UDAYAVANI NEWS
ಸಿಂಧನೂರು, ಡಿಸೆಂಬರ್ 17 : ಪಟ್ಟಣದ ಪ್ರವಾಸಿ ಮಂದಿರದಲ್ಲಿ ಒಳ ಮೀಸಲಾತಿ ಜಾರಿಗೆ ತರಲು ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಲು ಒತ್ತಾಯಿಸಿ ಫ್ರೀಡಂ ಪಾರ್ಕ್ ಚಲೋ ಪಾದಯಾತ್ರೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದ ದಲಿತ ಸಂರಕ್ಷ ಸಮಿತಿಯ ಸಿಂಧನೂರು ತಾಲೂಕಾ ಅಧ್ಯಕ್ಷರಾದ ಮೌಲಪ್ಪ ಐಹೊಳೆ ಇವರನ್ನು ಮಾದಿಗ ಸಮುದಾಯವು ಸನ್ಮಾನಿಸಿ ಗೌರವಿಸಿದೆ.
ಸಾಮಾಜಿಕ ನ್ಯಾಯಕ್ಕಾಗಿ ಒಳ ಮೀಸಲಾತಿ ಜಾರಿಗೆ ತರಲು ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ದಿನಾಂಕ 28-11-2022 ದಿಂದ ಕೆಗೊಳ್ಳಲಾಗಿದ್ದ ಹರಿಹರದಿಂದ ಫ್ರೀಡಂ ಪಾರ್ಕ್ ವರೆಗೆ 11-12-2022 ವರೆಗೆ ಪಾದಯಾತ್ರೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದ ದಲಿತ ಸಂರಕ್ಷ ಸಮಿತಿಯ ಸಿಂಧನೂರು ತಾಲೂಕಾ ಅಧ್ಯಕ್ಷರಾದ ಮೌಲಪ್ಪ ಐಹೊಳೆ ಯವರನ್ನು ಮಾದಿಗ ಸಮುದಾಯದ ಮುಖಂಡರು ಸನ್ಮಾನಿಸಿ ಬುದ್ಧ ಬಸವ ಅಂಬೇಡ್ಕರ ರವರ ಭಾವ ಚಿತ್ರದ ಫೋಟೋ ಉಡುಗೊರೆಯಾಗಿ ನೀಡಿದರು.
Tags
ಜಿಲ್ಲಾ ಸುದ್ದಿಗಳು