ಹುಣಸಗಿ ವಿವಿಧೆಡೆ ಸಿದ್ದೇಶ್ವರ ಶ್ರೀಗಳಿಗೆ ಶ್ರದ್ಧಾಂಜಲಿ


ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ 
UDAYAVANI NEWS 
ಹುಣಸಗಿ, ಜನವರಿ 03 : ಪಟ್ಟಣದ ವಿವಿಧ ಸಂಘ, ಸಂಸ್ಥೆ,   ಹಾಗೂ ಖಾಸಗಿ ಶಾಲೆಗಳಲ್ಲಿ ಲಿಂಗೈಕ್ಯೆ ಪರಮ ಪೂಜ್ಯ ಶ್ರೀ ಸಿದ್ದೇಶ್ವರ ಶ್ರೀಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮೌನಾಚಾರಣೆ ಮಾಡುವ  ಮೂಲಕ ಶ್ರೀಗಳಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

 ಸ್ಪಂದನಾ ಶಾಲೆಯ ಸಂಸ್ಥೆಯ ಅಧ್ಯಕ್ಷ ಮುರಿಗೆಣ್ಣ ದೇಸಾಯಿ ಮಾತನಾಡಿ, ನಾಡಿನ ಪ್ರಸಿದ್ಧ ವಾಗ್ಮಿ, ಜ್ಞಾನ ದಾಸೋಹಿ,  ಅಪರೂಪದ ಸಂತರು, ಅನನ್ಯ ಜ್ಞಾನಯೋಗಿ ಆಗಿರುವ ವಿಜಯಪುರ ಜಿಲ್ಲೆಯ ಜ್ಞಾನಯೋಗಾಶ್ರಮದ ಪ.ಪೂ. ಶ್ರೀ ಸಿದ್ಧೇಶ್ವರ ಸ್ವಾಮೀಜಿ ಅವರು ಹಲವು ದಿನಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದು . ಉತ್ತರ ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ, ಆಂಧ್ರಪ್ರದೇಶದಲ್ಲಿ ವಾಸಿಸುತ್ತಿರುವ ಭಕ್ತರು ಶ್ರೀಗಳ ಅನಾರೋಗ್ಯ ವಿಚಾರಿಸುವುದರ ಜೊತೆಗೆ  ದರ್ಶನವನ್ನು ಪಡೆಯತಿದ್ದರು ಆದರೆ ಸೋಮವಾರ ವೈಕುಂಠ ಏಕಾದಶಿ ದಿನದಂದು ಅಪಾರ ಭಕ್ತರನ್ನು  ಅಗಲಿದ್ದು ನಾಡಿನ ಭಕ್ತರಿಗೆ ಅವರು ಮಾಡಿದಂತಹ ಜ್ಞಾನಾರ್ಜನೆಯ ಸೇವೆಯು ಪ್ರತಿಯೊಬ್ಬರ ಜೀವನದಲ್ಲಿ ಅಳವಡಿಸಿಕೊಳ್ಳುವಂತಹುದಾಗಿದ್ದು. ಅವರ ಒಂದು ಮರಣದಲ್ಲಿ " ನೋಡು ಶರಣರ ಗುಣ ಎನ್ನುವಂತಾಗಿದೆ,"  ಅವರ ನಡೆದು ಬಂದ  ಸಿದ್ದಾಂತದ ಹಾದಿಯಲ್ಲಿ ನಾವೆಲ್ಲರೂ ನಡೆಯೋಣ ಎಂದರು. 


ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಗುತ್ತೇದಾರ , ವಿನಯ ಜೋಶಿ, ಗುರು ಮಡಿವಾಳರ, ಉಮೇಶ್ ರೇಶ್ಮಿ, ಶಿಕ್ಷಕರಾದ, ಸ್ವಪ್ನ,ಸೌಂದರ್ಯ, ಪಲ್ಲವಿ ಮತ್ತು ಮಕ್ಕಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Post a Comment

Previous Post Next Post