UDAYAVANI NEWS
ಮಸ್ಕಿ, ಜನವರಿ 15 : ಪಟ್ಟಣದ ವಿದ್ಯಾನಿಕೇತನ ಪದವಿ ಪೂರ್ವ ಕಾಲೇಜು ಹಾಗೂ ಪ್ರೆಸಿಡೆನ್ಸಿ ಪದವಿ ಮಹಾವಿದ್ಯಾಲಯ ಮಸ್ಕಿಯಲ್ಲಿ ಶ್ರೀ ಸಿದ್ದರಾಮೇಶ್ವರ ಜಯಂತಿಯನ್ನು ಆಚರಣೆ ಮಾಡಲಾಯಿತು.
ವಿದ್ಯಾನಿಕೇತನ ಪದವಿ ಪೂರ್ವ ಕಾಲೇಜು ಹಾಗೂ ಪ್ರೆಸಿಡೆನ್ಸಿ ಪದವಿ ಮಹಾವಿದ್ಯಾಲಯ ಮಸ್ಕಿಯಲ್ಲಿ ಶ್ರೀ ಸಿದ್ದರಾಮೇಶ್ವರ ಜಯಂತಿಯನ್ನು ಸರಳತೆಯಿಂದ ಆಚರಣೆ ಮಾಡಲಾಯಿತು. ಸಿದ್ದರಾಮೇಶ್ವರರ ಕುರಿತಾಗಿ ವಿಶೇಷ ಉಪನ್ಯಾಸ ಅನಿಸಿಕೆಗಳನ್ನು ಕಾರ್ಯಕ್ರಮದಲ್ಲಿ ಶಿಕ್ಷಕರು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಬಸವರಾಜ ತೊಂತನಾಳ, ವಿದ್ಯಾನಿಕೇತನ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ವಿನಯ್ ಕುಮಾರ್ ಹಿರೇಮಠ್, ಪ್ರೆಸಿಡೆನ್ಸಿ ಪದವಿ ಮಹಾ ವಿದ್ಯಾಲಯದ ಪ್ರಾಚಾರ್ಯರಾದ ಅಶೋಕ ಗುಡದೂರು, ಉಪನ್ಯಾಸಕರಾದ ಶ್ರೀಧರ್ ಗುಡಿ, ಮನೋಹರ್ ಅಮರೇಶ್ ನಾಯಕ ಮುಂತಾದ ಉಪನ್ಯಾಸಕರು ಉಪಸ್ಥಿತರಿದ್ದರು.
Tags
ಜಿಲ್ಲಾ ಸುದ್ದಿಗಳು