ಭಾರತೀಯ ಸೇನಾ ದಿನಾಚರಣೆ ಹಾಗೂ ಮಕರ ಸಂಕ್ರಾಂತಿ ಹಬ್ಬ ಸಸಿ ನೆಡುವ ಮೂಲಕ ಆಚರಣೆ



ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ 
UDAYAVANI NEWS 
ಮಸ್ಕಿ, ಜನವರಿ 16 : ಬಳಗಾನೂರ ಪಟ್ಟಣದಲ್ಲಿ ವಿವಿಧೆಡೆ ಭಾರತೀಯ ಸೇನಾ ದಿನಾಚರಣೆ ಹಾಗೂ ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಭಾನುವಾರ ಬಳಗಾನೂರ ಪಟ್ಟಣದ ಶ್ರೀ ದುರ್ಗಾದೇವಿಗೆ ಪೂಜೆ ಸಲ್ಲಿಸಿ ದೇವಸ್ಥಾನದ ಮುಂಭಾಗದಲ್ಲಿ ಸಸಿ ನೆಡುವ ಮೂಲಕ ಕಾರ್ಯಕ್ರಮಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.

ಪ್ರಕೃತಿ ಫೌಂಡೇಶನ್ (ರಿ) ಮಸ್ಕಿ ವತಿಯಿಂದ ಭಾರತೀಯ ಸೇನಾ ದಿನಾಚರಣೆ ಹಾಗೂ ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಭಾನುವಾರ ಬಳಗಾನೂರ ಪಟ್ಟಣದ ಶ್ರೀ ದುರ್ಗಾದೇವಿಗೆ ಪೂಜೆ ಸಲ್ಲಿಸಿ ದೇವಸ್ಥಾನದ ಮುಂಭಾಗದಲ್ಲಿ ಅರಳಿ ಹಾಗೂ ಬೇವಿನ ಸಸಿ ಹಚ್ಚಿ ಪೊಲೀಸ್ ಠಾಣೆ ಸಿಬ್ಬಂದಿಗಳಿಗೆ ಸಸಿ ಜೊತೆಗೆ ಸಿಹಿ ಹಂಚಿ ಈ ದಿನ ದೇಶವನ್ನು ರಕ್ಷಿಸಲು ತಮ್ಮ ಜೀವವನ್ನು ತ್ಯಾಗ ಮಾಡಿದ ಭಾರತೀಯ ವೀರ ಯೋಧರಿಗೆ ಗೌರವ ಸಮರ್ಪಿಸೋಣ ಈ ದಿನ ರೈತ ಕಾಯಕದ ಸಂಭ್ರಮಕ್ಕೆ ಸಾಕ್ಷಿಯಾಗಿರುವ ಸುಗ್ಗಿಯ ಹಬ್ಬ ನಾಡಿನೆಲ್ಲೆಡೆ ನೆಮ್ಮದಿ ನೆಲೆಸಿ, ಎಲ್ಲರ ಬದುಕಿನಲ್ಲಿ ಸುಖ, ಸಂತೋಷ, ಸಮೃದ್ಧಿಯನ್ನು ಹೊತ್ತು ತರಲೆಂದು ಶುಭ ಹಾರೈಸಲಾಯಿತು ಎಂದು ಪ್ರಕೃತಿ ಫೌಂಡೇಶನ್ (ರಿ) ಮಸ್ಕಿ ಸಂಸ್ಥಾಪಕ ಅಧ್ಯಕ್ಷರು ಆದ ಶಿವಮೂರ್ತಿ ಗದ್ಗಿಮಠ ಕಾರ್ಯಕ್ರಮದ ಕುರಿತು ಸ್ವ ವಿವರವಾಗಿ ಮಾತನಾಡಿ ಶುಭ ಕೋರಿದರು.

ಈ ಸಂದರ್ಭದಲ್ಲಿ ಬಿ.ಮೌನೇಶ್, ಹನುಮೇಶ್, ಪಾಂಡುರಂಗ,ಸಂದೀಪ್,ಪಿರಮದ್,ಹಾಗೂ ಪ್ರಕೃತಿ ಫೌಂಡೇಶನ್ ಪದಾಧಿಕಾರಿಗಳು ಊರಿನ ಹಿರಿಯರು ಯುವಕರು ಭಾಗಿಯಾಗಿದ್ದರು.

Post a Comment

Previous Post Next Post