UDAYAVANI NEWS
ಮಸ್ಕಿ,ಜನವರಿ 31 : ಪಟ್ಟಣದ ಕಾಂಗ್ರೆಸ್ ಕಾರ್ಯಾಲಯದಲ್ಲಿ ಸತ್ಯ, ಶಾಂತಿ, ಅಹಿಂಸೆ ಮತ್ತು ಮಾನವೀಯತೆಯ ಪ್ರತಿರೂಪದಂತಿದ್ದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಪುಣ್ಯಸ್ಮರಣೆ ಹಾಗೂ ಕಾಶ್ಮೀರದಲ್ಲಿ ಭಾರತ ಐಕ್ಯತಾ ಯಾತ್ರಾ ಸಮಾರೋಪ ಸಮಾರಂಭದ ನಿಮಿತ್ಯ ಸೋಮವಾರ ರಾಷ್ಟ ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಲಾಯಿತು.
ಸತ್ಯ, ಶಾಂತಿ, ಅಹಿಂಸೆ ಮತ್ತು ಮಾನವೀಯತೆಯ ಪ್ರತಿರೂಪದಂತಿದ್ದ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಪುಣ್ಯಸ್ಮರಣೆಯ ನಿಮಿತ್ತ ಅವರಿಗೆ ಭಕ್ತಿಪೂರ್ವಕ ನಮನವನ್ನು ಅರ್ಪಿಸುವುದರ ಮೂಲಕ ಹಾಗೂ ರಾಹುಲ್ ಗಾಂಧಿ ರವರ ನೇತೃತ್ವದಲ್ಲಿ ಕನ್ಯಾಕುಮಾರಿಯಲ್ಲಿ ಆರಂಭವಾಗಿದ್ದ ಭಾರತ ಜೋಡೋ ಯಾತ್ರೆ ಇಂದು ಕಾಶ್ಮೀರದಲ್ಲಿ ಭಾರತ ಐಕ್ಯತಾ ಯಾತ್ರಾ ಸಮಾರೋಪ ಸಮಾರಂಭದ ನಿಮಿತ್ಯ ಸೋಮವಾರ ಮಸ್ಕಿ ಕಾಂಗ್ರೆಸ್ ಕಾರ್ಯಾಲಯದಲ್ಲಿ ರಾಷ್ಟ್ರ ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿದ ಮಸ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾದ ಮಲ್ಲಿಕಾರ್ಜುನ ಪಾಟೀಲ್ ಯದ್ದಲದಿನ್ನಿ.
ಮಸ್ಕಿ ವಿಧಾನ ಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಆರ್. ಬಸನಗೌಡ ತುರುವಿಹಾಳ,ಗ್ರಾಮೀಣ ಘಟಕದ ಅಧ್ಯಕ್ಷರಾದ ಶ್ರೀ ಹನುಮಂತಪ್ಪ ಮುದ್ದಾಪುರ,ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷರಾದ ಆದನಗೌಡ ಸಂತೆಕೆಲ್ಲೂರು, ಸಿದ್ದಣ್ಣ ಹೂವಿನಭಾವಿ, ವೆಂಕಟರೆಡ್ಡಿ ಹಾಲಾಪುರ, ಮಲ್ಲಯ್ಯ ಬಳ್ಳಾ, ಮಂಪನಗೌಡ ಗುಡದೂರ್, ಮಲ್ಲಯ್ಯ ಮುರಾರಿ ಮಸ್ಕಿ, ಸಿದ್ದನಗೌಡ ಮಾಟೂರ್,ಮಲ್ಲನಗೌಡ ಸುಂಕನೂರು, ಕರಿಯಪ್ಪ ಹಾಲಾಪುರ, ರಮೇಶ್ ಕುರಿ,ನಾರಾಯಣಪ್ಪ ಕಾಸ್ಲಿ ,ರವಿಕಾಂತ ದೇಸಾಯಿ ಹಾಲಾಪುರ ಗ್ರಾಮ ಪಂಚಾಯತಿ ಅಧ್ಯಕ್ಷರು,ಸುರೇಶ ಬ್ಯಾಳಿ,ರವಿ ಮಡಿವಾಳ,ಕೃಷ್ಣ ಚಿಗಿರಿ, ಮಹಮ್ಮದ್ ನೂರ್ ಮಸ್ಕಿ, ರಮೇಶ್ ನಾಯಕ ಮಸ್ಕಿ, ಆಲಂಪಾಷ, ಶಂಕರಗೌಡ ಗೋನ್ವರ್, ಸಿದ್ದು ಮುರಾರಿ, ಶಬ್ಬೀರ್ ಮಸ್ಕಿ, ಬಸವರಾಜ ಯಮಗಿನೂರು, ರಾಜಸಾಬ್ ಮಸ್ಕಿ, ಮಲ್ಲು ಭಜಂತ್ರಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
Tags
ಜಿಲ್ಲಾ ಸುದ್ದಿಗಳು