ವಿದ್ಯಾರ್ಥಿ ಆತ್ಮಹತ್ಯೆ ಪೊಲೀಸರಿಂದ ಪ್ರಕರಣ ದಾಖಲು


ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ
ವರದಿ : ಡಿ.ವಿ ರಮೇಶ್ ಕುಮಾರ್
ಬಾಗೇಪಲ್ಲಿ, ಡಿಸೆಂಬರ್ 15 : ಪಟ್ಟಣದ ಹೊರವಲಯದ ಕೊಡಿಕೊಂಡೆ ರಸ್ತೆಯ ಚಿತ್ರಾವತಿ ನದಿ ದಡದಲ್ಲಿ ವಿದ್ಯಾರ್ಥಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಶೈಲಿಯಲ್ಲಿ ಸಾವನ್ನಪ್ಪಿದ್ದಾನೆ.
ಸುರೇಶ್ ಎಂಬ ವಿದ್ಯಾರ್ಥಿಯೇ ಸಾವಿಗೆ ಶರಣಾದ ರ್ದುದೈವಿಯಾಗಿದ್ದು, ಸದರಿ ವಿದ್ಯಾರ್ಥಿ ಪಟ್ಟಣದ ನ್ಯಾಷನಲ್ ಕಾಲೇಜಿನಲ್ಲಿ ಎರಡನೇ ಬಿ.ಕಾಂ.ನಲ್ಲಿ ವ್ಯಾಸಂಗ ಮಾಡುತ್ತಿದ್ದು, ಪಾತಪಾಳ್ಯ ಹೋಬಳಿ ಸಿಂಗಪ್ಪಗಾರಿಪಲ್ಲಿ ಗ್ರಾಮದ ನರಸಿಂಹಪ್ಪ ಎಂಬುವರ ಮಗನಾಗಿದ್ದ ಸುರೇಶ್ ಎಂಬುದಾಗಿ ತಿಳಿದುಬಂದಿದ್ದು, ಪಟ್ಟಣದ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡದ ವಿದ್ಯಾರ್ಥಿನಿಲಯದಲ್ಲಿ ಉಳಿದುಕೊಂಡಿದ್ದ ಎನ್ನಲಾಗಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ, ಪ್ರಕರಣವನ್ನು ದಾಖಲು ಮಾಡಿಕೊಂಡಿದ್ದಾರೆ, ಮೃತ ವಿದ್ಯಾರ್ಥಿಯ ಮೊಣಕಾಲಿನ ಮೇಲೆ ಗಾಯಗಳು ಮತ್ತು ಸುಟ್ಟ ಗಾಯಗಳಾಗಿದ್ದು, ಸಾರ್ವಜನಿಕರು ಆತ್ಮಹತ್ಯೆಯೋ? ಕೊಲೆಯೋ? ಎಂಬ ಸಂಶಯವನ್ನು ವ್ಯಕ್ತಪಡಿಸಿದ್ದಾರೆ.

Post a Comment

Previous Post Next Post