6 ತಿಂಗಳ ಡಾಂಬರ್ ರಸ್ತೆ ತೀರಾ ಕಳಪೆ ಕಾಮಗಾರಿ,ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲು ಶರಣ ಬಸವ ಆಕ್ರೋಶ


ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ 
UDAYAVANI NEWS 
ಮಸ್ಕಿ, ಜನವರಿ 02 : ತಾಲೂಕಿನ ಮುದಬಾಳ ಕ್ರಾಸ್ ನಿಂದ ಉಸ್ಕಿಹಾಳ ಗ್ರಾಮದ ವರೆಗೆ 1.40 ಕೋಟಿ ರೂಪಾಯಿ ಮೊತ್ತದ 8 ಕಿ. ಮೀ ರಸ್ತೆ 
6 ತಿಂಗಳ ಹಿಂದೆ ಡಾಂಬರೀಕರಣ ಮಾಡಿದ್ದು,ಎಲ್ಲೆಂದರಲ್ಲಿ ತಗ್ಗು ಗುಂಡಿ ಬಿದ್ದಿದ್ದು ಸಾರ್ವಜನಿಕರ ಓಡಾಟಕ್ಕೆ ತುಂಬಾ ತೊಂದರೆಯನ್ನುಂಟು ಮಾಡುತ್ತಿದೆ ಎಂದು ಪತ್ರಿಕೆಯ ಮೂಲಕ ಶರಣ ಬಸವ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುದಬಾಳ ಕ್ರಾಸ್ ನಿಂದ ಉಸ್ಕಿಹಾಳ ಗ್ರಾಮದ ವರೆಗೆ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ ಜಿಲ್ಲಾ ಪಂಚಾಯತ್ ಉಪ ವಿಭಾಗ ಲಿಂಗಸ್ಗೂರು ಅನುದಾನದಲ್ಲಿ 1.40 ಕೋಟಿ ರೂಪಾಯಿ ಮೊತ್ತದ 8 ಕಿ. ಮೀ ವರೆಗೆ 6 ತಿಂಗಳ ಹಿಂದೆ ಡಾಂಬರೀಕರಣ ಮಾಡಿದ್ದು,ತೀರಾ ಕಳಪೆ ಮಟ್ಟದ ಕಾಮಗಾರಿಯಾಗಿದ್ದು, ತಗ್ಗು ಗುಂಡಿ ಬಿದ್ದಿದ್ದು ರಸ್ತೆಯೂ ಹದಗೆಟ್ಟಿದ್ದು ದಿನ ನಿತ್ಯವೂ ಸಾರ್ವಜನಿಕರು ಆ ಮಾರ್ಗವಾಗಿ ಜೀವ ಭಯದಲ್ಲೇ ಸವಾರಿ ಮಾಡುತ್ತಿದ್ದಾರೆ. ಮುದಬಾಳ - ಮಾರಲ ದಿನ್ನಿ ಮಾರ್ಗದಲ್ಲಿ ಸಚಿವರು,ಶಾಸಕರು,ಜಿಲ್ಲಾಧಿಕಾರಿಗಳು ಎಲ್ಲಾ ವರ್ಗದ ಅಧಿಕಾರಿಗಳು ಸವಾರಿ ನಡೆಸಿದ್ದಾರೆ.ಕಂಡು ಕಾಣದೇ, ಕಣ್ಣಿದ್ದು ಕುರುಡರಂತೆ ಓಡಾಡುವ ಅಧಿಕಾರಿ ವರ್ಗ ದವರಿಗೆ ಸಾರ್ವಜನಿಕರ ಗೋಳು ಕಾಣುವುದಿಲ್ಲವೇ ಎಂದು ಆ ಮಾರ್ಗವಾಗಿ ಸಂಚರಿಸುವ ಸಾರ್ವಜನಿಕರ ನೋವಿನ ಮಾತಾಗಿದೆ. ಈ ಹಿಂದೆ ತ್ರಿವೇಣಿ ಎಂಬ ಜೆ ಇ ಕಾಮಗಾರಿಯ ಪರಿಶೀಲನೆ ಮಾಡಲು ಬರುತ್ತಿದ್ದರು ಆದರೆ ಕಾಮಗಾರಿ ಮುಗಿದು 6 ತಿಂಗಳಾದರೂ ಪತ್ತೆ ಇಲ್ಲ. ವರದಿಗೆ ಎಚ್ಚೆತ್ತುಕೊಂಡು ರಸ್ತೆ ಸರಿಪಡಿಸುವ ಕಾರ್ಯ ಮಾಡುತ್ತಾರಾ ಎಂದು ಕಾದು ನೋಡಬೇಕಿದೆ ಎಂದು ಶರಣಬಸವ ಪತ್ರಿಕೆಗೆ ತಿಳಿಸಿದ್ದಾರೆ.
ಹೇಳಿಕೆ -1

ಮುದಬಾಳ ಕ್ರಾಸ್ ನಿಂದ ಉಸ್ಕಿಹಾಳ ಗ್ರಾಮದ ವರೆಗೆ 8 ಕಿ. ಮೀ ರಸ್ತೆ 6 ತಿಂಗಳ ಹಿಂದೆ ಡಾಂಬರೀಕರಣ ಮಾಡಿದ್ದು,ಸಾರ್ವಜನಿಕರ ಕರೆಗೆ ಯಾವುದೇ ರೀತಿಯ ಸ್ಪಂದನೆ ನೀಡಿಲ್ಲ.ತೀರಾ ಕಳಪೆ ಮಟ್ಟದ ಕಾಮಗಾರಿಯಾಗಿದ್ದು, ರಸ್ತೆಯೂ ಹದಗೆಟ್ಟಿದ್ದು, ಒಂದು ಕೋಟಿ ನಲ್ವತ್ತು ಲಕ್ಷ ರೂಪಾಯಿ ಮೊತ್ತದ ಹಣವನ್ನು ಹುಣಸೆ ಹಣ್ಣಿನಿಂದ ನೀರಿನಲ್ಲಿ ತೊಳೆದಂತೆ ಆಗಿದೆ. ಆ ಮಾರ್ಗವಾಗಿ ಸಚಿವರು ಮತ್ತು ಎಂಎಲ್ಎ,ಜಿಲ್ಲಾಧಿಕಾರಿ ಗಳು ಓಡಾಡಿದರು ಕಾಳಜಿವಹಿಸುವುದೇನು ಕ್ಯಾರೇ ಎನ್ನದ ಅಧಿಕಾರಿಗಳು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಸಂಭಂದಪಟ್ಟ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಿ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಕಾಟಗಲ್ ಗ್ರಾಮ ಘಟಕದ ಅಧ್ಯಕ್ಷ ಶರಣ ಬಸವ ಮಾದ್ಯಮ ಹೇಳಿಕೆ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Post a Comment

Previous Post Next Post