ದಲಿತ ವಿದ್ಯಾರ್ಥಿ ಪರಿಷತ್ ವತಿಯಿಂದ ಗಣರಾಜ್ಯೋತ್ಸವ ಆಚರಣೆ


ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ
UDAYAVANI NEWS
ಮಸ್ಕಿ, ಜನವರಿ 27 : ಪಟ್ಟಣದ ಗಾಂಧೀ ನಗರದ ಡಾಕ್ಟರ ಬಿ.ಆರ್ ಅಂಬೇಡ್ಕರ್ ಮೂರ್ತಿಗೆ ಮಾಲಾರ್ಪಣೆ ಮಾಡುವುದರ ಮೂಲಕ ಸಂವಿಧಾನ ದಿನದ ವಿಶೇಷ ಗಣರಾಜ್ಯೋತ್ಸವ ಆಚರಣೆ ಮಾಡಲಾಯಿತು.
ಗಾಂಧೀ ನಗರದ ಡಾಕ್ಟರ ಬಿ.ಆರ್ ಅಂಬೇಡ್ಕರ್ ಮೂರ್ತಿಗೆ ಮಾಲಾರ್ಪಣೆ ಮಾಡುವುದರ ಮೂಲಕ ಸಂವಿಧಾನ ದಿನದ ವಿಶೇಷ ಗಣರಾಜ್ಯೋತ್ಸವ ಆಚರಣೆ ಮಾಡಿದರು. 
74 ನೇ ಗಣರಾಜ್ಯೋತ್ಸವದ ಕುರಿತು ಜಿಲ್ಲಾ ಸಂಚಾಲಕ ಮೌನೇಶ ಜಾಲವಾಡಗಿ ಮಾತನಾಡಿ ಜನವರಿ 26ನೆಯ ದಿನವನ್ನು ನಾವು ಸಂವಿಧಾನದ ದಿನ ಎಂದು ಇಡೀ ದೇಶಾದ್ಯಂತ ವಿಜ್ರಂಬಣೆಯಿಂದ ಆಚರಣೆ ಮಾಡುತ್ತೇವೆ, ಸಂವಿಧಾನಕ್ಕೂ ಮುಂಚಿನ ಈ ದೇಶದ ಶೋಷಿತರ ಬಡವರ ದಲಿತರ ಕೂಲಿಕಾರ್ಮಿಕರ ಶೋಚನೀಯ ಸ್ಥಿತಿಯನ್ನು ಕಣ್ಣಾರೆ ಕಂಡು ಅನುಭವಿಸಿದಂತ ಕೆಟ್ಟ ಅನುಭವದ ದಿನಗಳನ್ನು ದೂರ ಮಾಡುವ ನೆಟ್ಟಿನಲ್ಲಿ ಬಾಬಾ ಸಾಹೇಬರು ಅಂದು ಪಣತೊಟ್ಟಿದ್ದರು, ಅದರಂತೆ ಈ ದೇಶ ಒಂದು ನಿರ್ದೇಶನದಂತೆ ನಡೆಯಬೇಕು ಸಾಗಬೇಕು, ಪ್ರತಿಯೊಂದು ಜಾತಿ ಜನಾಂಗಕ್ಕೂ ಪ್ರತಿಯೊಬ್ಬ ಭಾರತೀಯ ನಾಗರಿಕನಿಗೂ ಸಂವಿಧಾನ ಅನ್ವಯವಾಗುವಂತೆ ಮತ್ತು ಆ ಸಂವಿಧಾನದ ಅಡಿಯಲ್ಲಿ ನಾವೆಲ್ಲರೂ ಸಾಗಬೇಕು ಎನ್ನುವ ನಿಟ್ಟಿನಲ್ಲಿ ಅದರ ಪ್ರತೀಕವಾಗಿ ಮತ್ತು ಪ್ರತಿಫಲವಾಗಿ ಈ ದೇಶದ ದೊಡ್ಡ ಲಿಖಿತ ಸಂವಿಧಾನವನ್ನ ಬಾಬಾ ಸಾಹೇಬರು ನಮ್ಮೆಲ್ಲರಿಗೂ ಅರ್ಪಿಸಿದ್ದಾರೆ. ಅದನ್ನು ನಾವು ಎಲ್ಲರೂ ಉಳಿಸಬೇಕಾಗಿದೆ ಬೆಳೆಸಬೇಕಾಗಿದೆ ಸಂವಿಧಾನದ ಆಶಯಗಳನ್ನ ಈಡೇರಿಸಬೇಕಾಗಿದೆ ಸಂವಿಧಾನದ ಅಡಿಯಲ್ಲಿ ನಾವೆಲ್ಲರೂ ಬಾಳಬೇಕಾಗಿದೆ ಹಾಗಾಗಿ ಬಾಬಾ ಸಾಹೇಬರ ಕನಸುಗಳನ್ನು ಈಡೇರಿಸೋಣ ನಮ್ಮ ಸಂವಿಧಾನವನ್ನು ನಾವು ಕಾಪಾಡೋಣ ಎಂದು ಹೇಳಿದರು.


ಈ ಸಂದರ್ಭದಲ್ಲಿ ತಾಲೂಕ ಸಂಚಾಲಕ ಮೌನೇಶ ತುಗ್ಗಲದಿನ್ನಿ, ದೊಡ್ಡಪ್ಪ ಮುರಾರಿ, ಹನುಮಂತಪ್ಪ ವಕೀಲರು, ಪರಶುರಾಮ್ ದೀನ ಸಮುದ್ರ, ಮಹಿಳಾ ಹೋರಾಟಗಾರ್ತಿ ರತ್ನ ಕಟ್ಟಿಮನಿ, ಪ್ರಭು, ವಿರುಪಣ್ಣ ಮತ್ತು ವಿವಿಧ ಸಮಾಜದ ಮುಖಂಡರು ವಿದ್ಯಾರ್ಥಿ ಯುವಜನರು ಭಾಗವಹಿಸಿದ್ದರು.

Post a Comment

Previous Post Next Post