ಕೆ.ಎಲ್ ರಾಹುಲ್ ಮಗಳನ್ನು ಮದುವೆಯಾದ ಮಾರನೇ ದಿನವೇ ಉಲ್ಟಾ ಹೊಡೆದ ಸುನಿಲ್ ಶೆಟ್ಟಿ! ಈಗ ಹೇಳ್ತಿರೋದು ಏನು ಗೊತ್ತಾ?


ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ 
UDAYAVANI NEWS
ನವ ದೆಹಲಿ,ಜನವರಿ 31 : ಕನ್ನಡಿಗ ಕೆಎಲ್ ರಾಹುಲ್ ಹಾಗೂ ಬಾಲಿವುಡ್ ಚಿತ್ರರಂಗದ ಖ್ಯಾತ ನಟ ಆಗಿರುವ ಸುನಿಲ್ ಶೆಟ್ಟಿ ಅವರ ಮಗಳಾಗಿರುವ ಅಥಿಯ ಶೆಟ್ಟಿ ಇವರಿಬ್ಬರ ಮದುವೆ ಅತ್ಯಂತ ಆಪ್ತೇಷ್ಠರ ನಡುವೆ ಸರಳವಾಗಿಯೇ ನಡೆದು ರಾಷ್ಟ್ರ ವ್ಯಾಪಿ(Nation Wide) ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ರಾಹುಲ್ ಹಾಗೂ ಅಥಿಯಾ ಮದುವೆಗೆ ಕುಟುಂಬಸ್ಥರು ಹಾಗೂ ಕ್ರಿಕೆಟ್ ಮತ್ತು ಸಿನಿಮಾ ಮೂಲದ ಸ್ನೇಹಿತರು ಕೂಡ ಆಗಮಿಸಿ ನವ ಜೋಡಿಗಳಿಗೆ ಶುಭ ಹಾರೈಸಿದ್ದರು.ಈ ಸಮಯದಲ್ಲಿ ಈ ಇಬ್ಬರು ನವಜೋಡಿಯ ಮದುವೆಗೆ ಆಗಮಿಸಿದ್ದ ಭಾರತೀಯ ಕ್ರಿಕೆಟ್ ತಂಡದ ಹೆಸರಾಂತ ಆಟಗಾರರು ಆಗಿರುವ ಮಹೇಂದ್ರ ಸಿಂಗ್ ಧೋನಿ ಹಾಗೂ ವಿರಾಟ್ ಕೊಹ್ಲಿ ದುಬಾರಿ ವೆಚ್ಚದ ಉಡುಗೊರೆಯನ್ನು ನೀಡಿದ್ದಾರೆ ಎಂಬುದಾಗಿ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗಿತ್ತು. ಹೌದು ಗೆಳೆಯರೇ ಮಹೇಂದ್ರ ಸಿಂಗ್ ಧೋನಿ 80 ಲಕ್ಷದ ಕವಾಸಕಿ ನಿಂಜಾ ಬೈಕ್ ಹಾಗೂ ವಿರಾಟ್ ಕೊಹ್ಲಿ ಅವರು ಎರಡು ಕೋಟಿಗೂ ಅಧಿಕ ಮೌಲ್ಯದ ಬಿಎಂಡಬ್ಲ್ಯೂ(BMW) ಕಾರ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂಬುದಾಗಿ ಸುದ್ದಿ ಮಾಡಲಾಗಿತ್ತು.
Kl Rahul & Athiya Shetty Marriage Pic
ಆದರೆ ಮದುವೆಯಾದ ಮಾರನೇ ದಿನಾನೇ ಕೆ ಎಲ್ ರಾಹುಲ್ ಅವರ ಮಾವ ಆಗಿರುವ ಕರಾವಳಿ ಮೂಲದ ಸುನಿಲ್ ಶೆಟ್ಟಿ ಅವರು ಇದೆಲ್ಲಾ ಶುದ್ಧ ಸುಳ್ಳು ಯಾವುದೇ ರೀತಿಯ ದುಬಾರಿ ಹುಡುಗರಗಳನ್ನು ನಾವು ಯಾರಿಂದಲೂ ಪಡೆದುಕೊಂಡಿಲ್ಲ ಯಾರು ನೀಡಿಲ್ಲ ಎಂಬುದಾಗಿ ಸ್ಪಷ್ಟೀಕರಿಸಿದ್ದಾರೆ. ಕುಟುಂಬದಲ್ಲಿ ಯಾರಲ್ಲೂ ಇದರ ಬಗ್ಗೆ ಕೇಳದೆ ಮಾಧ್ಯಮಗಳು(Media) ತಮಗೆ ಮನ ಬಂದಂತೆ ಬರೆದುಕೊಂಡಿರುವುದು ಹಾಗೂ ಜನರಿಗೆ ಈ ಸುದ್ದಿಯನ್ನು ತಲುಪಿಸಿರುವುದು ನಿಜಕ್ಕೂ ತಪ್ಪು ಎಂಬುದಾಗಿಯೂ ಕೂಡ ಸುನಿಲ್ ಶೆಟ್ಟಿ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರಂತೆ.

ಸೋಶಿಯಲ್ ಮೀಡಿಯಾಗಳಲ್ಲಿ ಇಂತಹ ಸುದ್ದಿಗಳನ್ನು ಸಂಭ್ರಮಿಸುತ್ತಿದ್ದ ಜನರಿಗೆ ಸುನಿಲ್ ಶೆಟ್ಟಿ ಅವರ ಹೇಳಿಕೆಯಿಂದ ಮಂಕು ಕವಿದಂತೆ ಆಗಿದೆ ಎನ್ನುವುದಂತೂ ಸುಳ್ಳಲ್ಲ. ಕೇವಲ ಇಷ್ಟು ಮಾತ್ರವಲ್ಲದೆ 50 ಕೋಟಿ ಮೌಲ್ಯದ ಮನೆಯನ್ನು ಕೂಡ ಸುನಿಲ್ ಶೆಟ್ಟಿ ಅವರು ಕೆಎಲ್ ರಾಹುಲ್ ಅವರಿಗೆ ನೀಡಿದ್ದರು ಎಂಬುದಾಗಿ ಸುದ್ದಿ ಆಗಿತ್ತು. ಇದನ್ನು ಕೂಡ ಸುನಿಲ್ ಶೆಟ್ಟಿ ಅವರು ಸತ್ಯಕ್ಕೆ ದೂರವಾದ ಮಾತು ಎಂಬುದನ್ನು ಖಡಕಂಡಿತವಾಗಿಯೇ ಹೇಳಿ ಈ ಸುದ್ದಿಯನ್ನು ತಳ್ಳಿ ಹಾಕಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Post a Comment

Previous Post Next Post