UDAYAVANI NEWS
ಮಸ್ಕಿ, ಜನವರಿ 06 : ರೈತ ಸಂಪರ್ಕ ಕೇಂದ್ರದಲ್ಲಿ ಕೃಷಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಕೃಷಿ ಅಧಿಕಾರಿ ಅಮರಪ್ಪ ರವರು ರೈತ ಸಂಪರ್ಕ ಕೇಂದ್ರಕ್ಕೆ ಬರುವ ರೈತರ ಸೌಲಭ್ಯಗಳನ್ನು ರೈತರಿಗೆ ತಲುಪಿಸದೆ ರಾತ್ರೋ ರಾತ್ರಿ ಕಳ್ಳ ಸಾಗಾಣಿಕೆ ಮಾಡುವ ಮೂಲಕ ಮಾರಾಟ ಮಾಡುತ್ತಿದ್ದಾರೆ ಅಂತಹ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಭಾರತೀಯ ಪ್ರಜಾ ಸಂಘ ತಾಲೂಕು ಘಟಕ ಮಸ್ಕಿ ವತಿಯಿಂದ ಸಹಾಯಕ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಿದರು.
ಕೃಷಿ ಇಲಾಖೆಗೆ ಸಂಬಂಧಪಟ್ಟ ಕಡಲೆ ಬೀಜ 15 ಕ್ವಿಂಟಲ್, ಶೇಂಗಾ ಬುಡ್ಡಿ 10 ಬ್ಯಾಗ್, ದಿನಾಂಕ 15-11-2022 ರಂದು ಕಡಲೆ ಬೀಜ, ಶೇಂಗಾ ಬುಡ್ಡಿ ಡೆಮೋ ಹಾಗೂ ಔಷಧಿ ಡೆಮೋ ಉಚಿತವಾಗಿ ರೈತರಿಗೆ ವಿತರಣೆ ಮಾಡಲು ನಿಯಮ ಇದ್ದರೂ ಈ ನಿಯಮಗಳನ್ನು ಅಧಿಕಾರಿಗಳು ಗಾಳಿಗೆ ತೂರಿ ಸರಕಾರದ ಆದೇಶವನ್ನು ಸಾರಾ ಸಾಗಟವಾಗಿ ಕಾನೂನು ಉಲ್ಲಂಘನೆ ಮಾಡಿರುತ್ತಾರೆ. ಈ ಮೇಲೆ ತಿಳಿಸಿರುವಂತೆ ರಾತ್ರೋ ರಾತ್ರಿ ತ್ರಿ ಚಕ್ರ ವಾಹನದಲ್ಲಿ ಕಳ್ಳ ಸಾಗಾಣಿಕೆ ಮಾಡುತ್ತಿರುವುದನ್ನು ರೈತರು ಪತ್ತೆ ಹಚ್ಚಿ ಈ ವಾಹನವನ್ನು ನಿಲ್ಲಿಸಿ ಅದರಲ್ಲಿರುವ ಕಡಲೆ ಬೀಜ, ಶೇಂಗಾ ಬುಡ್ಡಿ ಮತ್ತು ಔಷಧಿ ಡೆಮೋ ಗಳನ್ನು ಸಾಗಾಣಿಕೆ ಮಾಡುವ ಸಮಯದಲ್ಲಿ ಸಿಕ್ಕಿ ಬಿದ್ದಿದ್ದಾರೆ.
ಸಿಕ್ಕಿ ಹಾಕಿಕೊಂಡ ವಾಹನದ ವೀಡಿಯೋ ಮತ್ತು ಜಿಪಿಎಸ್ ಫೋಟೋ ಇದ್ದು, ಹಾಗೂ ಮಸ್ಕಿ ರೈತ ಸಂಪರ್ಕ ಕೇಂದ್ರಕ್ಕೆ ಸಂಬಂಧಪಟ್ಟ ಸಾಮಗ್ರಿಗಳೇ ಎಂದು ಸಾಗಾಣಿಕೆ ಮಾಡುವವರು ಒಪ್ಪಿಕೊಂಡಿರುತ್ತಾರೆ.
ರೈತರು ತೆಗೆದುಕೊಂಡು ಹೋಗಿರುತ್ತಾರೆ ಎಂದು ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ ಭ್ರಷ್ಟ ಅಧಿಕಾರಿಗಳು ಈ ಮೇಲೆ ವಿವರಿಸಲಾಗಿರುವಂತೆಯು ಹಾಗೂ ದಿನಾಂಕ 13-08-2022 ರಂದು ಕ್ರಿಮಿನಾಶಕ ಔಷಧಿಯ ಅವಧಿ ಮುಗಿದರೂ ಅಂತಹ ಔಷಧಿಗಳನ್ನು ರೈತ ಭಾಂದವರಿಗೆ ನೀಡಿದ್ದು,ಆ ಔಷಧಿಯನ್ನು ಬೆಳೆಗಳಿಗೆ ಸಿಂಪಡಿಸಿದಾಗ ಬೆಳೆಗಳು ಸಂಪೂರ್ಣವಾಗಿ ನಾಶವಾಗುತ್ತವೆ. ಇದಕ್ಕೆಲ್ಲ ನಿರ್ಲಕ್ಷ್ಯದ ಆಡಳಿತವೇ ಕಾರಣವಾಗಿದೆ.
ಕೃಷಿ ಅಧಿಕಾರಿ ಅಮರಪ್ಪ ರವರು ಕಳೆದ ಎರಡು ತಿಂಗಳಿಂದ ಕರ್ತವ್ಯಕ್ಕೆ ಹಾಜರಾಗಿರುವುದಿಲ್ಲ.ರೈತರು ದೂರವಾಣಿ ಕರೆ ಮಾಡಿದರೂ ಸ್ಪಂದನೆ ಮಾಡುತ್ತಿಲ್ಲ. ರಜೆ ಹಾಕಿದ್ದೀವಿ ಎಂದು ಉಡಾಫೆ ಉತ್ತರ ನೀಡುತ್ತಾರೆ.
ಸರಕಾರದ ನಿಯಮಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿ ಇಲಾಖೆಯ ನಿಯಮ ಉಲ್ಲಂಘನೆ ಮಾಡಿರುವುದರಿಂದ ಸರಕಾರದಿಂದ ಸಿಗಬೇಕಾದ ಸೌಲಭ್ಯಗಳಿಂದ ರೈತರನ್ನು ವಂಚಿತರನ್ನಾಗಿ ಮಾಡುವ ಇಂತಹ ಭ್ರಷ್ಟ ಅಧಿಕಾರಿಯ ಮೇಲೆ ಇಲಾಖೆಯ ನಿಯಮಾನುಸಾರ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಭಾರತೀಯ ಪ್ರಜಾ ಸಂಘ ಭೀಮ ನಡೆ ತಾಲೂಕು ಸಮಿತಿ ಮಸ್ಕಿ ವತಿಯಿಂದ ಸಹಾಯಕ ಆಯುಕ್ತರು ಲಿಂಗಸ್ಗೂರು ಅವರಲ್ಲಿ ಮನವಿ ಪತ್ರ ಸಲ್ಲಿಸಲಾಯಿತು.
ಇದೇ ಸಂದರ್ಭದಲ್ಲಿ
ಹೊಳೆಯಪ್ಪ ಕುಣೆ ಕೆಲ್ಲೂರು ತಾಲೂಕ ಅಧ್ಯಕ್ಷರು,ದಯಾನಂದ ಡಬ್ಬೇರು ಮಡು ತಾಲೂಕ ಉಪಾಧ್ಯಕ್ಷರು, ಭೀಮಣ್ಣ ಕುಣೆ ಕೆಲ್ಲೂರು ಗೌರವಾಧ್ಯಕ್ಷರು, ಅಶೋಕ ಮೂಡಲದಿನ್ನಿ, ಬಸವಲಿಂಗಪ್ಪ ಕುಣೆ ಕೆಲ್ಲೂರು,ಅಮರೇಶ್ ಹೊನ್ನಳ್ಳಿ, ವೆಂಕಟೇಶ್ ಬೇಡರ ಕಾರಲಕುಂಟೆ, ಶರಣ ಬಸವ ಬಿ.ಕೆ ಕುಂಟೆ,ದೇವರಾಜ ಮಾರಲ ದಿನ್ನಿ,ಮೌನೇಶ್ ಹೊನ್ನಳ್ಳಿ,ಬಸವರಾಜ್ ಕುಣೆ ಕೆಲ್ಲೂರು,ನಾಗಪ್ಪ ಕುಣೆ ಕೆಲ್ಲೂರು,ಗ್ಯಾನಪ್ಪ ದೊಡ್ಡಮನಿ ಮುದ್ದಾಪುರ,ಬಸನಗೌಡ ದಿನ್ನಿ ಭಾವಿ ಸೇರಿದಂತೆ ಇನ್ನಿತರೆ ರೈತ ಭಾಂದವರು ಉಪಸ್ಥಿತರಿದ್ದರು.
Tags
ಜಿಲ್ಲಾ ಸುದ್ದಿಗಳು