ವಿಐಎಎಸ್ 3ಡಿ ಎಂಜಿನಿಯರಿಂಗ್ ಸೇವೆ ಭಾರತದಲ್ಲಿ ಪ್ರಾರಂಭ : ಕ್ಯಾಡ್‍ಮಾರ್ಕ್ ಸಾಫ್ಟ್ ವೇರ್

ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ 
UDAYAVANI NEWS 
ಬೆಂಗಳೂರು, ಜನವರಿ 27 : ಭಾರತ ಮತ್ತು ವಿಶ್ವದಾದ್ಯಂತ ತನ್ನ ಗ್ರಾಹಕರಿಗೆ ಉನ್ನತ ದರ್ಜೆಯ ಎಂಜಿನಿಯರಿಂಗ್ ಸೇವೆ ಒದಗಿಸುವ ನಿಟ್ಟಿನಲ್ಲಿ ಮತ್ತು ಮೌಲ್ಯಾಧಾರಿತ ಸೇವೆ ಕಲ್ಪಿಸುವ ಸಲುವಾಗಿ ಸ್ವಾಧೀನಪಡಿಸಿಕೊಳ್ಳಲಾಗಿದೆ ಮತ್ತು ಉದಯೋನ್ಮುಖ ಮತ್ತು ಪ್ರಧಾನ ಕೈಗಾರಿಕೆಗಳಿಗೆ ತನ್ನ ಸೇವಾ ವ್ಯಾಪ್ತಿಯನ್ನು ಪಸರಿಸಿದೆ. 2025 ರ ವೇಳೆಗೆ ಕಂಪನಿಯು, ವಿದ್ಯುತ್ ಚಾಲಿತ ವಾಹನಗಳು, ಉತ್ಕøಷ್ಟ ತಾಂತ್ರಿಕ, ತಯಾರಿಕಾ ಮತ್ತು ಅಂತರಿಕ್ಷ ರಕ್ಷಣಾ ಮತ್ತು ಸ್ಪೇಸ್‍ನಂತಹ ಉದ್ಯಮಗಳ ಅಭಿವೃದ್ಧಿಯಲ್ಲಿ ತಮ್ಮ ಉತ್ಪನ್ನಗಳನ್ನು ಒದಗಿಸುವ ಮೂಲಕ ವರ್ಷಕ್ಕೆ ಶೇಕಡಾ 30% ರಿಂದ 50% ಸಂಯುಕ್ತ ವಾರ್ಷಿಕ ಬೆಳವಣಿಗೆ ದರವನ್ನು ಆದಾಯ ದುಪ್ಪಟ್ಟುಗೊಳಿಸುವ ಗುರಿ ಹೊಂದಿದೆ. ವಿಐಎಎಸ್ 3ಡಿ ಕಂಪನಿಗೆ ಪ್ರೋತ್ಸಾಹಿಸಲು ಎರಡೂ ಕಂಪನಿಗಳ ಸಂಯೋಜಿತ ಕಾರ್ಯವು ಸರ್ಕಾರಿ ವಲಯಕ್ಕೂ ಸೇವಾ ಪರಿಹಾರಗಳನ್ನು ಒದಗಿಸುತ್ತವೆ.

ಉತ್ತರ ಅಮೆರಿಕಾದಲ್ಲಿ ಪ್ರಧಾನ ಕಚೇರಿ ಹೊಂದಿರುವ ವಿಐಎಎಸ್ 3ಡಿ, ಎಂಜಿನಿಯರಿಂಗ್ ಸೇವಾ ಕ್ಷೇತ್ರದಲ್ಲಿ ಡಿಜಿಟಲ್ ಪರಿಹಾರಗಳ ವಿಶೇಷ ಪೂರೈಸುವ ಸಂಸ್ಥೆಯಾಗಿದ್ದು, ಭಾರತದಲ್ಲಿ ಅದರ ಅಂಗಸಂಸ್ಥೆ, ಭಾರತ ಮೂಲದ ಕ್ಯಾಡ್ ಮಾರ್ಕ್ ಸಾಫ್ಟ್ ವೇರ್ ಪ್ರೈವೇಟ್ ಲಿಮಿಟೆಡ್ ಕಂಪನಿಯನ್ನು ಸ್ವಾಧೀನಪಡಿಸಿಕೊಳ್ಳುವುದಾಗಿ ಘೋಷಿಸಿದೆ.
ವಿಐಎಎಸ್ 3ಡಿ ಗ್ಲೋಬಲ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುಮಂತ್ ಕುಮಾರ್, ಕಾರ್ಯಕ್ರಮ ಕುರಿತು ಮಾತನಾಡುತ್ತ “ಈ ಇತ್ತೀಚಿನ ಸ್ವಾಧೀನ ಪ್ರಕ್ರಿಯೆ ಭಾರತದಲ್ಲಿ ನಮ್ಮ ತಾಂತ್ರಿಕ ಪರಿಹಾರಗಳು ಮತ್ತು ಸೇವೆಗಳನ್ನು ನೀಡಲು ನಮಗೆ ಅತ್ಯಂತ ಹೆಮ್ಮೆಯಿದೆ. ಭಾರತದಲ್ಲಿ ಅತ್ಯುನ್ನತ ದರ್ಜೆಯ ತಾಂತ್ರಿಕ ತಜ್ಞರನ್ನು ಹೊಂದುವ ಮೂಲಕ ವಿಐಎಎಸ್ 3ಡಿ ಉದ್ಯಮದಲ್ಲಿ ಛಾಪು ಮೂಡಿಸಿದೆ, ವಿವಿಧ ಉದ್ಯಮ ಪ್ರಕ್ರಿಯೆಗಳ ಆಳವಾದ ಜ್ಞಾನದೊಂದಿಗೆ ಅಮೇರಿಕಾ ಸಂಯುಕ್ತ ಸಂಸ್ಥಾನ ಮತ್ತು ಮೆಕ್ಸಿಕೊದ ಅನುಭವಿ ಜಾಗತಿಕ ಎಂಜಿನಿಯರಿಂಗ್ ತಂಡಗಳ ಬೆಂಬಲ ಇದೆ. ವಿಐಎಎಸ್ 3ಡಿ ಪ್ರಭಾವದ ಸಂಯೋಜಿತ ಗ್ರಾಹಕರ ತಾಂತ್ರಿಕ ಸೇವೆಯು ಖಾಸಗಿ ಕಂಪನಿಗಳಿಗೆ ಸೀಮಿತವಾಗಿರದೆ ಈಗ ಸರ್ಕಾರಿ ವಲಯಕ್ಕೂ ಸೇವಾ ಪರಿಹಾರಗಳನ್ನು ಒದಗಿಸಲಿದೆ" ಎಂದು ಹೇಳಿದರು.

Post a Comment

Previous Post Next Post