಳಗಾನೂರ ಪೋಲೀಸ್ ಠಾಣೆ ಗೆ ವರ್ಗಾವಣೆ ಆಗಿ ಬಂದ ನೂತನ ಪಿಎಸ್ಐ ಡಂಬಳ ಪ್ರಕಾಶ್ ರೆಡ್ಡಿ ಇವರನ್ನು ಗೋನಾಳ ಗ್ರಾಮದ ಮುಖಂಡರಿಂದ ಸನ್ಮಾನಿಸಿ ಗೌರವಿಸಲಾಯಿತು.
ಲಿಂಗಸ್ಗೂರು ತಾಲೂಕಿನ ಮುದುಗಲ್ ಪೋಲಿಸ್ ಠಾಣೆಯಲ್ಲಿ ದಕ್ಷ್ಯ,ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವ ಮೂಲಕ ಉತ್ತಮ ಅಧಿಕಾರಿ ಎಂದು ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ ರವರಿಂದ ಪ್ರಶಂಶೇ ಪಡೆದಿದ್ದ ಇವರು ಮಸ್ಕಿ ತಾಲೂಕಿನ ಬಳಗಾನೂರ ಪೋಲಿಸ್ ಠಾಣೆಗೆ ವರ್ಗವಾಗಿ ಬಂದಿದ್ದಾರೆ. ನೂತನ ಪೋಲಿಸ್ ಸಬ್ ಇನ್ಸ್ಪೆಕ್ಟರ್ ಡಂಬಳ ಪ್ರಕಾಶ್ ರೆಡ್ಡಿ ರವರನ್ನು ಗೋನಾಳ ಗ್ರಾಮದ ಮುಖಂಡರು ಸನ್ಮಾನಿಸಿ ಗೌರವಿಸುವ ಮೂಲಕ ಸಂತಸದಿ ಬರ ಮಾಡಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಮಲ್ಲಪ್ಪ ಎಸ್ ಗೋನಾಳ್ಕರ್ ಡಿ.ಎಸ್.ಎಸ್ ಜಿಲ್ಲಾಧ್ಯಕ್ಷರು, ಮಲ್ಲಿಕಾರ್ಜುನ .ಜೆ ಗ್ರಾಂ.ಪಂ. ಸದಸ್ಯರು, ಬಸವರಾಜ ದೀನಸಮುದ್ರ
ಗ್ರಾಂ. ಪಂ.ಸದಸ್ಯರು, ವಿನೋದ್ ಕುಮಾರ್ ಎಸ್ ಡಿ ಎಂ ಸಿ ಅಧ್ಯಕ್ಷರು ಗೋನಾಳ, ಶಂಕರ್ ಎಸ್ ಗೋನಾಳ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
Tags
ಜಿಲ್ಲಾ ಸುದ್ದಿಗಳು